Join The Telegram | Join The WhatsApp |
ಬೆಳಗಾವಿ : ನಗರದ ಖಾಸಗಿ ಸ್ಥಳದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸಮುದಾಯದ ಪ್ರಮುಖ ಸ್ವಾಮಿಗಳು ಸೇರಿಕೊಂಡು, ಸಮುದಾಯದ ಏಳಿಗೆಗಾಗಿ ಮುಂದಿನ ದಿನಗಳಲ್ಲಿ ಹೇಗೆ ಸಂಘಟಿತರಾಗಿ ಸೌಲಭ್ಯ ಪಡೆಯಬೇಕು ಎಂಬ ವಿಚಾರವಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು….
ಎಸ್ಸಿ, ಎಸ್ಟಿ ಗಳು ಏಕೆ ಒಂದಾಗಬೇಕು ಎಂಬ ಶೀರ್ಷಿಕೆಯನ್ನು ಹೊಂದಿದ ಈ ಕಾರ್ಯಕ್ರಮದ ಉಸ್ತುವಾರಿಯನ್ನು ವಾಲ್ಮೀಕಿ ಮಠದ ಪ್ರಸನ್ನಾನಂದ ಸ್ವಾಮಿಗಳು ವಹಿಸಿಕೊಂಡು, ಅವರ ಜೊತೆ ಸಮಾನ ಮನಸ್ಕರರಾದ ಇನ್ನೂ 7 – 8 ಮಠದ ಸ್ವಾಮಿಗಳ ಸಾನಿಧ್ಯದಲ್ಲಿ ಈ ಕಾರ್ಯಕ್ರಮದ ಜರುಗಿತ್ತು..
ಈ ಸಂಧರ್ಭದಲ್ಲಿ ಸಮುದಾಯದ ವಿಚಾರವಾದಿಗಳಾದ ಗೋಪೀನಾಥ ಸ್ವಾಮಿ ಅವರು ಮಾತನಾಡಿ, ಸಾವಿರಾರು ವರ್ಷಗಳ ಹಿಂದೆ ಈ ಕುಲ ಹೇಗೆ ಹುಟ್ಟಿತು, ಇವರ ವಿಧ್ಯ, ಕಲೆ, ಸಾಹಿತ್ಯ, ಶೌರ್ಯ, ಸಾಹಸ, ಹೋರಾಟ, ಮತ್ತೆ ಬೇರೆ ಸಮುದಾಯದವರಿಂದ ಇವರಿಗಾದ ಅನ್ಯಾಯ ಇಂತಾ ಹಲವಾರು ವಿಷಯಗಳನ್ನು ಮನಮುಟ್ಟುವಂತೆ ಹೇಳಿದರು..
ಅದೇ ವೇಳೆ ಮೈಸೂರಿನ ಮಠದ ಸ್ವಾಮಿಗಳಾದ ಜ್ಞಾನ ಪ್ರಕಾಶ ಸ್ವಾಮಿಗಳು ಸ್ವಲ್ಪ್ ಖಾರವಾಗಿಯೇ ಮಾತಾಡಿ, ನಿದ್ದೆಯಲ್ಲಿದ್ದ ಸಮುದಾಯದ ಜನರನ್ನು ಬಡಿದೆಬ್ಬಿಸುವ ಹಾಗೆ ಮಾತನಾಡಿದರು, ಬಾಬಾಸಾಹೇಬರು ನೀಡಿದ ಅಮೂಲ್ಯವಾದ ಮತದಾನದ ಹಕ್ಕನ್ನು ಕಳೆದ 75 ವರ್ಷಗಳಿಂದ ನಾವು ಮಾರಿಕೊಂಡು ಬಂದಿದ್ದೇವೆ, ಅದರಿಂದಲೇ ಬಹುಸಂಖ್ಯಾತರಾದ ನಮ್ಮನ್ನ ಅಲ್ಪಸಂಖ್ಯಾತರು ಆಳುತ್ತಿದ್ದಾರೆ, ಅದೇ ರೀತಿ ನಮ್ಮನ್ನ ಅವನತಿ ಕೂಡಾ ಮಾಡುತ್ತಿದ್ದಾರೆ ಎಂದರು..
