This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

Local News

ಬಾದಾಮಿ ಮತಕ್ಷೇತ್ರದ ವಿವಿದ ರಸ್ತೆ ಕಾಮಗಾರಿಗಳಿಗೆ ಲೋಕೋಪಯೋಗಿ ಇಲಾಖೆಯಿಂದ ಒಟ್ಟು ೬೩ ಕೋಟಿ ರೂ.ಅನುದಾನವನ್ನು ವಿರೋಧ ಪಕ್ಷದ ನಾಯಕರು, ಶಾಸಕರು ಆದ ಸಿದ್ದರಾಮಯ್ಯ ನವರು ಮಂಜೂರು ಮಾಡಿಸಿದ್ದರೆಂದು;ಹೊಳಬಸು ಶೆಟ್ಟರ

Join The Telegram Join The WhatsApp

ಬಾದಾಮಿ: ಮತಕ್ಷೇತ್ರದ ವಿವಿದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಲೋಕೋಪಯೋಗಿ ಇಲಾಖೆಯಿಂದ ೬೩ ಕೋಟಿ ರೂ.ಅನುದಾನವನ್ನು ವಿರೋಧ ಪಕ್ಷದ ನಾಯಕರು, ಶಾಸಕರು ಆದ ಸಿದ್ದರಾಮಯ್ಯ ನವರು ಮಂಜೂರು ಮಾಡಿಸಿದ್ದಾರೆಂದು ಸಿದ್ದರಾಮಯ್ಯನವರ ಆಪ್ತ ಹೊಳಬಸು ಶೆಟ್ಟರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಯಲ್ಲಿ ಅವರು ವಿರೋಧ ಪಕ್ಷದ ನಾಯಕರು ಶಾಸಕರು ಆದ ಸಿದ್ದರಾಮಯ್ಯ ನವರು ಸರ್ಕಾರದ ಮುಖ್ಯಮಂತ್ರಿಗಳಿಗೆ ಹಾಗೂ ಲೋಕೋಪಯೋಗಿ ಸಚಿವರಿಗೆ ಒತ್ತಡ ಹಾಕಿ ಬಹುದಿನಗಳಿಂದ ರಸ್ತೆ ನಿರ್ಮಾಣದ ಅವಶ್ಯಕತೆ ಬಗ್ಗೆ ಮನವರಿಕೆ ಮಾಡಿ ಒಟ್ಟು ಅಂದಾಜು ೬೩ ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದ್ದಾರೆ.
ಬಾದಾಮಿ ಮತಕ್ಷೇತ್ರದ ಸಂಕೇಶ್ವರ-ಸAಗಮ ರಾಹೆ-೪೪ ಏಕಪಥದ ರಸ್ತೆ ಕಾಮಗಾರಿಗೆ(ಅಲ್ಲೂರ ಕ್ರಾಸ್ ದಿಂದ ಹಳದೂರ,ಇಂಜಿನವಾರಿ ಮಾರ್ಗವಾಗಿ ಕಮತಗಿ ಬಾರ್ಡರ ವರೆಗೆ) ೭೦೦ ಲಕ್ಷ ಹಾಗೂ ಬಾದಾಮಿ ಎಲ್.ಐ.ಸಿ.ಕಚೇರಿಯಿಂದ ಕೋಣಮ್ಮದೇವಿ ದೇವಸ್ಥಾನ ಹತ್ತಿರದ ಮಹಾದ್ವಾರದ ವರೆಗೆ, ಹಾನಾಪೂರ ಎಲ್.ಟಿ.ಯಿಂದ ರಾಘಾಪೂರ, ಹಂಸನೂರ, ತೆಗ್ಗಿ, ಕೆಲವಡಿ ನೀರಲಕೇರಿ ಡಾಂಬರೀಕರಣ ,ಗುಳೇದಗುಡ್ಡ ಪಟ್ಟಣದ ಗುಲಾಬ ಟಾಕೀಸ ದಿಂದ ಹರದೊಳ್ಳಿ ವರೆಗೆ ಕಾಮಗಾರಿಗೆ ೬೫೦.೦೦ ಲಕ್ಷ ರೂ. ಮತ್ತು ಗುಳೇದಗುಡ್ಡ ಪಟ್ಟಣ ಪರಿಮಿತಿಯ ( ಬಾಗಲಕೋಟೆ ರಸ್ತೆಯ ಭಂಡಾರಿ ಕಾಲೇಜು ಕ್ರಾಸದಿಂದ ೩೬೭ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್) ರಾಷ್ಟಿçÃಯ ಹೆದ್ದಾರಿ ರಸ್ತೆ ಅಗಲೀಕರಣ ಕಾಮಗಾರಿಗೆ ೮೦೦.