ವರನ ವಯಸ್ಸು ವದುವಿಗಿಂತ ಹೆಚ್ಚುರುವುದು ಮೊದಲಿಂದಲೂ ನಡೆದುಕೊಂಡು ಬಂದಿದೆ. ಕಾಲ ಬದಲಾದಂತೆ ಮಹಿಳೆಯರು ತಮಗಿಂತ ಚಿಕ್ಕ ವಯಸ್ಸಿನ ಪುರುಷರನ್ನು ಮದುವೆಯಾಗುತ್ತಿದ್ದಾರೆ
ಮಹಿಳೆಯರು ತಮಗಿಂತ ಚಿಕ್ಕ ವಯಸ್ಸಿನ ಪುರುಷರ ಕಡೆಗೆ ಏಕೆ ಆಕರ್ಷಿತರಾಗುತ್ತಾರೆ ಎಂಬ ಪ್ರಶ್ನೆ ಸಹಜ.
ಈ ಬಗ್ಗೆ ಸಂಶೋಧನೆ ಕೂಡ ನಡೆದಿದೆ. ವಿಜ್ಞಾನಿಗಳು ಈ ಗುಟ್ಟನ್ನು ಬಹಿರಂಗಪಡಿಸಿದ್ದಾರೆ. 30 ರಿಂದ 60 ವರ್ಷದೊಳಗಿನ 55 ಮಹಿಳೆಯರ ಮೇಲೆ ನಡೆಸಿದ ಈ ಸಂಶೋಧನೆಯಲ್ಲಿ ಈ ಮಹಿಳೆಯರು ಸುಮಾರು 5 ವರ್ಷ ತಮಗಿಂತ ಕಿರಿಯ ಪುರುಷರೊಂದಿಗೆ ಸಂಬಂಧ ಹೊಂದಿದ್ದರು. ಹೆಚ್ಚಿನ ಮಹಿಳೆಯರು ತಮಗಿಂತ ಕಿರಿಯ ಪುರುಷರೊಂದಿಗೆ ಡೇಟಿಂಗ್ ಮಾಡಲು ಬಯಸುತ್ತಾರೆ.
ಏಕೆಂದರೆ ಸಮಾಜದ ಹಳೆಯ ನಿಯಮವನ್ನು ಮುರಿಯಬೇಕು ಎಂಬುದು ಅವರ ಉದ್ದೇಶ. ಮತ್ತು ಡೇಟಿಂಗ್ ಮಾಡಿದಾಗ, ಅದು ಅವರ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಯಾವ ವಯಸ್ಸಿನಲ್ಲಿ ಬೇಕಾದರೂ ಯುವಕರಿಗೆ ಮೋಡಿ ಮಾಡಬಲ್ಲೆ ಎಂಬ ಭಾವನೆ ಅವರಲ್ಲಿ ಮೂಡುತ್ತದೆ. ಚಿಕ್ಕ ವಯಸ್ಸಿನ ಯುವಕರೊಂದಿಗಿನ ಸಂಬಂಧ ಉತ್ಸಾಹವನ್ನು ಹೆಚ್ಚಿಸುತ್ತದೆ. ಎಂದು ಅಭಿಪ್ರಾಯವನ್ನು ತಿಳಿಸಿದ್ದಾರೆ.
ಇದಲ್ಲದೆ ಕಿರಿಯ ಪುರುಷರೊಂದಿಗೆ ಲೈಂಗಿಕ ಜೀವನವು ಹೆಚ್ಚು ತೃಪ್ತಿಕರವಾಗಿರುತ್ತದೆ ಎಂದು ಅವರು ನಂಬುತ್ತಾರೆ.
ಕಿರಿಯ ವಯಸ್ಸಿನ ಪುರುಷರಲ್ಲಿ ಫಲವತ್ತತೆ ಹೆಚ್ಚಿರುತ್ತದೆ ಆದ್ದರಿಂದ ಗರ್ಭಿಣಿಯಾಗಲು ಸುಲಭವಾಗುತ್ತದೆ ಎಂದು ಈ ಮಹಿಳೆಯರು ಅಭಿಪ್ರಾಯ ತಿಳಿಸಿದ್ದಾರೆ.
ವಯಸ್ಕ ಮಹಿಳೆಯರು ಆರ್ಥಿಕವಾಗಿ ಸುರಕ್ಷಿತವಾಗಿರುತ್ತಾರೆ. ಆದ್ದರಿಂದ ಆರ್ಥಿಕವಾಗಿ ಸದೃಡವಾದ ಪುರುಷನ ಅವಶ್ಯಕತೆ ಇಲ್ಲ. ಮಾನಸಿಕ ಮತ್ತು ಭಾವನಾತ್ಮಕ ಸೆಕ್ಯುರಿಟಿ ಮಾತ್ರ ಬೇಕಾಗಿರುತ್ತದೆ.
ಮಹಿಳೆ ಯಾವಾಗಲೂ ಸಂಬಂಧಲ್ಲಿ ತನ್ನ ಮಾತೇ ನಡೆಯಬೇಕು ಎಂದು ಅಂದುಕೊಳ್ಳುತ್ತಾಳೆ. ಕಿರಿಯ ಪುರುಷನೊಂದಿಗೆ ಡೇಟಿಂಗ್ ಮಾಡುವುದರಿಂದ ಮಹಿಳೆ ಸಂಬಂಧದ ನಿಯಂತ್ರಣವನ್ನು ತನ್ನ ಕೈಯಲ್ಲಿ ಹಿಡಿದಿಟ್ಟುಕೊಳ್ಳಬಹುದು ಎಂದು ತಿಳಿಸಿದ್ದಾರೆ.