This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

State News

ಬಜೆಟ್ ಅಧಿವೇಶನ ಉದ್ದೇಶಿಸಿ ಮುರ್ಮು ಭಾಷಣ, ಬಸವಣ್ಣನ ‘ಕಾಯಕವೇ ಕೈಲಾಸ’ ಸ್ಮರಿಸಿದ ರಾಷ್ಟ್ರಪತಿ

Join The Telegram Join The WhatsApp

ನವದೆಹಲಿ: ”ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಕಾಲಿಟ್ಟಿದ್ದು, ಜಾಗತಿಕವಾಗಿ ಏಳಿಗೆ ಹೊಂದುತ್ತಿದೆ.ಇನ್ನಷ್ಟು ಆತ್ಮನಿರ್ಭರ ಸಾಧಿಸುವ ದಿಸೆಯಲ್ಲಿ ಕಾರ್ಯನಿರ್ವಹಿಸುವ ಅವಶ್ಯಕತೆ ಇದ್ದು, ಎಲ್ಲರೂ ಒಗ್ಗೂಡಿ ದೇಶದ ಏಳಿಗೆ ದೃಷ್ಟಿಯಿಂದ ಶ್ರಮಿಸೋಣ. ಮುಂದಿನ ವರ್ಷಗಳಲ್ಲಿ ಭಾರತದ ಏಳಿಗೆ ಮತ್ತೊಂದು ಹಂತ ತಲುಪಲಿದೆ” ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು. ಹಾಗೆಯೇ, ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಉಕ್ತಿಯನ್ನು ನೆನೆದರು.

ಸಂಸತ್ತಿನ ಬಜೆಟ್‌ ಅಧಿವೇಶನ ಆರಂಭವಾಗಿದ್ದು, ದ್ರೌಪದಿ ಮುರ್ಮು ಅವರು ಸಂಸತ್ತಿನ ಉಭಯ ಸದನಗಳನ್ನುದ್ದೇಶಿಸಿ ಮಾತನಾಡಿದರು. “ದೇಶದ ಜನ ಸದೃಢ ಸರ್ಕಾರವನ್ನು ಆಯ್ಕೆ ಮಾಡಿದೆ. 2047ರ ವೇಳೆಗೆ ಭಾರತದ ಅಭಿವೃದ್ಧಿಯ ಗತಿಯು ಬದಲಾಗಬೇಕು. ಆಧುನಿಕ ಯುಗಕ್ಕೆ ತಕ್ಕ ರೀತಿಯಲ್ಲಿ ಏಳಿಗೆ ಹೊಂದುವ ಜತೆಗೆ ಆತ್ಮನಿರ್ಭರತೆಯನ್ನು ಸಾಧಿಸುವ ಅವಶ್ಯಕತೆ ಇದೆ” ಎಂದರು.

ಕಾಯಕವೇ ಕೈಲಾಸ ತತ್ವ ಅಳವಡಿಸಿಕೊಳ್ಳಲು ಕರೆ

“ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿದ್ದಾರೆ. ಅಂದರೆ, ಕೆಲಸ ಮಾಡುವುದರಲ್ಲೇ ದೇವರನ್ನು ಕಾಣುವುದು ಎಂಬುದು ಅವರ ಮಾತಿನ ತಾತ್ಪರ್ಯವಾಗಿದೆ. ಹಾಗಾಗಿ, ಸರ್ಕಾರ ಹಾಗೂ ದೇಶದ ಜನ ಬಸವಣ್ಣನವರ ತತ್ವವನ್ನು ಅಳವಡಿಸಿಕೊಂಡು ಮುಂದೆ ಸಾಗಬೇಕು” ಎಂದು ಕರೆ ನೀಡಿದರು. “ದೇಶದಲ್ಲೀಗ ಭ್ರಷ್ಟಾಚಾರ ನಿಗ್ರಹವಾಗಿದ್ದು, ಜಿಎಸ್‌ಟಿಯಂತಹ ತೆರಿಗೆ ಸುಧಾರಣೆ ಜಾರಿಗೆ ತರಲಾಗಿದೆ. ಪಾರದರ್ಶಕತೆಯನ್ನು ಅಳವಡಿಸಿಕೊಳ್ಳಲಾಗಿದೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ದೇಶದ ಚಹರೆ ಬದಲಾಗಿದೆ” ಎಂದರು.

 

“ಸರ್ಕಾರವು ಬಡವರ ಪರವಾಗಿದೆ. ಬಡವರಿಗೆ ಅನುಕೂಲವಾಗಲಿ ಎಂದು ಅಡುಗೆ ಅನಿಲ, ವಿದ್ಯುತ್‌, ನೀರು, ವಸತಿ ಸೌಕರ್ಯ ಕಲ್ಪಿಸಿದೆ. ಜಲಜೀವನ್‌ ಮಿಷನ್‌ ಅಡಿಯಲ್ಲಿ ದೇಶದ 11 ಕೋಟಿ ಜನರಿಗೆ ನೀರು ಒದಗಿಸಲಾಗಿದೆ. ಆಯುಷ್ಮಾನ್‌ ಭಾರತ್‌ ಯೋಜನೆ ಅನ್ವಯ ಕೋಟ್ಯಂತರ ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಬಡವರ ಶ್ರೇಯೋಭಿವೃದ್ಧಿಗೆ ಸಕಲ ರೀತಿಯಲ್ಲೂ ಶ್ರಮಿಸಲಾಗುತ್ತಿದೆ” ಎಂದು ಹೇಳಿದರು.


Join The Telegram Join The WhatsApp
Bharath Vaibhav
the authorBharath Vaibhav

Leave a Reply