Join The Telegram | Join The WhatsApp |
ಚೆನ್ನಮ್ಮ ಕಿತ್ತೂರು : ಹಳೆ ವೈಷಮ್ಯದ ಹಿನ್ನೆಲೆ ಮಾರಕಾಸ್ತ್ರಗಳಿಂದ ಕೊಚ್ಚಿ ದುಷ್ಕರ್ಮಿಗಳು ವ್ಯಕ್ತಿಯೋರ್ವನ ಕೊಲೆ ಮಾಡಿರುವ ಘಟನೆ ಬೆಳಗಾವಿ ಚೆನ್ನಮ್ಮ ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ ರವಿವಾರ ತಡರಾತ್ರಿ ನಡೆದಿದೆ.
ವಿಜಯ ರಾಮಚಂದ್ರ ಆರೇರ (32) ಮೃತ ಯುವಕನಾಗಿದ್ದು, ಕಲ್ಲಪ್ಪ ಸದೆಪ್ಪಾ ಕ್ಯಾತನವರ (48) ಕೊಲೆ ಆರೋಪಿಯಾಗಿದ್ದಾನೆ.
ತಿಗಡೊಳ್ಳಿ ಗ್ರಾಮದ ವಿಜಯ್ ರಾಮಚಂದ್ರಪ್ಪ ಆರೇರ್(32) ಕೊಲೆಯಾದ ವ್ಯಕ್ತಿ. ಅದೇ ಗ್ರಾಮದ ಪಂಚಾಯತ ಸದಸ್ಯ ಕಲ್ಲಪ್ಪ ಕ್ಯಾತನವರ ನಡುವೆ ನಿನ್ನೆ ರಾತ್ರಿ ಮಾತಿನ ಚಕಮಕಿ ನಡೆದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಇಬ್ಬರು ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದಾರೆ.
ತೀವ್ರ ಗಾಯಗೊಂಡಿದ್ದ ವಿಜಯ್ನನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಕುಟುಂಬಸ್ಥರು ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ವಿಜಯ್ ಸಾವನ್ನಪ್ಪಿದ್ದಾನೆ. ಅತ್ತ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಕಲ್ಲಪ್ಪ ಕ್ಯಾತಣ್ಣವರ್ಗೆ ಚಿಕಿತ್ಸೆ ಮುಂದುವರಿದಿದೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಹಿನ್ನೆಲೆ : 2011ರಲ್ಲಿ ಈಗ ಕೊಲೆಯಾದ ವಿಜಯ್ ಆರೇರ್ ತಂದೆ ತಾಯಿಯನ್ನು ಕೂಡ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈಗ ಅವರ ಮಗ ವಿಜಯ್ ಹತ್ಯೆ ಆಗಿದೆ. ಘಟನೆಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ವಿಜಯ ತಂದೆ-ತಾಯಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯಾಗಿ ಬೇಲ್ ಮೇಲೆ ಹೊರ ಬಂದಿದ್ದ ಆರೋಪಿಗಳೇ ಈಗ ವಿಜಯ್ ಕೊಲೆ ಮಾಡಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ವಿಜಯ್ ಹೆಸರಿನ ಮೇಲಿದ್ದ ಆಸ್ತಿ ಹೊಡೆಯಲು ಸುಪಾರಿ ನೀಡಿದ್ದಾರೆ. ವಿಜಯ್ ಮಾವ ಶಿವಾಜಿ ಸಂಭೋಜಿ ಸುಪಾರಿ ನೀಡಿ ಕೊಲೆ ಮಾಡಿಸಿದ್ದಾರೆ. ನಿನ್ನೆ ತಡರಾತ್ರಿ ಮಚ್ಚು, ಲಾಂಗುಗಳಿಂದ ಹಲ್ಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಗ್ರಾಮ ಪಂಚಾಯತ್ ಎಲೆಕ್ಷನ್ನಲ್ಲಿ ಗೆದ್ದು ವಿಜಯ್ ತಂದೆ ತಾಯಿ ಊರು ಅಭಿವೃದ್ಧಿ ಮಾಡಿದ್ದರು. ಅದನ್ನು ಸಹಿಸದೆ ಅವರನ್ನು 2011ರಲ್ಲಿ ಕೊಲೆ ಮಾಡಲಾಗಿತ್ತು. ಅದೇ ಪ್ರಕರಣದಲ್ಲಿ ಆರೋಪಿಗಳು ಜೈಲುಪಾಲಾಗಿದ್ದರು. ಈಗ ಅದೇ ಗ್ಯಾಂಗ್ ನಿಂದಲೇ ಅವರ ಮಗ ವಿಜಯ್ ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಲಪ್ಪ ಕ್ಯಾತನವರ, ಹಾಗೂ ಭರತ್ ಎಂಬ ಆರೋಪಿಗಳನ್ನು ಕಿತ್ತೂರು ಪೊಲೀಸರ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
ಮೃತ ಯುವಕನ ಸಂಬಂಧಿ ರಮೇಶ ಸಂಭೋಜಿ ದೂರಿನನ್ವಯ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
Join The Telegram | Join The WhatsApp |