This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

State News

ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ಒಂದು ಸಾವಿರ ಬೀದಿವ್ಯಾಪಾರಿಗಳಿಗೆ ತರಬೇತಿ ಹಾಗೂ ಪ್ರಮಾಣಪತ್ರ ವಿತರಣೆ

Join The Telegram Join The WhatsApp

 

ಬೆಳಗಾವಿ: ನಗರದಲ್ಲಿರುವ ಬೀದಿವ್ಯಾಪಾರಿಗಳ ಕ್ಷೇಮಾಮಿವೃದ್ದಿ, ಜೀವನೋಪಾಯಕ್ಕಾಗಿ ಹಾಗೂ ಉದ್ಯಮಶೀಲತೆ ಅಭಿವೃದ್ದಿಗಾಗಿ, ಮಹಾನಗರ ಪಾಲಿಕೆ ಹಾಗೂ ಆಹಾರ ಪರಿಷ್ಕರಣ ಇಲಾಖೆ ಅಡಿಯಲ್ಲಿ ತರಬೇತಿ ಕಾರ್ಯಾಗಾರ ನಡೆಸಲಾಗಿತ್ತು..

ಬೆಳಗಾವಿಯ ಉತ್ತರ ಹಾಗೂ ದಕ್ಷಿಣ ವಿಭಾಗದ ಎಲ್ಲಾ ಬಿದಿವ್ಯಾಪಾರಿಗಳಿಗೆ ಪ್ರತ್ಯೇಕವಾಗಿ ತರಭೇತಿ ನೀಡಿ ವ್ಯಾಪಾರದಲ್ಲಿ ಸ್ವಚ್ಛತೆ ಕಾಪಾಡಿಕೊಂಡು, ಹೇಗೆ ಅದರಲ್ಲಿ ಯಶಸ್ಸು ಹೊಂದಬೇಕು ಎಂಬ ವಿಚಾರಗಳನ್ನು ತಿಳಿಸಿಕೊಡುವುದೇ ಈ ತರಬೇತಿ ಕಾರ್ಯಾಗಾರದ ಉದ್ದೇಶವಾಗಿತ್ತು.

ಈ ಸಂಧರ್ಭದಲ್ಲಿ ಕಾರ್ಯಕ್ರಮದ ಆಯೋಜಕರಾದ ವೀರೇಶ ಇಂಗಳಗಿ ಮಾತನಾಡಿ, ಕಳೆದ ಹತ್ತು ದಿನಗಳಿಂದ ತರಬೇತಿ ನೀಡುತ್ತಾ ಇದ್ದು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಂದು ಸಾವಿರ ಬೀದಿ ವ್ಯಾಪಾರಿಗಳಿಗೆ, ಶಾಸಕ ಅನಿಲ ಬೆನಕೆ, ಪಾಲಿಕೆ ಆಯುಕ್ತರಾದ ರುದ್ರೇಶ್ ಗಾಳಿ, ಉಪ ಆಯುಕ್ತರಾದ ಭಾಗ್ಯಶ್ರೀ ಹುಗ್ಗಿ ಅವರಿಂದ ಪ್ರಮಾಣಪತ್ರ ವಿತರಣೆ ಮಾಡಲಿದ್ದೇವೆ ಎಂದರು.

ಇನ್ನು ಪಾಲಿಕೆಯ ಪಟ್ಟಣ ವ್ಯಾಪಾರಿ ಸಮಿತಿಯ ಸದಸ್ಯರಾದ ಪ್ರಸಾದ ಕವಳೇಕರ ಮಾತನಾಡಿ, ಸರ್ಕಾರದಿಂದ ನೀಡುವ e ತರಬೇತಿಯಿಂದ ನಮ್ಮ ವ್ಯಾಪಾರಿಗಳಿಗೆ ತುಂಬಾ ಅನುಕೂಲ ಇದೆ, ಇದರ ಮುಖಾಂತರ ಸ್ವಚ್ಛತೆ, ವ್ಯಾಪಾರ ವೃದ್ದಿಕರಣ, ಸರ್ಕಾರಿ ಸೌಲಭ್ಯಗಳ ಬಗ್ಗೆ ಮಾಹಿತಿ ದೊರೆತು ಎಲ್ಲಾ ಬಿದಿವ್ಯಾಪಾರಿಗಳು ಆರ್ಥಿಕವಾಗಿ ಸಭಲರಾಗಲು ಇದೊಂದು ಮಾರ್ಗ ಎಂದರು..

