Join The Telegram | Join The WhatsApp |
ಹುಬ್ಬಳ್ಳಿ:ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಲಾಯಿತು. ಎಐಎಂಐಎಂ ಜಂಟಿ ಕಾರ್ಯದರ್ಶಿ ವಿಜಯ ಗುಂಟ್ರಾಳ ನೇತೃತ್ವದಲ್ಲಿ
ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗಿಯಾಗಿ ಟಿಪ್ಪು ಜಯಂತಿ ಆಚರಣೆ ಮಾಡಿದರು.
ಟಿಪ್ಪು ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಪಣೆ ಮಾಡಿ ಖುರಾನ್ ವಾಕ್ಯಗಳನ್ನು ಪಠಿಸಿದರು. ಟಿಪ್ಪು ಪರ ಜಯಘೋಷ ಕೂಗಿ
ಶೇರ್ ಏ ಹಿಂದೂಸ್ತಾನ್ ಎಂದು ಜಯಘೋಷ ವಾಕ್ಯ ಮೊಳಗಿಸಿದರು.
ಜಯಂತಿ ಮುಗಿಯುತ್ತಿದಂತೆ ಟಿಪ್ಪು ಪ್ಲೆಕ್ಸ್ ಸ್ಥಳಾಂತರ..
ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ ಮುಗಿದ ತಕ್ಷಣವೇ ಟಿಪ್ಪು ಭಾವಚಿತ್ರವನ್ನು ಪೊಲೀಸರು ಸ್ಥಳಾಂತರ ಮಾಡಿದರು.ಮಹಾನಗರ ಪಾಲಿಕೆ ಹಾಕಿದ್ದ ಷರತ್ತಿನಂತೆ 12 ಗಂಟೆಯವರೆಗೂ ಮಾತ್ರ ಪಾಲಿಕೆ ಅನುಮತಿ ನೀಡಿತ್ತು.
ಸಮಯ ಮುಗಿದ ತಕ್ಷಣವೇ ಭಾವಚಿತ್ರವನ್ನ ಪೊಲೀಸರ ಹೊರಗೆ ಕಳುಹಿಸಿದರು. ಇದರ ಜೊತೆಗೆ ಕಾರ್ಯಕರ್ತರನ್ನು ಹೊರಗೆ ಕಳುಹಿಸಿ ಗೇಟ್ ಗೆ ಬೀಗ ಹಾಕಿದರು.
ಸುಧೀರ್ ಕುಲಕರ್ಣಿ
Join The Telegram | Join The WhatsApp |