Join The Telegram | Join The WhatsApp |
ಐಗಳಿ: ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆಯ ಆದರ್ಶ ಇಂಗ್ಲಿಷ್ ಮಿಡಿಯಮ್ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬೀಳ್ಕೋಡುವ ಸಮಾರಂಭ ಕಾರ್ಯಕ್ರಮ ಇಂದು ಸಂಜೆ 5:00 ಗಂಟೆಗೆ ಆದರ್ಶ ಶಿಕ್ಷಣ ಸಂಸ್ಥೆ ಅವರಣದಲ್ಲಿ ಜರುಗಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಗಳಿ ಗ್ರಾಮದ ಹಿರಿಯರು ಸಿ ಎಸ್ ನೇಮಗೌಡ ಅವರು ವಹಿಸಲಿದ್ದಾರೆ. ಉದ್ಘಾಟಕರಾಗಿ ಶ್ರೀಮತಿ ರಾಜಶ್ರೀ ಶಂಕರಗೌಡ ಪೋಲಿಸ್ ಪಾಟೀಲ ಅಧ್ಯಕ್ಷರು ಗ್ರಾ.ಪಂ ಐಗಳಿ ಇವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಲಗೌಡ ಎಸ್ ಝರೆ ಉಪವಿಭಾಗಾಧಿಕಾರಿಗಳು ಬೆಂಗಳೂರು (ಕೆ ಎ ಎಸ್) ಅವರು ವಹಿಸಲಿದ್ದಾರೆ.ಮತ್ತು ಎಮ್ ಎನ್ ಸಿಂಧೂರ ಸಿ ಪಿ ಐ ವಿಜಯಪುರ.ಬಸವರಾಜ್ ತಳವಾರ ಕ್ಷೇತ್ರಶಿಕ್ಷಣಾಧಿಕಾರಿಗಳು ಅಥಣಿ.ಶಿವಾಜಿ ಪವಾರ ಪಿಎಸ್ ಐ ಐಗಳಿ. ಸದಾಶಿವ ಎಮ್ ಸಿಂಧೂರ. ಎಸ್ ನಾಯಕ ಮುಂತಾದವರು ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಗ್ರಾಮದ ಮುಖಂಡರು ಶಾಲೆಯ ನಿರ್ದೇಶಕ ಮಂಡಳಿ ಸದಸ್ಯರು ಶಿಕ್ಷಕರು ವಿಧ್ಯಾರ್ಥಿಗಳು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆ ಅಧ್ಯಕ್ಷರು ಶಿವಪ್ರಸಾದ ತೆಲಸಂಗ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Join The Telegram | Join The WhatsApp |