Join The Telegram | Join The WhatsApp |
ಸೇಡಂ: ಮಾನ್ಯ ಸೇಡಂ ಶಾಸಕರು ಇವರು 2018 ರಂದು ನಮ್ಮ ಗ್ರಾಮಕ್ಕೆ ಬಂದು ನನಗೆ ಒಂದು ಅವಕಾಶ ನೀಡಿ ನಿಮ್ಮ ಗ್ರಾಮವನ್ನು ಸರ್ವತೋಮುಖ ಅಭಿವೃದ್ಧಿಯತ್ತ ಕೊಂಡೋಯುತ್ತೇನೆ ಎಂದು ಕೈ ಮುಗಿದು ಭರವಸೆ ನೀಡಿದರು.
ನಾವುಗಳು ಗ್ರಾಮದ ಜನರನ್ನು ಉರಿದುಂಬಿಸಿ ಮೂರು ಬಾರಿ ಹಾಲಿ ಶಾಸಕರನ್ನು ಆಯ್ಕೆ ಮಾಡಿದ್ದೀರಿ ಈ ಒಂದು ಸರಿ ನೋಡಿ ನಮ್ಮ ನಾಯಕರನ್ನು ಎಂದು ಅವರನ್ನು ಕೇಳಿದಾಗ ನಮ್ಮ ಮಾತಿಗೆ ಬೆಲೆಕೊಟ್ಟು ನಮ್ಮ ಊರಿನ ಮತಗಳಲ್ಲಿ ಅತಿ ಹೆಚ್ಚು ಮತಗಳು ನಮ್ಮ ಪರವಾಗಿ ಬಿದ್ದವು ಹಾಗೆ ತಾಲೂಕಿನಲ್ಲಿ ನಮ್ಮವರೇ ಶಾಸಕರಾದರು ನಾವು ಭಾವಿಸಿದ್ದೆವು ನಮ್ಮ ಗ್ರಾಮ ಈಗ ಅಭಿವೃದ್ಧಿ ಕಾಣುತ್ತದೆಂದು ಆದರೆ ಹಾಗೆ ಅಗಲ್ಲಿಲ್ಲ ನಾವು ಸುಮಾರು ಸರಿ ಶಾಸಕರ ಹತ್ತಿರ ದೊಡ್ಡ ದೊಡ್ಡ ಲಿಸ್ಟ್ ತೆಗೆದುಕೊಂಡೊದೆವು ಏನು ಪ್ರಯೋಜನ ವಾಗಲ್ಲಿಲ್ಲ ಸುಮರು ಸರಿ ಕೇಳಿದೇವು ಆದರು ನೀವು ಇಲ್ಲಿ ಬಂದು ಕೇಳಬೇಡಿ? ನೀವು ಶಾಸಕರ ಕಾರ್ಯಾಲಯದ ಕಂಪ್ಯೂಟರ್ ನಲ್ಲಿ ಇಟ್ರಿ ಮಾಡಿ ಎಂದು ಹೇಳುವರು ನಾವು ಕಂಪ್ಯೂಟರ್ ನಲ್ಲಿ ಇಟ್ರಿ ಮಾಡಿದರೆ ಇಂದಿಗೂ ನಾಲ್ಕು ವರ್ಷವಾದರೂ ನಮಗೆ ಯಾವುದೇ ಅಭಿವೃದ್ಧಿ ಕಾಣಲಿಲ್ಲ ಊರಿನವರಿಗೆ ನಾವು ಬೇಡವೇನೀಸಿದೆವು ತಾಲೂಕಿಗೆ ತಿರಗಿ ತಿರಗಿ ಸಾಕಾಯಿತು.
ಮುಂದಿನ ಆಯ್ಕೆ ನಿಮ್ಮದು ಯಾರನ್ನು ಬಯಸುತ್ತಿರಿ ನಿಮಗೆ ಬಿಟ್ಟಿದ್ದು ಇದರಲ್ಲಿ ಯಾರನ್ನೂ ದ್ವೇಷಿಸುವ ಉದ್ದೇಶ ಅಲ್ಲ ಯಾರು ಅನ್ಯತೆ ಭಾವಿಸಬೇಡಿ ನಮ್ಮ ಗ್ರಾಮ ಅಭಿವೃದ್ಧಿ ಹೊಂದಿದ್ದಾರೆ ನಮ್ಮ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಬಾವಿಸುತ್ತೇನೆ ಇದರಲ್ಲಿ ಏನಾದರು ತಪ್ಪುಗಳಿದ್ದಾರೆ ದಯವಿಟ್ಟು ಕ್ಷಮಿಸಿ ದನ್ಯವಾದಗಳು ಎಂದು ಕಿಷ್ಟಪೂರ್ ಗ್ರಾಮ ಪಂಚಾಯಿತಿ ಸದಸ್ಯರಾದ ನರಸಪ್ಪ ಕೊಸ್ಕಿ ಅವರು ತಮ್ಮ ಮನದಾಳದ ಮಾತುಗಳು ಪತ್ರಿಕಾ ಪ್ರಕಟಣೆಯಲ್ಲಿ ಹಂಚಿಕೊಂಡಿದ್ದಾರೆ.
ವರದಿ : ವೆಂಕಟಪ್ಪ ಕೆ ಸುಗ್ಗಾಲ್
Join The Telegram | Join The WhatsApp |