೦೦ ಲಕ್ಷ ರೂ. ಬಾದಾಮಿ ತಾಲೂಕಿನ ನೀಲಗುಂದ ಕ್ರಾಸ್ ನಿಂದ ನೀರಲಕೇರಿ ರಸ್ತೆಯ ರಸ್ತೆ ಸುಧಾರಣೆ, ಯರಗೊಪ್ಪ ಲಖಮಾಪೂರ ರಸ್ತೆ ಸುಧಾರಣೆ, ಯರಗೊಪ್ಪ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣ, ಬಾದಾಮಿ ತಾಲೂಕಿನ ಕುಳಗೇರಿ ಯಿಂದ ತಪ್ಪಸಕಟ್ಟಿ ವರೆಗೆ ರಸ್ತೆ ಸುಧಾರಣೆ, ರಾಷ್ಟಿçÃಯ ಹೆದ್ದಾರಿಯಿಂದ ಅಲ್ಲೂರ ಎಸ್.ಪಿ.ವರೆಗೆ ರಸ್ತೆ ಸುಧಾರಣೆ ಮಾಡಲು ೯೫೦.೦೦ ಲಕ್ಷ ರೂ. ಬೇಲೂರ-ಹೊಸೂರ-ಗುಡೂರ ರಸ್ತೆ ಸುಧಾರಣೆ, ನರಸಾಪೂರದಿಂದ ಕಳಸವರೆಗೆ ಡಾಂಬರೀಕರಣ ಮಾಡಲು ೬೧೦.೦೦ ಲಕ್ಷ ರೂ. ಮತ್ತು ಸರ್ಜಾಪೂರ-ಗುಡ್ಡದಮಲ್ಲಾಪೂರ ರಸ್ತೆ ಸುಧಾರಣೆ, ಕೋಟಿಕಲ್ ನೀಲಾನಗರ ಮರುಡಾಂಬರೀಕರಣ ಮಾಡುವುದು ಮತ್ತು ಶಿವಯೋಗಮಂದಿರ, ನಂದಿಕೇಶ್ವರ ಗ್ರಾಮ ಸರಹದ್ದಿನಲ್ಲಿ ತಡೆಗೋಡೆ ನಿರ್ಮಾಣ, ಖಾಜಿಬೂದಿಹಾಳದಿಂದ ರಾಜ್ಯ ಹೆದ್ದಾರಿ ಕೂಡುವರೆಗೆ ರಸ್ತೆ ಅಗಲೀಕರಣ/ಸುಧಾರಣೆ ಮಾಡುವುದು. ಬೇಲೂರ ತೆಂಗಿನಕಾಯಿ ಕೆರೆಯಿಂದ ನೈನಾಪೂರ ಗ್ರಾಮೀಣ ರಸ್ತೆ ಮರುಡಾಂಬರೀಕರಣ ಮಾಡುವುದು. ಗುಳೇದಗುಡ್ಡ ಪಟ್ಟಣದಿಂದ ಮುರುಡಿ ರಸ್ತೆ ಸುಧಾರಣೆ,ಖಾಜಿಬೂದಿಹಾಳದಿಂದ ರಾಜ್ಯ ಹೆದ್ದಾರಿ ಕೂಡುವ ಗ್ರಾಮೀಣ ರಸ್ತೆ ಸುಧಾರಣೆಗೆ ೭೭೦.೦೦ ಲಕ್ಷ ರೂ, ಗುಳೇದಗುಡ್ಡ ತಾಲೂಕಿನ ನಾಗರಾಳ ಎಸ್.ಪಿ ಯಿಂದ ಚಿಮ್ಮಲಗಿ ಗ್ರಾಮೀಣ ರಸ್ತೆ ಮತ್ತು ನೀಲಗುಂದ ಕ್ರಾಸ್-ಪರಮಸಾಗರ ಜಿ.ಮು.ರಸ್ತೆಯಿಂದ ಮಾರುತೇಶ್ವರ ದೇವಸ್ಥಾನಕ್ಕೆ ಕೂಡುವ ಗ್ರಾಮೀಣ ರಸ್ತೆ ಮತ್ತು ರಾಜ್ಯ ಹೆದ್ದಾರಿಯಿಂದ ಸೋಮನಕೊಪ್ಪ ಗ್ರಾಮೀಣ ರಸ್ತೆ ಸುಧಾರಣೆ ಮಾಡಲು ೨೨೦.೦೦ ಲಕ್ಷ ರೂ.ಸೇರಿದಂತೆ ಒಟ್ಟು ೪೦೦೦.೦೦ ಲಕ್ಷ ಅನುದಾನ ಮಂಜೂರಾಗಿದೆ ಮತ್ತು ಬಾದಾಮಿ ತಾಲೂಕಿನ ಆಲದಕಟ್ಟಿ ಕ್ರಾಸ್ ನಿಂದ ಕರಡಿಗುಡ್ಡ-ಮುಷ್ಟಿಗೇರಿ-ಉಗಲವಾಟ-ಹಳಗೇರಿ-ರಡ್ಡೇರ ತಿಮ್ಮಾಪೂರ-ಬೆಳ್ಳಕಿಂಡಿ-ಕೈನಕಟ್ಟಿ ರಸ್ತೆ ಕಾಮಗಾರಿಗೆ ೯೯೫.೦೦ ಲಕ್ಷ ರೂ, ಬಾದಾಮಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಸುರೇಬಾನ-ಚಿತ್ತರಗಿ-ಕೂಡಲಸಂಗಮ ರಾಹೆ-೧೩೩ ರಸ್ತೆ ಸುಧಾರಣೆಗಾಗಿ ( ತಳಕವಾಡ,ಆಲೂರ ಎಸ್.ಕೆ,ಹಾಗನೂರ,ಕರ್ಲಕೊಪ್ಪ, ರಾಮದುರ್ಗ ಬಾರ್ಡರ್ ವರೆಗೆ) ೬೦೦.೦೦ ಲಕ್ಷ ರೂ.ಅನುದಾನ ಮಂಜೂರಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಬ್ಲಾಕ ಕಾಂಗ್ರೇಸ್ ಅಧ್ಯಕ್ಷ ಹನಮಂತ ಯಕ್ಕಪ್ಪನವರ,ಗುಳೇದಗುಡ್ಡ ಬ್ಲಾಕ್ ಅದ್ಯಕ್ಷರಾದ ಸಂಜಯ ಬರಗುಂಡಿ ಮುಖಂಡರಾದ ಎಂ.ಬಿ.ಹAಗರಗಿ, ಪಿ.ಆರ್.ಗೌಡರ, ಮಹೇಶ ಹೊಸಗೌಡ್ರ, ಡಾ.ಎಂ.ಎಚ್.ಚಲವಾದಿ, ಪುರಸಭೆಯ ಅಧ್ಯಕ್ಷ ರಾಜಮಹ್ಮದ ಬಾಗವಾನ,ಯಲ್ಲವ್ವ ಗೌಡರ, ಎಂ.ಡಿ.ಯಲಿಗಾರ, ನಾಗಪ್ಪ ಅಡಪಟ್ಟಿ,ಹನಮಂತ ದೇವರಮನಿ, ಎಫ್.ಆರ್.ಪಾಟೀಲ, ಶಶಿಕಾಂತ ಉದಗಟ್ಟಿ, ರೇವಣಸಿದ್ದಪ್ಪ ನೋಟಗಾರ, ಮಧು ಯಡ್ರಾಮಿ, ಬಸವರೆಡ್ಡಿ ಬ್ಯಾಹಟ್ಟಿ,ಬಸವರಾಜ ಡೊಳ್ಳಿನ, ರಾಮಣ್ಣ ಡೊಳ್ಳಿನ, ಶಿವಾನಂದ ಮುದೋಳ, ಸಿದ್ದಪ್ಪ ಉದನ್ನವರ, ಮುತ್ತಪ್ಪ ಗಾಜಿ, ಶಿವಾನಂದ ದ್ಯಾಮಣ್ಣವರ, ಪ್ರವೀಣಕುಮಾರ ಜ್ಯೋತಿ, ರಾಮವ್ವ ಮಾದರ, ಶಿವು ಮಣ್ಣೂರ, ಸಿದ್ದು ಗೌಡರ, ಮಾರುತಿ.ಡಿ.ವಾಲೀಕಾರ, ಮಹೇಶ ದೇವರಮನಿ, ಕೆ.ಬಿ.ಗೌಡರ, ಶರಣಪ್ಪ ತಮಿನಾಳ ಸೇರಿದಂತೆ ಇತರರು ಹಾಜರಿದ್ದರು.
ಅಭಿನಂದನೆ; ಬಾದಾಮಿ ಮತಕ್ಷೇತ್ರದ ಬಹಳ ದಿನಗಳ ಬೇಡಿಕೆಯಾಗಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸರಕಾರದ ಮುಖ್ಯಮಂತ್ರಿ ಮತ್ತು ಲೋಕೋಪಯೋಗಿ ಸಚಿವರ ಮೇಲೆ ಒತ್ತಡ ಹಾಕಿ ೬೩ ಕೋಟಿ ರೂ.ಅನುದಾನ ಮಂಜೂರಿ ಮಾಡಿಸಿದ ಕ್ಷೇತ್ರ ಶಾಸಕರಾದ ಸಿದ್ದರಾಮಯ್ಯನವರಿಗೆ ಮತಕ್ಷೇತ್ರದ ಜನರು, ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ


Join The Telegram Join The WhatsApp
Bharath Vaibhav
the authorBharath Vaibhav

Leave a Reply