Join The Telegram | Join The WhatsApp |
ಬೆಂಗಳೂರು: ಕರ್ನಾಟಕದಲ್ಲಿ ಅಂಗಾಂಗ ದಾನಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಈ ಮೂಲಕ ದೇಶದಲ್ಲಿಯೇ ಅಂಗಾಂಗ ದಾನಿಗಳ ಸಂಖ್ಯೆಯಲ್ಲಿ ಕರ್ನಾಟಕ 2ನೇ ಸ್ಥಾನ ಪಡೆದುಕೊಂಡಿದೆ.
ಹೌದು ರಾಜ್ಯದಲ್ಲಿ ಮೃತರ ಅಂಗಾಂಗ ದಾನ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.ಕಳೆದ 2022ರಲ್ಲಿ ಹಿಂದೆಂದಿಗಿಂತಲೂ ಅತೀ ಹೆಚ್ಚು ದಾನಿಗಳು ಅಂಗಾಂಗ ದಾನ ಮಾಡಿದ್ದಾರೆ. ಬರೋ ಬರೋಬ್ಬರಿ 151 ಮಂದಿ ಅಂಗಾಂಗ ದಾನ ಮಾಡಿರುವುದಾಗಿ ತಿಳಿದು ಬಂದಿದೆ.
ಕರ್ನಾಟಕದಲ್ಲಿ ಅಂಗಾಂಗ ದಾನ ಹೆಚ್ಚುವುದಕ್ಕೆ ನಟ ಪುನೀತ್ ರಾಜ್ ಕುಮಾರ್ ಹಾಗೂ ಸಂಚಾರಿ ವಿಜಯ್ ಪ್ರೇರಣೆಯಂತೆ. ಪುನೀತ್, ಸಂಚಾರಿ ವಿಜಯ್ ಅಂಗಾಂಗ ದಾನದ ಬಳಿಕ, ಹಲವು ಕುಟುಂಬಸ್ಥರು ಸ್ವಯಂ ಪ್ರೇರಿತವಾಗಿ ಮುಂದೆ ಬಂದು ಮೃತರ ಅಂಗಾಂಗ ದಾನ ಮಾಡುತ್ತಿದ್ದಾರೆ.
ಅಂದಹಾಗೇ ನೀವು ಕೂಡ ಮೃತ ಪಟ್ಟ ಬಳಿಕ ನಿಮ್ಮ ಕುಟುಂಬಸ್ಥರು, ನಿಮ್ಮ ಅಂಗಾಂಗ ದಾನ ಮಾಡೋ ಇಚ್ಚೆಯಿದ್ದರೇ, jeevasarthakathe.karnataka.gov.in ಜಾಲತಾಣಕ್ಕೆ ಭೇಟಿ ನೀಡಿ, ನೋಂದಾಯಿಸಿಕೊಳ್ಳಬಹುದು
Join The Telegram | Join The WhatsApp |