Join The Telegram | Join The WhatsApp |
ಯುಎಸ್‌ಎ: ಪ್ರಸ್ತುತ ಡ್ರೋನ್ಗಳು ಹಾರಾಡುತ್ತಿವೆ. ಈ ಪಟ್ಟಿಗೆ ಸದ್ಯದಲ್ಲೇ ಹಾರುವ ಕಾರುಗಳು ಸೇರ್ಪಡೆಯಾಗಲಿವೆ.ಟ್ರಾಫಿಕ್ ಸಮಸ್ಯೆ ತಪ್ಪಿಸಲು ಅಮೆರಿಕದಲ್ಲಿ ನೂತನವಾಗಿ ಹಾರುವ ಕಾರು ಸಿದ್ಧಪಡಿಸಲಾಗಿದೆ.
ಅಲೆಫ್ ಏರೋನಾಟಿಕ್ಸ್ ಅಭಿವೃದ್ಧಿಪಡಿಸಿದ ಹಾರುವ ಕಾರಿಗೆ ಯುಎಸ್ ಸರ್ಕಾರ ಅನುಮೋದನೆ ನೀಡಿದೆ. ಗಾಳಿಯಲ್ಲಿ ಹಾರುವ ವಿಶ್ವದ ಮೊದಲ ಎಲೆಕ್ಟ್ರಿಕ್ ಕಾರು ಇದಾಗಿದೆ.
ಬೆಲೆ 3 ಲಕ್ಷ ಡಾಲರ್. ಅಂದ್ರೆ, ನಮ್ಮ ರೂಪಾಯಿ ಲೆಕ್ಕಾಚಾರದಲ್ಲಿ ಇದರ ಮೌಲ್ಯ 2.46 ಕೋಟಿ ರೂಪಾಯಿಗೂ ಹೆಚ್ಚು!. 2025ರ ಅಂತ್ಯದ ವೇಳೆಗೆ ಇಂಥ ಕಾರುಗಳು ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ‘ಅಲೆಫ್’ ಕಂಪನಿ ಹೇಳಿದೆ.
ಕ್ಯಾಲಿಫೋರ್ನಿಯಾದ ಸ್ಯಾನ್ ಮಾಟಿಯೊದಲ್ಲಿ ಕಾರನ್ನು ತಯಾರಿಸಲಾಗುತ್ತಿದೆ. ಇದು ಎರಡು ಜನರ ಪ್ರಯಾಣಕ್ಕೆ ಅವಕಾಶ ಕಲ್ಪಿಸುತ್ತದೆ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್(FAA)ನಿಂದ ಪ್ರಮಾಣೀಕರಿಸಲಾಗಿದೆ ಎಂದು ತಯಾರಕರು ಹೇಳಿದ್ದಾರೆ. ಹಾರುವ ಕಾರಿಗೆ ಈ ರೀತಿಯ ಅನುಮತಿ ಸಿಕ್ಕಿರುವುದು ಇದೇ ಮೊದಲು.
ಟ್ರಾಫಿಕ್ ಸಮಸ್ಯೆ ಮತ್ತು ಅಪಘಾತಗಳನ್ನು ತಡೆಗಟ್ಟಲು ವಿನ್ಯಾಸಗೊಳಿಸಲಾಗಿದೆ. ಹಾರುವ ಕಾರುಗಳಿಗೆ ಈವರೆಗೆ 440ಕ್ಕೂ ಹೆಚ್ಚು ಆರ್ಡರ್‌ಗಳು ಬಂದಿವೆ ಎಂದು ಕಂಪನಿ ಹೇಳಿಕೊಂಡಿದೆ.
ವಿಶ್ವದ ಮೊದಲ ಹಾರುವ ಎಲೆಕ್ಟ್ರಿಕ್ ಕಾರನ್ನು ಒದಗಿಸುವ ಉದ್ದೇಶದಿಂದ ಅಲೆಫ್ ವಿನ್ಯಾಸಗೊಳಿಸಿದೆ. ಈಗಾಗಲೇ ಸಾಕಷ್ಟು ಮುಂಗಡ ಆರ್ಡರ್‌ಗಳು ಬಂದಿವೆ. ಲಂಬವಾಗಿ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಸಾಮರ್ಥ್ಯಗಳನ್ನು ಇದು ಹೊಂದಿದೆ.
ಗ್ರಾಮೀಣ ಹಾಗೂ ನಗರದ ರಸ್ತೆಗಳಲ್ಲಿ ಓಡಿಸುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ. ಸಾಮಾನ್ಯ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಬಹುದು. ರಸ್ತೆಯಲ್ಲಿ ಗಂಟೆಗೆ 25 ಮೈಲುಗಳಷ್ಟು ದೂರ ಮಾತ್ರ ಚಲಿಸುತ್ತದೆ. ನೀವು ವೇಗವಾಗಿ ಹೋಗಲು ಬಯಸಿದರೆ, ಅದರಲ್ಲಿರುವ ವೈಮಾನಿಕ ಸಾಮರ್ಥ್ಯಗಳನ್ನು ಬಳಸಬಹುದು ಎಂದು ಕಂಪನಿಯ ಸಿಇಒ ಜಿಮ್ ಡುಕೊವ್ನಿ ತಿಳಿಸಿದರು.
ಮಾಡೆಲ್ -ಎ ಫ್ಲೈಯಿಂಗ್ ಕಾರ್: ಕ್ಯಾಲಿಫೋರ್ನಿಯಾ ಮೂಲದ ಕಂಪನಿ ಅಲೆಫ್ ಏರೋನಾಟಿಕ್ಸ್ ಸಿದ್ಧವಾದ ಮಾಡೆಲ್-ಎ ಫ್ಲೈಯಿಂಗ್ ಕಾರ್ ಬೆಲೆ 3 ಲಕ್ಷ ಡಾಲರ್ ಭಾರತೀಯ ಕರೆನ್ಸಿಯಲ್ಲಿ 2.46 ಕೋಟಿ ರೂ.) ಯಿಂದ ಪ್ರಾರಂಭವಾಗುತ್ತದೆ.
ಎಲೆಕ್ಟ್ರಿಕ್ ಮಾಡೆಲ್ ಅನ್ನು 150 ಡಾಲರ್ (12,308 ರೂ.) ಟೋಕನ್ ಮೊತ್ತಕ್ಕೆ ಅಲೆಫ್‌ನ ವೆಬ್‌ಸೈಟ್ ಮೂಲಕ ಪ್ರೀ ಆರ್ಡರ್ ಮಾಡಬಹುದು. 1,500 ಡಾಲರ್ಗೆ (1.23 ಲಕ್ಷ ರೂ.) ಆದ್ಯತೆಯ ಬುಕಿಂಗ್‌ಗಳನ್ನು ಸ್ವೀಕರಿಸಲಾಗುತ್ತಿದೆ.
ವ್ಯಕ್ತಿಗಳು ಮತ್ತು ಕಂಪನಿಗಳಿಂದ ಪ್ರೀ ಆರ್ಡರ್‌ಗಳು ಬಂದಿದ್ದು, ಅವುಳನ್ನು ತೆಗೆದುಕೊಳ್ಳಲಾಗಿದೆ. ಮಾಡೆಲ್- ಎ ಉತ್ಪಾದನೆಯು 2025ರಲ್ಲಿ ಪ್ರಾರಂಭವಾಗುತ್ತದೆ ಎಂದು ಅಲೆಫ್ ತಿಳಿಸಿದೆ.
Join The Telegram | Join The WhatsApp |