ಆರೋಗ್ಯವಾಗಿರಲು ವ್ಯಾಯಾಮ ಬಹಳ ಮುಖ್ಯ, ಆದರೆ ನಮ್ಮ ಜೀವನಶೈಲಿಯಿಂದಾಗಿ, ನಾವು ಅದನ್ನು ಮಾಡಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕಾಗಿ, ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ನೀವು ಬೇರೆಲ್ಲಾ ವ್ಯಾಯಾಮ ಮಾಡೋದು ಬಿಟ್ಟು, ಲಿಫ್ಟ್ ಬಿಟ್ಟು ಮೆಟ್ಟಿಲೇರೋದನ್ನು ಕಲಿಯಿರಿ. ಇದರಿಂದ ತುಂಬಾನೆ ಲಾಭ ಇದೆ.
ಬದಲಾಗುತ್ತಿರುವ ನಮ್ಮ ಜೀವನಶೈಲಿಯಲ್ಲಿ ಆರೋಗ್ಯಕರವಾಗಿ ಉಳಿಯುವುದು ಒಂದು ಸವಾಲಿನ ಕೆಲಸ. ಇದಕ್ಕಾಗಿ ನಾವು ಎಷ್ಟು ಹಣವನ್ನು ಖರ್ಚು ಮಾಡುತ್ತೇವೆ? ಜಿಮ್ ಗೆ ಸೇರಿ, ಆಹಾರ ಕ್ರಮವನ್ನು ಅಳವಡಿಸಿಕೊಳ್ಳುತ್ತೇವೆ, ಹೀಗೆ ಏನೇನೋ ಮಾಡುತ್ತೇವೆ. ಆದರೆ ಹಣವನ್ನು ಖರ್ಚು ಮಾಡದೆ ಮತ್ತು ಪ್ರತ್ಯೇಕವಾಗಿ ಸಮಯ ತೆಗೆದುಕೊಳ್ಳದೆ ನಿಮ್ಮ ಜೀವನಶೈಲಿಯಲ್ಲಿ ನೀವು ಅಳವಡಿಸಿಕೊಳ್ಳಬಹುದಾದ ವ್ಯಾಯಾಮವೂ ಇದೆ.
ನಿಮ್ಮ ದೈನಂದಿನ ಅಭ್ಯಾಸಗಳಲ್ಲಿ ನೀವು ಸಣ್ಣ ಬದಲಾವಣೆ ಮಾಡಬೇಕು. ಎಸ್ಕಲೇಟರ್ ಅಥವಾ ಎಲಿವೇಟರ್ ಗಳ ಬದಲು ಮೆಟ್ಟಿಲುಗಳನ್ನು ಬಳಸಲು ಪ್ರಾರಂಭಿಸಬೇಕು. ಹತ್ತುವುದು ನಿಮಗೆ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಪ್ರಯೋಜನಗಳನ್ನು ನೀಡುತ್ತದೆ.
ಆದರೆ, ಮೆಟ್ಟಿಲುಗಳನ್ನು ಏರುವಾಗ, ಆರಾಮದಾಯಕ ಪಾದರಕ್ಷೆಗಳನ್ನು ಧರಿಸಿ ಇದರಿಂದ ನೀವು ಬೀಳುವುದಿಲ್ಲ ಮತ್ತು ಸೊಂಟ ಮತ್ತು ಕಾಲುಗಳಲ್ಲಿ ಯಾವುದೇ ನೋವು ಇರುವುದಿಲ್ಲ. ಹಲವು ಪ್ರಯೋಜನಗಳಿವೆ.
ಮೆಟ್ಟಿಲುಗಳನ್ನು ಹತ್ತುವುದು ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಕೊಲೆಸ್ಟ್ರಾಲ್ ಹೃದ್ರೋಗಗಳಿಗೆ ಮಾತ್ರವಲ್ಲ, ಮಧುಮೇಹಕ್ಕೂ ಕಾರಣವಾಗಬಹುದು. ಮೆಟ್ಟಿಲುಗಳನ್ನು ಹತ್ತುವುದು ಮಧುಮೇಹದ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.
