ಲಿಂಗಸೂರು : ರಾಜ್ಯದಲ್ಲಿ ಬಹು ಸಮಯ ದಿಂದ ನನೆಗುದಿಗೆ ಬಿದ್ದಿದ್ದ ನಿಗಮ-ಮಂಡಳಿ ನೇಮಕಾತಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ.
ಇದೀಗ ಶಾಸಕರು, ಮೇಲ್ಮನೆ ಸದಸ್ಯರು ಮತ್ತು ಕಾರ್ಯ ಕರ್ತರನ್ನು ಒಳಗೊಂಡ ಪಟ್ಟಿಯನ್ನು ಸಿದ್ಧ ಪಡಿಸಲಾಗಿದ್ದು, ಸದ್ಯವೇ 45ರಿಂದ 50 ಮಂದಿಯನ್ನು ನಿಗಮ ಮಂಡಳಿಗೆ ನೇಮಕ (Congress Politics) ನಡೆಯಲಿದೆ.
ನಿಗಮ-ಮಂಡಳಿ ನೇಮಕ ವಿಚಾರದಲ್ಲಿ ಯಾರಿಗೆ ಅವಕಾಶ ನೀಡಬೇಕು ಎನ್ನುವ ಬಗ್ಗೆ ಗೊಂದಲವಿತ್ತು. ಮಂತ್ರಿ ಸ್ಥಾನ ಸಿಗದೆ ಇದ್ದ ಶಾಸಕರಿಗೆ ಇದನ್ನು ನೀಡುವ ಬಗ್ಗೆ ಹೆಚ್ಚು ಒಲವು ಇತ್ತು. ಆದರೆ, ಕಾರ್ಯಕರ್ತರಿಗೆ ನೀಡಬೇಕು ಎಂಬ ಬಗ್ಗೆ ಭಾರಿ ಬೇಡಿಕೆಗಳಿವೆ. ಅದರಲ್ಲೂ ಮುಖ್ಯವಾಗಿ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಸೋತವರು ಮುಂದಿನ ಚುನಾವಣೆಯ ಸಿದ್ಧತೆಗಾಗಿ ಸ್ಥಾನಮಾನವನ್ನು ಬಯಸುತ್ತಿದ್ದಾರೆ.
ಅದರಂತೆ ಸಾರ್ವತ್ರಿಕಾ ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಎಸ್ ಹೂಲಿಗೇರಿಯವರು ಸುಮಾರು ೫೬ ಸಾವಿರ ಮತಗಳು ಪಡೆದು, ಸ್ವಲ್ಪ ಅಂತರದಿಂದ ಕೆಲ ಕಾಂಗ್ರೆಸ್ ಪಕ್ಷದ ಮುಖಂಡರ ಕುತಂತ್ರದಿಂದ ಕೊನೆ ಗಳಿಗೆಯಲ್ಲಿ ಸೋಲನ್ನು ಕಂಡಿದ್ದಾರೆ. ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಗಟ್ಟಿಗೊಳಿಸುವಸಬೇಕೆಂದು ಕಾಂಗ್ರೇಸ್ ಮುಖಂಡ ಹಾಗೂ ಅವರ ಕಟ್ಟಾ ಅಭಿಮಾನಿಗಳು ಹಾಗೂ ನಿಷ್ಠಾವಂತ ಕಾಯ೯ಕತ೯ರ ಬೇಡಿಕೆ ಹಾಗೂ ಲಿಂಗಸೂರು ಕ್ಷೇತ್ರದ ವನ್ನು ಅಭಿವೃದ್ಧಿ ಪಥದತ್ತ ನೋಡುವಂತೆ ಮಾಡಿದ ಮಾಜಿ ಶಾಸಕ ರಾದ ಡಿ.ಎಸ್ ಹೂಲಿಗೇರಿ ನೀಡಿ ಎಂದು ಪ್ರಾಮಾಣಿಕ ಕಾಂಗ್ರೆಸ್ ಕಾಯ೯ಕತ೯ರ ಸರಕಾರಕ್ಕೆ ಒತ್ತಾಯವು ಇದೆ.
ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮುಂದಿನ ಲೋಕಸಭಾ ಚುನಾವಣೆ ಹಾಗೂ ಪುರಸಭೆ, ಪಟ್ಟಣ ಪಂಚಾಯತ, ತಾಲೂಕು, ಜಿಲ್ಲಾ ಪಂಚಾಯತ ಚುನಾವಣೆಯ ಸಂಘಟನೆಯ ದೃಷ್ಟಿಯಿಂದ ಹಾಗೂ ಲಿಂಗಸುಗೂರು ತಾಲೂಕಿನ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ರಕ್ಷಣೆಗಾಗಿ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ಮಾಜಿ ಶಾಸಕ ಡಿ.ಎಸ್. ಹೂಲಗೇರಿ ರವರಿಗೆ ಸಿಎಂ ಮ ಸಿದ್ದ ರಾಮಯ್ಯ ನರವರ ಸರಕಾರದಲ್ಲಿ ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕೆಂದು ಕೆಲವು ಸಚಿವರು ಹಾಗೂ ಶಾಸಕರು ರಾಯಚೂರು ಜಿಲ್ಲೆಯ ಲಿಂಗಸೂರು ನ ಮಾಜಿ ಶಾಸಕರಾದ ಹೂಲಿಗೇರಿ ಅವರಿಗೆ ನೀಡಿ ಎಂದು ಅಹವಾಲು (ವಿನಂತಿ) ಮಾಡಿದ್ದಾರೆ ಎಂದು ತಿಳಿದು ಬಂದಿದೆ ಹಾಗೂ ಲಿಂಗಸೂರು ನಿಷ್ಠಾವಂತ ಸಾವಿರಾರು ಕಾಯ೯ಕತ೯ರ ಆಶಯವಿದೆ ಎಂದು ತಿಳಿದು ಬಂದಿದೆ..
ವರದಿ: ಮಂಜುನಾಥ ಕುಂಬಾರ