Join The Telegram | Join The WhatsApp |
ಸಿಂದಗಿ: ಇಂದು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಯ ನರೇಗಾ ದಿವಸ್ ಆಚರಣೆಯನ್ನು ಸಿಂದಗಿ ತಾಲೂಕು ಕೊಕಟನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನರೇಗಾ ಕಾಮಗಾರಿ ಸ್ಥಳದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶ್ರೀ ಬಾಬು ರಾಠೋಡ ರವರು ಅಧ್ಯಕ್ಷತೆ ವಹಿಸಿ ನರೇಗಾ ಕೂಲಿಕಾರರಿಗೆ ವ್ಯಯಕ್ತಿಕ ಕಾಮಗಾರಿಗಳಾದ ತೋಟಗಾರಿಕೆ ಬೆಳೆ, ರೇಷ್ಮೆ, ಕೃಷಿ ಹೊಂಡ, ಬದು ನಿರ್ಮಾಣ ಕಾಮಗಾರಿ ಮಾಡಿಕೊಂಡು ಉತ್ತಮ ಜೀವನ ನಡೆಸಿ ಎಂದು ಸಲಹೆ ನೀಡಿದರು. ನಂತರ 100 ದಿನ ಪೂರ್ಣಗೊಳಿಸಿದ ನರೇಗಾ ಕೂಲಿ ಕಾರ್ಮಿಕರಿಗೆ ಸನ್ಮಾನಿಸಲಾಯಿತು. ಈ ಸಮಯದಲ್ಲಿ ಸಹಾಯಕ ನಿರ್ದೇಶಕರು ಶ್ರೀ ನಿತ್ಯಾನಂದ ಯಲಗೋಡ, ಗ್ರಾಮ ಪಂಚಾಯತ್ ಅಧ್ಯಕ್ಷರ ಪ್ರತಿನಿಧಿ ಶ್ರೀ ಪೈಗಂಬರ್ ಮುಲ್ಲಾ, PDO ವಸಂತ ಅಮೀನಗಡ ಕಾರ್ಯಕ್ರಮ ಕುರಿತು ಪ್ರಸ್ತವಿಕವಾಗಿ ಮಾತನಾಡಿದರು, ಉಪಾಧ್ಯಕ್ಷರು ಶ್ರೀ ರಮೇಶ ಚಿನ್ನಕರ, ಸದಸ್ಯರಾದ ಮಡಿವಾಳಪ್ಪ ಜವಳಗಿ, ಶಂಕ್ರಯ್ಯ ಮಠ, ಪರಶುರಾಮ್ ಜವಳಗಿ, ಬಾಬು ರಾಠೋಡ, , ತಾಲೂಕು ತಾಂತ್ರಿಕ ಸಂಯೋಜಕರು ಶ್ರೀ ಶರಣಗೌಡ ಪಾಟೀಲ್, ಇಂಜಿನಿಯರ್ ಶಂಕರ ಪೂಜಾರಿ, ರವಿ ಜಮಖಂಡಿ, ಸಂತೋಷ ಪಾಸೋಡಿ, ಚಂದ್ರು ಶೇಗುನಸಿ, ಅಕ್ಷತಾ ಪವಾರ್, ಸಾಗರ್ ಶೆಟ್ಟಿ ಭಾಗವಹಿಸಿದ್ದರು.
ಕಾರ್ಯದರ್ಶಿ ಶ್ರೀ ಶಿವಕುಮಾರ್ ಮಠ ಸ್ವಾಗತಿಸಿದರು, ಶ್ರೀ ಪರಶುರಾಮ್ ಚಾವರ ಕಾರ್ಯಕ್ರಮ ವಂದಿಸಿದರು, ಗ್ರಾಮ ಕಾಯಕ ಮಿತ್ರ ತಂಡದಿಂದ ನರೇಗಾ ಕುರಿತು ಹಾಡು ಹಾಡುವದರ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ಸಿಕ್ಕಿತು, ಕಾರ್ಯಕ್ರಮ ಪೂರ್ವದಲ್ಲಿ ನರೇಗಾ ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿತ್ತು CHO ಪ್ರಿಯಾ ರಾಜಗಳೇ, ಆಶಾ ಗಳಾದ ಸುನಂದಾ ಕಾಣ್ಣೂರ, ಗೀತಾ ಮನೂರ, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಶ್ರೀ ಶೇಖರ್ ಕಾಂಬಳೆ, ಮೈಬೂಬ್ ನದಾಫ್, ಇಮಾಮ ಚಬನೂರ್, ಪರಶುರಾಮ್ ಕಣ್ಣೂರ, ರಾಜಾಸಬ್ ಮುಲ್ಲಾ, ಪ್ರಶಾಂತ್ ವಾಲಿಕಾರ, ನಾಗೇಶ್ ತಳವಾರ್, ಶ್ರೀ ಭೀಮರಾಯ ಚೌಧರಿ ತಾಲೂಕು ಐ ಇ ಸಿ ಸಂಯೋಜಕರು ಕಾರ್ಯಕ್ರಮ ನಿರೂಪಣೆ ಮಾಡಿದರು.
Join The Telegram | Join The WhatsApp |