ಚೆನ್ನಾಗಿ ನಿದ್ರೆ ಬರುತ್ತೆ
ಮೆಟ್ಟಿಲುಗಳನ್ನು ಹತ್ತೋದ್ರಿಂದ ದೇಹವು ದಿನವಿಡೀ ಆರಾಮವಾಗಿರುತ್ತದೆ ಮತ್ತು ನಿಮ್ಮ ಮಾನಸಿಕ ಆರೋಗ್ಯವೂ ಉತ್ತಮವಾಗಿರುತ್ತದೆ. ಈ ಕಾರಣಕ್ಕಾಗಿ, ನೀವು ಉತ್ತಮ ನಿದ್ರೆಯನ್ನು ಸಹ ಪಡೆಯುತ್ತೀರಿ. ಇದು ನಿದ್ರಾಹೀನತೆಯ ಸಮಸ್ಯೆಗೂ ಸಹಾಯ ಮಾಡುತ್ತದೆ.
ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿ
ವ್ಯಾಯಾಮವು ನಿಮ್ಮ ದೇಹದಲ್ಲಿ ಸಂತೋಷದ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಮೆಟ್ಟಿಲುಗಳನ್ನು ಹತ್ತುವುದು ನಿಮ್ಮೊಳಗೆ ಎಂಡಾರ್ಫಿನ್ಗಳನ್ನು ಸೃಷ್ಟಿಸುತ್ತದೆ ಮತ್ತು ನಿಮಗೆ ಉತ್ತಮ ಭಾವನೆಯನ್ನು ನೀಡುತ್ತದೆ. ಇದರೊಂದಿಗೆ, ಮೆಟ್ಟಿಲುಗಳನ್ನು ಹತ್ತುವುದು ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ದೇಹಕ್ಕೆ ಶಕ್ತಿ ನೀಡುತ್ತೆ. ಇದರಿಂದ ನೀವು ಸಂತೋಷವಾಗಿರುತ್ತಿರಿ ಮತ್ತು ಮಾನಸಿಕ ಆರೋಗ್ಯವು ಉತ್ತಮವಾಗಿರುತ್ತದೆ.
ಕೀಲುಗಳನ್ನು ಬಲಪಡಿಸುತ್ತದೆ
ಮೆಟ್ಟಿಲುಗಳನ್ನು ಹತ್ತುವುದು ಸ್ನಾಯುಗಳನ್ನು ಬಲಪಡಿಸುತ್ತದೆ. ಮೆಟ್ಟಿಲುಗಳನ್ನು ಏರುವಾಗ, ಕಾಲುಗಳು, ತೊಡೆಗಳು, ಸೊಂಟ ಮತ್ತು ಮೊಣಕಾಲುಗಳ ಸ್ನಾಯುಗಳನ್ನು ಬಳಸಲಾಗುತ್ತದೆ, ಇದು ಅವುಗಳನ್ನು ಬಲಪಡಿಸುತ್ತದೆ. ಮೆಟ್ಟಿಲುಗಳನ್ನು ಹತ್ತುವುದು ಸಮತೋಲನವನ್ನು ಹೆಚ್ಚಿಸುತ್ತದೆ. ಇದು ದೈಹಿಕ ಚಟುವಟಿಕೆಗಳ ಕೊರತೆಯಿಂದ ಉಂಟಾದ ಅಸ್ಥಿಸಂಧಿವಾತದ ಸಾಧ್ಯತೆಗಳನ್ನು ಸಹ ಕಡಿಮೆ ಮಾಡುತ್ತದೆ.
ತೂಕ ನಷ್ಟ
ಆರೋಗ್ಯವಾಗಿರಲು ಆರೋಗ್ಯಕರ ಹೊಂದಿರುವುದು ಬಹಳ ಮುಖ್ಯ. ಮೆಟ್ಟಿಲುಗಳನ್ನು ಹತ್ತುವುದು ಕ್ಯಾಲರಿ ಬರ್ನ್ ಮಾಡುತ್ತೆ ಮತ್ತು ತೂಕವನ್ನು ಕಾಪಾಡಿಕೊಳ್ಳುತ್ತದೆ. ಪ್ರತಿದಿನ ಅರ್ಧ ಗಂಟೆ ಮೆಟ್ಟಿಲುಗಳನ್ನು ಹತ್ತುವುದರಿಂದ ತೂಕವನ್ನು ಕಡಿಮೆ ಮಾಡಬಹುದು.