ರಾಯಚೂರು: ಸಾಲ ಬಾಧೆ ಮತ್ತು ಕೌಟುಂಬಿಕ ಕಲಹದಿಂದ ಬೇಸತ್ತು ಗ್ರಾಪಂ ಮಾಜಿ ಅಧ್ಯಕ್ಷ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಂಧನೂರು ತಾಲೂಕಿನ ಗಾಂಧಿನಗರ ಗ್ರಾಮದಲ್ಲಿ ನಡೆದಿದೆ.
ಸಾವಿಗೂ ಮುನ್ನ ಫೇಸ್ಬುಕ್ನಲ್ಲಿ ಪೊಸ್ಟ್ ಹಾಕಿ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಾಜಿ ಗ್ರಾಪಂ ಅಧ್ಯಕ್ಷ ದುರ್ಗಪ್ಪ ವೀರಾಪುರ (42) ಮೃತರು. ನನ್ನಿಂದ ಯಾರಿಗಾದರೂ ತೊಂದರೆ ಆಗಿದ್ದರೆ ಕ್ಷಮಿಸಿ ಬಿಡಿ, ನನ್ನ ಮಕ್ಕಳಿಗೆ ನಾನು ನೋವು ಕೊಟ್ಟಿದ್ದೇನೆ. I miss You ಎಂದು ಫೇಸ್ಬುಕ್ನಲ್ಲಿ ಬರೆದು ದುರ್ಗಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.