Join The Telegram | Join The WhatsApp |
ತುಮಕೂರು: ಅನಾಥ ಸಹೋದರಿಯರಾಗಿದ್ದಂತ ಮೂವರು ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗಿರುವಂತ ಧಾರುಣ ಘಟನೆಯೊಂದು ತುಮಕೂರು ಜಿಲ್ಲೆಯ ಚಿಕ್ಕನಾಯನಹಳ್ಳಿಯ ಬರಕನಹಾಲ್ ತಾಂಡಾದಲ್ಲಿ ನಡೆದಿದೆ.
ತಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬರಕನಹಾಲ್ ತಾಂಡಾದಲ್ಲಿ ಇಂದು ಮೂವರು ಅನಾಥ ಸಹೋದರಿಯರು ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆತ್ಮಹತ್ಯೆಗೆ ಶರಣಾದಂತ ಸಹೋದರಿಯರನ್ನು ರಂಜಿತಾ (24), ಬಿಂದು (21) ಹಾಗೂ ಚಂದನಾ (18) ಎಂದು ಗುರುತಿಸಲಾಗಿದೆ.
ಈ ಮೂವರು ಸಹೋದರಿಯರು ಕಳೆದ 9 ದಿನಗಳ ಹಿಂದೆಯೇ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನೆಯಲ್ಲಿ ವಾಸನೆ ಬಂದ ಕಾರಣ, ಇಂದು ಪ್ರಕರಣ ಬೆಳಕಿಗೆ ಬಂದಿದೆ.
ಕೆಲ ವರ್ಷಗಳ ಹಿಂದೆ ತಂದೆ-ತಾಯಿ ಕಳೆದುಕೊಂಡಿದ್ದಂತ ಮೂವರು ಸಹೋದರಿಯರು, ಅಜ್ಜಿಯ ಆಸರೆಯಲ್ಲಿ ಇದ್ದರು.
ಅಜ್ಜಿ ಕೂಡ ಇತ್ತೀಚಿಗೆ ಮರಣ ಹೊಂದಿದ ಬಳಿಕ, ಮೂವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇದೇ ಕೊರಗಿನಲ್ಲಿ ಆತ್ಮಹತ್ಯೆಗೆ ಶರಣಾಗಿರೋದಾಗಿ ಹೇಳಲಾಗುತ್ತಿದೆ.
Join The Telegram | Join The WhatsApp |