ಚಿನ್ನಾಭರಣ ಹಣಕ್ಕಾಗಿ ಮನುಷ್ಯ ಏನ್ ಬೇಕಾದ್ರೂ ಮಾಡ್ತಾನೆ ಎನ್ನುವುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. 25 ಗ್ರಾಂ ಬಂಗಾರದ ಮಾಂಗಲ್ಯಸರವನ್ನು ನುಂಗಿತು ಅಂತ ಎಮ್ಮೆಯ ಹೊಟ್ಟೆ ಕೊಯ್ದು ತಾಳಿಯನ್ನು ಹೊರತೆಗೆಯಲಾಗಿದೆ. ಈ ಘಟನೆ ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯಲ್ಲಿ ನಡೆದಿದೆ. ಹೌದು.. ಅಂದಾಜು ವನ್ನು ಎಮ್ಮೆ ನುಂಗಿದೆ ಅಂತ ತಿಳಿದ ಕುಟುಂಬಸ್ಥರು ತಕ್ಷಣ ಅದನ್ನು ಹೊರತೆಗೆಯಲು ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಘಟನೆಯ ವೀಡಿಯೊವನ್ನು ಎಎನ್ಐ ಎಕ್ಸ್ನಲ್ಲಿ ಹಂಚಿಕೊಂಡಿದೆ. ವಶಿಮ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಈ ಘಟನೆ ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದೆ.
https://x.com/AHindinews/status/1708547094733345108?s=20
ಈ ಕುರಿತು ಎಎನ್ಐ ಜೊತೆ ಮಾತನಾಡಿದ ಪಶುವೈದ್ಯ ಬಾಳಾಸಾಹೇಬ, ಎಮ್ಮೆಯನ್ನು ಲೋಹಶೋಧಕದಿಂದ ತಪಾಸಣೆ ಮಾಡಲಾಯಿತು. ಈ ವೇಳೆ ಎಮ್ಮೆಯ ಹೊಟ್ಟೆಯಲ್ಲಿ ಮಾಂಗಲ್ಯ ಪತ್ತೆಯಾಗಿದ್ದು, 2 ಗಂಟೆಗಳ ಶಸ್ತ್ರ ಚಿಕಿತ್ಸೆಯ ಬಳಿಕ ಹೊರತೆಗೆಯಲಾಗಿದೆ. ಎಮ್ಮೆಯ ಹೊಟ್ಟೆಗೆ 60-65 ಹೊಲಿಗೆ ಹಾಕಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೆ, ಇಂತಹ ಘಟನೆಗಳು ನಡೆಯದಂತೆ ಜನ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.
ವರದಿಯ ಪ್ರಕಾರ, ಗೀತಾ ಎನ್ನುವರು ಎಮ್ಮೆಗೆ ಬುಟ್ಟಿಯಲ್ಲಿ ಆಹಾರ ಇಟ್ಟು ಸ್ನಾನಕ್ಕೆ ಹೋಗಿದ್ದರಂತೆ. ತಾಳಿಯನ್ನು ಒಂದು ಬುಟ್ಟಿಯಲ್ಲಿ ಇಟ್ಟು ಹೋಗಿದ್ದರು. ಸ್ನಾನ ದಿಂದ ಬಂದ ನಂತರ ತಾಳಿಗಾಗಿ ಹುಡುಕಾಟ ನಡೆಸಿದರು. ಆಮೇಲೆ ಅವರಿಗೆ ಅರ್ಥವಾಯಿತಂತೆ. ಅವರು ಸೋಯಾ ಬೀನ್ ಸಿಪ್ಪೆ, ಕಡಲೆಕಾಯಿ ಸಿಪ್ಪೆ ಇಟ್ಟಿದ್ದ ಬುಟ್ಟಿಯಲ್ಲಿ ತಾಳಿಯನ್ನು ಇಟ್ಟು ಹೋಗಿದ್ದರಂತೆ, ಅದನ್ನು ಎಮ್ಮೆ ತಿಂದಿದೆ ಜೊತೆ ತಾಳಿಯನ್ನೂ ಸಹ ನುಂಗಿದೆ. ಕೂಡಲೇ ಆಕೆ ತನ್ನ ಪತಿಗೆ ಮಾಹಿತಿ ನೀಡಿದ್ದು, ಎಮ್ಮೆಯನ್ನು ಆಸ್ಪತ್ರೆಗೆ ಕರೆದೊಯ್ದು ಆಪರೇಷನ್ ಮಾಡಲಾಗಿದೆ.