ವಿಜಯಪುರ: ‘ಕಾಂಗ್ರೆಸ್‌ನಲ್ಲಿ ಲಿಂಗಾಯತರಿಗೆ ಮತ್ತು ದಲಿತರಿಗೆ ಯಾವುದೇ ಸ್ಥಾನ ಇಲ್ಲ. ಕಾಂಗ್ರೆಸ್‌ನಲ್ಲಿ ಲಿಂಗಾಯತರು ಎಂದಿಗೂ ದ್ವಿತೀಯ ದರ್ಜೆ ನಾಯಕರೇ’ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿರಾಗಾಂಧಿ ಕಾಲದಿಂದಲೂ ಲಿಂಗಾಯತರು ಕಾಂಗ್ರೆಸ್‌ನಲ್ಲಿ ಎರಡನೇ ದರ್ಜೆ ನಾಗರಿಕರಾಗಿದ್ದಾರೆ.
ಮುಂದಿನ ಖುರ್ಚಿಗೆ ಎಂದಿಗೂ ಕರೆದಿಲ್ಲ. ಲಿಂಗಾಯತರಿಗೆ ಕಾಂಗ್ರೆಸ್‌ನಲ್ಲಿ ಗೌರವ ಸಾಧ್ಯವೇ ಇಲ್ಲ, ಬೇಕಾದರೆ ಬಸವರಾಜ ರಾಯರೆಡ್ಡಿ, ಬಿ.ಆರ್.ಪಾಟೀಲ, ಶಾಮನೂರು ಶಿವಶಂಕರಪ್ಪ ಅವರನ್ನು ಕೇಳಿ ಎಂದರು.
ಜಗದೀಶ ಶೆಟ್ಟರ್ ಸೇರಿದಂತೆ ಕೆಲ ಕಾಂಗ್ರೆಸ್ ಮುಖಂಡರು ಬಿಜೆಪಿಯಲ್ಲಿ ಲಿಂಗಾಯತರನ್ನು ಕಡೆಗಣಿಸಲಾಗಿದೆ ಎಂದು ಸುಮ್ಮನೆ ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದರು.