Join The Telegram | Join The WhatsApp |
ಧಾರವಾಡ :ಖಾಸಗಿ ಹೋಟೆಲ್ ನಲ್ಲಿ ನಡೆದ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕರಾದ ಅಮೃತ ದೇಸಾಯಿಯವರ ಮಾತಿದು,ಹೌದು “ಎಲ್ಲೊ ಕುಳಿತು ವಿಡಿಯೋ ಮಾಡಿ ನಾನು ಬರುತ್ತೇನೆ ನಾನು ಬರುತ್ತೇನೆ ಹೇಳಿದರೆ ಅಲ್ಲ ಬಾರೋ ನಿನ್ನ ಕಾಯಕತ್ತೇನೆ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಯವರಿಗೆ ಸವಾಲ್ ಹಾಕಿದ ಹಾಲಿ ಶಾಸಕರು.
ಶಾಸಕರ ಮಾತು ಕೇಳಿದ ವಿನಯ್ ಕುಲಕರ್ಣಿ ಅಭಿಮಾನಿಗಳು ತಮ್ಮ ತಮ್ಮ ವಾಟ್ಸಪ್ ಸ್ಟೇಟಸ್ ಗಳಲ್ಲಿ ವಾರ್ ನಡೆಸಿದ್ದಾರೆ. ಶಾಸಕರೇ ನಿಮ್ಮ ಅವಧಿಯಲ್ಲಿ ಎಷ್ಟು ಕೆಲಸ ಮಾಡಿದ್ದೀರಾ ನಿಮ್ಮ ಅಧಿಕಾರ ಇದೆ ಎಂದು ಮಾತನಾಡುತ್ತಿದ್ದೀರಿ ಮಾತನಾಡಿ,
ನಮ್ಮಣ್ಣ “ನೀಲಕಂಠನು ವಿಷ ಕುಡಿದ ಹಾಗೆ ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಬಂದೆ ಬರುತ್ತಾರೆ ಉತ್ತರ ಕೊಟ್ಟೆ ಕೊಡುತ್ತಾರೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿರುವದು ಕಂಡುಬದಿದೆ.
ಇಂತಹ ಹೇಳಿಕೆಗಳನ್ನು ಸಾರ್ವಜನಿಕರು ಮುಂದಿನ ಚುನಾವಣೆಯಲ್ಲಿ ಹೇಗೆ ತೆಗೆದುಕೊಳ್ಳುತ್ತಾರೆ ಎನ್ನುವದಕ್ಕಿಂತ,ಕಾಂಗ್ರೆಸ್ ಹಾಗೂ ಬಿ, ಜೆ, ಪಿ ಎರಡು ಪಕ್ಷಗಳ ಕಾರ್ಯಕರ್ತರಲ್ಲಿ ಬಹಳ ಹುರುಪನ್ನು ತಂದಂತೆ ಕಾಣುತ್ತದೆ.
ವರದಿ: ವಿನಾಯಕ ಗುಡ್ಡದಕೇರಿ
Join The Telegram | Join The WhatsApp |