Ad imageAd image

24ವರ್ಷಗಳ ಹಿಂದೆ 100 ರೂಪಾಯಿ ಕದ್ದ ವ್ಯಕ್ತಿಗೆ ಈಗ ಶಿಕ್ಷೆ 

Bharath Vaibhav
24ವರ್ಷಗಳ ಹಿಂದೆ 100 ರೂಪಾಯಿ ಕದ್ದ ವ್ಯಕ್ತಿಗೆ ಈಗ ಶಿಕ್ಷೆ 
WhatsApp Group Join Now
Telegram Group Join Now

ಚೆನ್ನೈ: ಮಾಡಿದ ತಪ್ಪನ್ನು ಮುಚ್ಚಿಟ್ಟರೂ ಅದಕ್ಕಾಗಿ ಪ್ರತಿಯೊಬ್ಬರೂ ಬೆಲೆ ತೆರಬೇಕು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಈ ಮಾತು ಈಗ ನಿಜವಾಗಿದೆ.

ಇಲ್ಲೊಬ್ಬ ಕಳ್ಳನಿಗೆ 24ವರ್ಷಗಳ ಹಿಂದೆ ಮಾಡಿದ ತಪ್ಪಿಗೆ ಈಗ ಶಿಕ್ಷೆ ವಿಧಿಸಲಾಗಿದೆಯಂತೆ. 24 ವರ್ಷಗಳ ಹಿಂದೆ ಕಳ್ಳತನ ಮಾಡಿದ ವ್ಯಕ್ತಿಯನ್ನು ಇತ್ತೀಚೆಗೆ ಚೆನ್ನೈ ಪೊಲೀಸರು ಬಂಧಿಸಿದ್ದಾರೆ.ಈ ಸುದ್ದಿ ಎಲ್ಲೆಡೆ ವೈರಲ್‌ ಆಗಿದೆ.

ಚೆನ್ನೈನಲ್ಲಿ 20 ವರ್ಷದವನಿದ್ದಾಗ ಗಣೇಶನ್ ಎಂಬ ವ್ಯಕ್ತಿ ಹಣ್ಣು ವ್ಯಾಪಾರಿಯ ಬಳಿ ಹಣವನ್ನು ಕದಿಯಲು ಪ್ಲ್ಯಾನ್‍ ಮಾಡಿದ. ಅದರಂತೆ ಆತ ಅಣ್ಣಾ ನಗರದ ಹಣ್ಣಿನ ವ್ಯಾಪಾರಿ ಕಣ್ಣನ್ ಅವರ ಬಳಿಗೆ ಹೋಗಿದ್ದಾನಂತೆ. ಅವನು ಕೈಯಲ್ಲಿ ಚಾಕುವನ್ನು ಹಿಡಿದು ಆತನ ಬಳಿ ಇರುವ ಹಣವನ್ನು ನೀಡುವಂತೆ ಕೇಳಿದ್ದಾನೆ.

 ಅವನು ಕಣ್ಣನ್ ಹೆದರಿಕೊಂಡು ಗಣೇಶನ್‍ಗೆ ನೂರು ರೂಪಾಯಿ ನೀಡಿದ್ದಾರಂತೆ. ಕಳ್ಳತನವಾದ ಕೂಡಲೇ ಕಣ್ಣನ್ ತಿರುಮಂಗಲಂ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ.

ಗಣೇಶ್ ತನ್ನನ್ನು ಬೆದರಿಸಿ 100 ರೂ.ಗಳನ್ನು ಕಸಿದುಕೊಂಡಿದ್ದಾನೆ ಎಂದು ಅವರು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯನ್ನು ಸ್ವಲ್ಪ ಸಮಯದ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಆದರೆ ಅದರ ನಂತರ ಆತ ನ್ಯಾಯಾಲಯದ ವಿಚಾರಣೆಗಳಿಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಅದರ ನಂತರವೂ ನ್ಯಾಯಾಲಯವು ಗಣೇಶನ್ ಅವನಿಗೆ ವಿಚಾರಣೆಗೆ ಹಲವಾರು ಬಾರಿ ಸಮನ್ಸ್ ನೀಡಿತು.

ಅವನು ಹೋಗಲೇ ಇಲ್ಲ. ಆತ ಹಲವಾರು ಬಾರಿ ವಿಚಾರಣೆಗೆ ಗೈರುಹಾಜರಾಗಿದ್ದರಿಂದ ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿತು.

ಈ ಪ್ರಕರಣವು 24 ವರ್ಷಗಳಿಗಿಂತ ಹೆಚ್ಚು ಕಾಲ ಬಾಕಿ ಇರುವುದರಿಂದ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಪೊಲೀಸರಿಗೆ ತಿಳಿಸಲಾಯಿತು.

ಅಣ್ಣಾ ನಗರ ಡಿಸಿಪಿ ಸ್ನೇಹಾ ಪ್ರಿಯಾ ಅವರ ಸೂಚನೆಯ ಮೇರೆಗೆ ತಿರುಮಂಗಲಂ ಪೊಲೀಸರು ಮಂಗಳವಾರ 44 ವರ್ಷದ ಗಣೇಶನ್ ಅನ್ನು ಬಂಧಿಸಿದ್ದಾರೆ. ಕಿಲ್ಪಾಕ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಬಳಿ ಆತ ಪತ್ತೆಯಾಗಿದ್ದು, ಕೂಡಲೇ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಯಿತು. 20 ನೇ ವಯಸ್ಸಿನಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು 44 ವರ್ಷಗಳ ನಂತರ ಬಂಧಿಸಲಾಯಿತು.

ಆತ ಕೇವಲ 100ರೂ.ಗಳನ್ನು ಕಳವು ಮಾಡಲಾಗಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಪ್ಪು ಮಾಡಿದವರನ್ನು ನ್ಯಾಯಾಲಯ ಎಂದಿಗೂ ಬಿಡುವುದಿಲ್ಲ ಎಂದು ಅನೇಕರು ಪ್ರತಿಕ್ರಿಯಿಸುತ್ತಿದ್ದಾರೆ.

ಅಲ್ಲದೆ, ಅಂತಹ ಸಣ್ಣ ವಿಷಯಕ್ಕೆ ಇಂತಹ ಶಿಕ್ಷೆಯೇ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. 100 ರೂಪಾಯಿ ಕಳ್ಳನಿಗೆ ನ್ಯಾಯಾಲಯ ಯಾವ ರೀತಿಯ ಶಿಕ್ಷೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!