ಇನ್ನು ನೀವು ಜಾಗೃತರಾಗಿ ಒಗ್ಗಟ್ಟಾಗಿ ನಿಲ್ಲಲಿಲ್ಲ ಎಂದರೆ ನಿಮ್ಮನ್ನು ನಾಶ ಮಾಡಿಯೇ ಬಿಡುತ್ತಾರೆ, ಈಗ ಆ ಪ್ರಕ್ರಿಯೆ ಏಷ್ಟೋ ಕಡೆ ನಡೆಸಿದ್ದಾರೆ, ಇನ್ನಾದರೂ ಪರಿಶಿಷ್ಟರೆಲ್ಲಾ ಒಂದಾಗಿ ನಮ್ಮ ಶಕ್ತಿ ಶೌರ್ಯ ಏನೆಂದು ಈ ಕುನ್ನಿಗಳಿಗೆ ತೋರಿಸೋಣ,, ಎಸ್ಸಿ ಎಸ್ಟಿ ಅಂದರೆ ಹುಟ್ಟು ಹೋರಾಟಗಾರರು, ಯೋಧರು, ಭಾರತದ ಪುರಾತನ ಇತಿಹಾಸದಿಂದಲೂ ಯುದ್ಧ, ಹೋರಾಟ, ಬಂಡಾಯ ಮಾಡಿದ್ದು ನಮ್ಮ ಕುಲವೇ ಎಂದರು..
ಅಸ್ಪ್ರಶ್ಯತೆ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿಯ ಲಘುವಾದ ಹೇಳಿಕೆಯನ್ನು ಖಂಡಿಸಿ ಅವರು, ಅಸ್ಪ್ರಶ್ಯರೆಂದರೆ ಅಷ್ಟೊಂದು ಕಡೆಯಾಗಿ ತಿಳಿಯಬೇಡ, ಇತಿಹಾಸ ಸೃಷ್ಟಿಸುವ, ಅಳಿಸುವ ಸಾಮರ್ಥ್ಯ ಇರೋದು ನಮ್ಮಲಿ ಮಾತ್ರ, ನಿನಗೆ ಸವಾಲು ಹಾಕ್ತೀವಿ ಮುಂದಿನ ಚುನಾವಣೆಯಲ್ಲಿ ಪರಿಶಿಷ್ಟರೆ ಈ ರಾಜ್ಯದ ಮುಖ್ಯಮಂತ್ರಿ ಆಗುವರು ಎಂದರು..
ಈ ಸಂಧರ್ಭದಲ್ಲಿ ಪೂಜ್ಯ ಸ್ವಾಮಿಜಿಗಳು, ಸಮುದಾಯದ ಮುಖಂಡರು, ರಾಹುಲ ಜಾರಕಿಹೊಳಿ, ಮಲ್ಲೇಶ ಚೌಗುಲೆ, ರಾಜಶೇಖರ ಪಾಟೀಲ್, ಉದ್ಯಮಿ ಹಾಗೂ ಪತ್ರಿಕಾ ಸಂಪಾದಕರಾದ ಡಾ ಎನ್ ಪ್ರಶಾಂತರಾವ್, ಶಂಕರ ರಾಠೋಡ, ವಿಜಯ ತಳವಾರ, ಬಾಳೇಶ ದಾಸನಟ್ಟಿ, ಇನ್ನೂ ಹಲವಾರು ಗಣ್ಯ ಮಾನ್ಯರು ಉಪಸ್ಥಿತರಿದ್ದರು..
ವರದಿ : ಪ್ರಕಾಶ ಕುರಗುಂದ
Join The Telegram | Join The WhatsApp |