Join The Telegram | Join The WhatsApp |
ಬೆಳಗಾವಿ: ಉತ್ತರ ಕರ್ನಾಟಕದ ನೆರನುಡಿಯ ದಿಟ್ಟ ರಾಜಕಾರಣಿ, ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಹೊಂದಿದ, ರಾಜ್ಯ ಸರ್ಕಾರದ ಆಹಾರ ಹಾಗೂ ಅರಣ್ಯ ಸಚಿವರಾದ ಉಮೇಶ ಕತ್ತಿ ಅವರು ನಿನ್ನೆ ಹೃದಯಾಘಾತದಿಂದ ಅಸುನೀಗಿದ್ದರು.
ಇಂದು ಅವರ ಹುಟ್ಟೂರಾದ ಬೆಳಗಾವಿ ಜಿಲ್ಲೆಯ ಬೆಲ್ಲದ ಬಾಗೇವಾಡಿಯಲ್ಲಿ ಅಂತ್ಯಕ್ರಿಯೆ ಏರ್ಪಡಿಸಲಾಗಿದ್ದು, ಈ ಒಂದು ಕಾರ್ಯಕ್ಕೆ ಜಿಲ್ಲೆ, ರಾಜ್ಯದ ಎಲ್ಲಾ ರಾಜಕೀಯ ಧುರೀಣರು ಪಕ್ಷಬೇಧ ಮರೆತು, ಅಂತಿಮ ವಿಧಿವಿಧಾನ ಕಾರ್ಯದಲ್ಲಿ ಭಾಗಿಯಾಗಿ ತಮ್ಮ ಸಂತಾಪ ಸೂಚಕ ನುಡಿಗಳನ್ನಾಡಿದರು..
ಪ್ರತಿಯೊಬ್ಬರೂ ಕೂಡಾ ಅಗಲಿದ ನಾಯಕರ ಗುಣಗಾನ ಮಾಡುತ್ತಾ, ಜಿಲ್ಲೆಗೆ ಹಾಗೂ ಉತ್ತರ ಕರ್ನಾಟಕಕ್ಕೆ ಅವರ ಅವಶ್ಯಕತೆ ಎಷ್ಟು ಇತ್ತು, ಮಾತು ವರಟಾದರು ಮನಸು ಮಗುವಿನಂತಹದು ಎಂದು ಅವರನ್ನು ಕಳೆದುಕೊಂದು ನಾವೆಲ್ಲರೂ ಬಡವಾಗಿದ್ದೇವೆ ಎಂಬ ನೋವಿನ ಪ್ರತಿಕ್ರಿಯೆ ನೀಡಿದರು.
ವರದಿ ಪ್ರಕಾಶ ಕುರಗುಂದ..
Join The Telegram | Join The WhatsApp |