Join The Telegram | Join The WhatsApp |
ಬೆಳಗಾವಿ: ರಾಜ್ಯ ಸರ್ಕಾರ ನಿರ್ಮಿಸಿರುವ, ಇದೇ ನವೆಂಬರ್ 11 ರಂದು ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಲಿರುವ, ೧೦೮ ಅಡಿ ಎತ್ತರದ, ಹೆಮ್ಮೆಯ ನಾಡಪ್ರಭು ಕೆಂಪೇಗೌಡರ ಕಂಚಿನ ಭವ್ಯ ಪ್ರತಿಮೆಯ ಅನಾವರಣ ಪ್ರಯುಕ್ತ ಪವಿತ್ರ ಮೃತಿಕೆಯನ್ನು, ಐತಿಹಾಸಿಕ ಮಹತ್ವ ಹೊಂದಿರುವ ಹಾಗೂ ಧಾರ್ಮಿಕ ಶ್ರದ್ಧಾ ಕ್ಷೇತ್ರಗಳಾದ ವಿಜಯನಗರ ಜಿಲ್ಲೆ ಹಂಪಿ, ಕೂಡಲ ಸಂಗಮ ಹಾಗೂ ಬೆಳಗಾವಿಯ ಕಿತ್ತೂರು ನಾಡಿನಿಂದ ಸಂಗ್ರಹಿಸಲು, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ, ಕಂದಾಯ ಸಚಿವ ಶ್ರೀ ಆರ್ ಅಶೋಕ್, ಯುವಜನ ಹಾಗೂ ಕ್ರೀಡಾ ಸಚಿವ ಶ್ರೀ ನಾರಾಯಣ ಗೌಡ ಮತ್ತು ಉನ್ನತ ಶಿಕ್ಷಣ ಸಚಿವ ಡಾ ಅಶ್ವಥ್ ನಾರಾಯಣ ಅವರು ಬೆಂಗಳೂರಿನಿಂದ, ಇಂದು ಮುಂಜಾನೆ, ಪ್ರಯಾಣ ಬೆಳೆಸಿದರು..
ಕಿತ್ತೂರಿಗೆ ಮದ್ಯಾಹ್ನ 2 ಗಂಟೆ ಹೊತ್ತಿಗೆ ಮಾನ್ಯ ಸಚಿವರೆಲ್ಲರು ಆಗಮಿಸಿ, ಐತಿಹಾಸಿಕ ನೆಲೆಯಾದ ಈ ಕಿತ್ತೂರು ನೆಲದಲ್ಲಿನ ಮಣ್ಣು ಸಂಗ್ರಹಿಸುವ ಕಾರ್ಯ ಪೂರ್ಣಗೊಳಿಸಿದರು..
ವರದಿ ಪ್ರಕಾಶ ಕುರಗುಂದ..
Join The Telegram | Join The WhatsApp |