Join The Telegram | Join The WhatsApp |
ಮುದಗಲ್ಲ :ಹಂದಿಗಳ ತಂಗುದಾಣವಾದ ನಾಗರಹಾಳ ಮೂರನೆ ವಾರ್ಡನಲ್ಲಿ ಚರಂಡಿ ಸ್ವಚ್ತತೆ ಇಲ್ಲದೆ ರೋಗ ರುಜಿನಗಳಿಗೆ ತಲೆಕೆಡಿಸಿ ಕೊಳ್ಳದ ಗ್ರಾಮ ಪಂಚಾಯತ ದಿವ್ಯ ನಿರ್ಲಕ್ಷ್.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ಲ ಸಮೀಪದ ನಾಗರಹಾಳ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿನ ನಾಗರಹಾಳ ಗ್ರಾಮದಲ್ಲಿ ಸರಿಯಾದ ಚರಂಡಿಗಳು ಹಾಗೂ ಸ್ವಚ್ಚತೆ ಇಲ್ಲದೆ ರೋಗ ರುಜಿನಗಳಿಗೆ ಕೈ ಬೀಸಿ ಕರೆಯುತ್ತಿರುವ ಗ್ರಾಮದ ಮೂರನೆ ವಾರ್ಡನಲ್ಲಿರುವ ಮದಿನಾ ಮಸೀದಿಯ ಹತ್ತಿರವಿರುವ ಸ್ಥಳದಲ್ಲಿ ಸುಮಾರು ಏಳು ವರ್ಷದಿಂದಲೂ ಗ್ರಾಮ ಪಂಚಾಯತ ನಾಗರಹಾಳ ದಿವ್ಯ ನಿಲಕ್ಷ್ಯದಿಂದ ಗ್ರಾಮದ ಜನರು ಗಲೀಜು ತುಂಬಿದ ಹೊಲಸು ನೀರಲ್ಲೆ ಮೂಗು ಮುಚ್ಚಿಕೊಂಡು ತಿರುಗಾಡುವ ಸ್ಥಿತಿ ಬಂದೋದಗಿದೆ, ಇದನ್ನು ಕಂಡು ಕಾಣದ ರೀತಿಯಲ್ಲಿ 3ನೇ ವಾರ್ಡಿನ ಗ್ರಾಮ ಪಂಚಾಯತ ಸದಸ್ಯರು ಹಾಗೂ ಪಿಡಿಓ ರವರ ನಿಷ್ಕಾಳಜಿ ಎದ್ದು ಕಾಣುತ್ತಿದೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಕವರಗಳು,ಕಸ,ತ್ಯಾಜ್ಯಗಳು ಬೇಕಾಬಿಟ್ಟಿ ಎಸೆದಿರುವುದನ್ನು ಕಂಡು ಸ್ಥಳಿಯರಾದ ಭೀಮ್ ಆರ್ಮಿ ನಾಗರಹಾಳ ಘಟಕದ ಅದ್ಯಕ್ಷ ನಾಗರಾಜ.ಎಸ್. ಚಲವಾದಿಯವರು ಗ್ರಾಮ ಪಂಚಾಯತ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಾ , ತಾಲೂಕು ಹಾಗೂ ಜಿಲ್ಲಾಡಳಿತ ದ ಪ್ರತಿಯೊಬ್ಬರಿಗೂ ಪತ್ರ& ಮೌಖಿಕವಾಗಿ ತಿಳಿಸಿದ್ದಾಗ್ಯು ದಿವ್ಯ ನಿರ್ಲಕ್ಷ ತೊರಿದ್ದಾರೆ. ತಾಲುಕು ಇಒ ಹಾಗೂ ಜಿಲ್ಲಾಡಳಿತದ ಮೇಲಾಧಿಕಾರಿಗಳಿಗೆ ನೀರ್ಲಕ್ಷ ವಹಿಸುತ್ತಿರುವವರ ಮೇಲೆ ತಕ್ಷಣ ಕ್ರಮ ಕೈಗೋಳ್ಳುವಂತೆ ಮತ್ತು 3ನೇ ವಾರ್ಡನ ಸ್ವಚ್ಚತೆ ಮತ್ತು ನೈರ್ಮಲ್ಯದ ಕಡೆ ತಿವ್ರಗತಿಯಲ್ಲಿ ಗಮನ ಹರಿಸಬೇಕು ಎಂದು ನಮ್ಮ ಸಂಘಟನೆಯು ಈ ಮೂಲಕ ಆಗ್ರಹಿಸುತ್ತದೆ.
ವರದಿ: ಮಂಜುನಾಥ ಕುಂಬಾರ
Join The Telegram | Join The WhatsApp |