ರಬಕವಿ-ಬನಹಟ್ಟಿ : –ಸಮಾಜದ ಪ್ರತಿಯೊಬ್ಬರ ಆರೋಗ್ಯದಿಂದರಬೇಕು. ಉತ್ತಮ ಆರೋಗ್ಯ ಮನುಷ್ಯನ ಉನ್ನತಿಗೆ ಕಾರಣವಾಗುತ್ತಿದೆ. ಯಾವುದೇ ರೋಗ-ರುಜಿನ ಹೊಂದಿದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿರಿ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ಬಳಿಸಿಕೊಳ್ಳಬೇಕೆಂದು ತೇರದಾಳದ ಶಾಸಕ ಸಿದ್ದು ಸವದಿ ಹೇಳಿದರು.
ರಬಕವಿ ಬಸ್ ನಿಲ್ದಾಣದ ಸಮೀಪ ಸನ್ ಶೈನ್ ಎಲುವು-ಕೀಲು ಹಾಗೂ ಹೆರಿಗೆ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದರು. ಸುಸಜ್ಜಿತ ಕಟ್ಟಡ ಹಾಗೂ ಅಪಾರವಾದ ಅನುಭವವುಳ್ಳ ಆರೋಗ್ಯ ಸೇವೆ, ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆಯ ಅನುಕೂಲವನ್ನು ಸುತ್ತಮುತ್ತಲಿನ ಸಾರ್ವಜನಿಕರು ಸದುಪಯೋಗ ಪಡೆಸಿಕೊಳ್ಳಬೇಕೆಂದರು.
ರಬಕವಿ ಬ್ರಹ್ಮಾನಂದ ಮಠದ ಶ್ರೀಗುರುಸಿದ್ದೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.ಇದೇ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಳ್ಳೂರ ಗ್ರಾಮದ ಮಾಳಿ ಸಮಾಜದ ಸಾಮಾಜಿಕ ಕಾರ್ಯಕರ್ತ ಮುರಗೆಪ್ಪ ಮಾಲಗಾರ ಅವರನ್ನು ಸನ್ಮಾನಿಸಲಾಯಿತು.
ತೇರದಾಳದ ಪಿ.ಎಸ್.ಆಯ್. ಅಪ್ಪು ಐಗಳಿ, ಬನಹಟ್ಟಿ ಪಿ.ಎಸ್.ಆಯ್. ರಾಘವೇಂದ್ರ ಖೋತ, ಡಾ|| ಪಾರ್ವತಿ ಹಿರೇಮಠ, ಡಾ|| ಸತೀಶ ಮಾಳಿ, ಡಾ|| ರಂಜನಾ ಮಾಳಿ, ಡಾ|| ಕೃಷ್ಣಾ ನಾಯಿಕ, ಡಾ|| ಕಾರ್ತಿಕ ಕೋಳಿ, ಡಾ|| ರವಿ ಜಮಖಂಡಿ, ಡಾ|| ಕುಮಾರ ಅಥಣಿ, ಸಂಜು ಅಥಣಿ, ಬಾಬಾಗೌಡ ಪಾಟೀಲ, ಸದಾಶಿವ ಹೊಸಮನಿ, ಸುರೇಶ ಅಕಿವಾಟ, ಮಹಾದೇವ ತೇರದಾಳ, ಗೋಪಾಲ ಯಡವನ್ನವರ, ಸುಭಾಸ ಚೋಳಿ, ಚಿನ್ನಪ್ಪ ಅಥಣಿ, ಮಲ್ಲಪ್ಪ ಬಿಸನಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಮಾಧವಾನಂದ ಪ್ರಭು ಕೋಪರ್ಡೆ