Join The Telegram | Join The WhatsApp |
ಧಾರವಾಡ : ಅತಿವೃಷ್ಟಿಯಿಂದ ಕಂಗೆಟ್ಟ ಅನ್ನದಾತರಿಗೆ ಸದ್ಯ ಹಂದಿಗಳ ಕಾಟ ಹೆಚ್ಚಾಗಿದೆ. ಹೌದು ಧಾರವಾಡ ಜಿಲ್ಲೆ ಸಲಕೀನಕೊಪ್ಪ ಗ್ರಾಮದ ರೈತರು ಹಂದಿಗಳ ಹಾವಳಿಯಿಂದ ಬೇಸತ್ತು ಹೋಗಿದ್ದಾರೆ.
ಮಳೆಯ ಕಾಟದ ನಡುವೆ ಅಷ್ಟೋ ಇಷ್ಟೋ ಬಂದ ಬೆಳೆಗೆ ಹಂದಿಗಳ ಕಾಟ ಹೆಚ್ಚಾಗಿದೆ. ಕೊಯ್ಲು ಮಾಡಿಟ್ಟ ಭತ್ತವನ್ನೇಲ್ಲಾ ಹಾಳು ಮಾಡುತ್ತಿವೆ.ಈ ಸಂಬಂಧ ಪಂಚಾಯಿಗೆ ದೂರು ನೀಡಿದ್ರು ಯಾವುದೇ ಪ್ರಯೋಜನವಾಗಿಲ್ಲ. ಮಾತ್ರವಲ್ಲದೆ ಹಿಂಡು ಹಿಂಡಾಗಿ ಓಡಾಡುವ ಈ ಹಂದಿಗಳಿಗೆ ವಾರಸುದಾರರೇ ಇಲ್ಲವಾಗಿದೆ.
ಸದ್ಯ ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ವಾರಸುದಾರರಲಿಲ್ಲದ ಹಂದಿಗಳನ್ನು ಸೆರೆ ಹಿಡಿದು ರೈತನ ಕಷ್ಟಕ್ಕೆ ಧ್ವನಿಯಾಗಬೇಕಿದೆ.
ವರದಿ: ವಿನಾಯಕ ಗುಡ್ಡದಕೇರಿ
Join The Telegram | Join The WhatsApp |