ಗದಗ : ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಕೂಡಲೇ 5 ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡಿದೆ. ಅವುಗಳಲ್ಲಿ ಪ್ರಮುಖವಾದಂತದ್ದು ಗೃಹಲಕ್ಷ್ಮಿ ಯೋಜನೆ, ಈ ಒಂದು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಸರ್ಕಾರವು ಮನೆಯ ಯಜಮಾನಿಗೆ 2,000 ಹಣ ಅವರ ಖಾತೆಗೆ ಹಾಕುತ್ತಿದೆ.
ಈ ಒಂದು ಹಣದಿಂದ ಈಗಾಗಲೇ ಮಹಿಳೆಯರು ಹಲವಾರು ರೀತಿ ಪ್ರಯೋಜನ ಪಡೆದುಕೊಂಡಿದ್ದು, ಇದೀಗ ಗದಗದಲ್ಲಿ ಬೋರ್ವೆಲ್ ಕೊರೆಸಿ ಅತ್ತೆ, ಸೊಸೆ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ನೀಡುತ್ತಿರುವ 2000 ರೂ. ಹಣವನ್ನು ಕೂಡಿಟ್ಟು ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಮಾಲಧಾರ ಓಣಿಯ ಅತ್ತೆ ಹಾಗೂ ಸೊಸೆ ಕೊಳವೆ ಬಾವಿ ಕೊರೆಸಿದ್ದಾರೆ. ಬೋರ್ವೆಲ್ನಲ್ಲಿ ಅವರಿಗೆ ನೀರು ಕೂಡ ದೊರೆತಿದೆ. ಇದೀಗ ಈ ಬಗ್ಗೆ ಅತ್ತೆ ಮಾಬುಬೀ ಹಾಗೂ ಸೊಸೆ ರೋಷನ್ ಬೇಗಂ ಹರ್ಷ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಸರ್ಕಾರ ನೀಡುವ ಗ್ರಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಅತ್ತೆ ಮತ್ತು ಸೊಸೆ ಇಬ್ಬರು ಈ ಒಂದು ಯೋಜನೆಯ ಹಣವನ್ನು ಕೂಡಿಟ್ಟು ಕೊಂಡಿದ್ದಾರೆ.
ಸುಮಾರು 44,000 ಹಣವನ್ನು ಕೂಡಿಟ್ಟು ಬೋರ್ವೆಲ್ ಕೊರೆಸಿದ್ದಾರೆ. ಬೋರ್ವೆಲ್ ಕೊಡೆಸಲು ಒಟ್ಟು 60,000 ಖರ್ಚು ಬಂದಿದ್ದು ಇನ್ನುಳಿದ 16,000 ಮಗ ನೀಡಿದ್ದಾನೆ ಎಂದು ಮಾಬುಬಿ ಹರ್ಷ ವ್ಯಕ್ತಪಡಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರವು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮನೆಯ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2000 ಹಣ ಹಾಕುತ್ತಿರುವುದ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳಿಗೆ ತುಂಬಾ ಸಹಾಯವಾಗುತ್ತಿದೆ.
ಸಿದ್ದರಾಮಯ್ಯ ಅವರು ನೀಡಿದ ಗೃಹಲಕ್ಷ್ಮಿ ಯೋಜನೆಯಿಂದ ತುಂಬಾ ಅನುಕೂಲವಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಇದೇ ವೇಳೆ ಅವರು ತಿಳಿಸಿದರು.