ಇನ್ನು ಮಹಾನಗರ ಪಾಲಿಕೆ ಪಿವಿಸಿ ಸದಸ್ಯ ಹಾಗೂ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘದ ಜಿಲ್ಲಾಧ್ಯಕ್ಷರಾದ ಇಮಾಮ್ ಹುಸೇನ್ ನದಾಫ ಮಾತನಾಡುತ್ತಾ, ಕರೋನಾ ಸಮಯದಲ್ಲಿ ಬೀದಿ ವ್ಯಾಪಾರಿಗಳ ಆರ್ಥಿಕ ಸ್ಥಿತಿ ತುಂಬಾ ಕ್ಷೀಣಿಸಿತ್ತು, ಆಗ ಪಿಎಂ ಸ್ವನಿಧಿ ಅಂತಾ ಪ್ರಧಾನಿಯವರ ಒಂದು ಯೋಜನೆ ಬಂದು ಅದರಿಂದ ಬೀದಿ ಬದೀಯ ವ್ಯಾಪಾರಿಗಳಿಗೆ ಮೊದಲಿಗೆ ಹತ್ತು ಸಾವಿರ, ನಂತರ ಇಪ್ಪತ್ತು ಸಾವಿರ, ಇವೆರಡೂ ತೀರಿದ ಮೇಲೆ ಈಗ ಐವತ್ತು ಸಾವಿರ ಸಾಲವನ್ನಾಗಿ ನೀಡಿ ಆರ್ಥಿಕವಾಗಿ ಮುನ್ನಡೆಯಲು ಸರ್ಕಾರ ಸಹಾಯ ಮಾಡುತ್ತಿದೆ ಎಂದರು..

ಮಹಾನಗರ ಪಾಲಿಕೆಯ ಅಧಿಕಾರಿಗಳಿಂದ ನಮಗೆ ತುಂಬಾ ಸಹಕಾರ ದೊರಕಿದ್ದು, ಇನ್ನೂ ಹಲವಾರು ಸೌಲಭ್ಯಗಳನ್ನು ನಮ್ಮ ವ್ಯಾಪಾರಿಗಳಿಗೆ ತಲುಪುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ, ನಮ್ಮ ವ್ಯಾಪಾರಿಗಳು ಬಹುತೇಕರು ಅವಿದ್ಯಾವಂತರು ಅವರಿಗೆ ಸೌಲಭ್ಯದ ಅರಿವು ಕಡಿಮೆ ಇರುತ್ತೆ, ಅದಕ್ಕಾಗಿ ಮುಂಬರುವ ದಿನಗಳಲ್ಲಿ ವ್ಯಾಪಾರಿಗಳಿಗೆ ಕೂಡಲು ವ್ಯವಸ್ಥಿತ ಖಾಯಂ ಸ್ಥಳ, ಶೌಚಾಲಯ ಹೀಗೆ ಹಲವಾರು ಅನುಕೂಲ ಮಾಡಬೇಕಾಗಿದೆ ಎಂದರು..

ನಗರ ಸಭೆ, ಪಟ್ಟಣ ಪಂಚಾಯತಿ, ಪಾಲಿಕೆ ಹೀಗೆ ಎಲ್ಲ ಕಡೆ ನಮ್ಮ ಸಂಘಟನೆಯ ಬಲ ಪಡಿಸುತ್ತಿದ್ದೇವೆ, ಅದೇ ರೀತಿ ಎಲ್ಲಾ ಸದಸ್ಯರ ಏಳಿಗೆಯನ್ನು ಕೂಡಾ ಮಾಡುತ್ತಿದ್ದೇವೆ, ನಮ್ಮ ಸಂಘಟನೆ ರಾಜಕೀಯದಿಂದ ದೂರ ಇದೆ, ನಾವು ಯಾವ ಪಕ್ಷದ ಪರವೂ ಅಲ್ಲಾ ವಿರೋಧವೂ ಅಲ್ಲಾ, ನಮ್ಮ ಜನರಿಗಾಗಿ, ಅವರ ಕಲ್ಯಾಣಕ್ಕಾಗಿ ಹೋರಾಟವೇ ನಮ್ಮ ಕರ್ತವ್ಯ ಆಗಿದೆ ಎಂದರು..

ಈ ಒಂದು ಪ್ರಮಾಣಪತ್ರ ವಿತರಣಾ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರಾದ ಅನಿಲ ಬೇನಕೆ, ಪಾಲಿಕೆ ಆಯುಕ್ತರಾದ ರುದ್ರೇಶ್ ಗಾಳಿ, ಉಪ ಆಯುಕ್ತರಾದ ಭಾಗ್ಯಶ್ರೀ ಹುಗ್ಗಿ, ಪಾಲಿಕೆ ಸಿಬ್ಬಂದಿ, ವ್ಯಾಪಾರಿ ಸಂಘದ ಪದಾಧಿಕಾರಿಗಳು, ನೂರಾರು ಬೀದಿ ಬದಿ ವ್ಯಾಪಾರಿಗಳು ಭಾಗಿಯಾಗಿದ್ದರು.

ವರದಿ: ಪ್ರಕಾಶ ಕುರಗುಂದ


Join The Telegram Join The WhatsApp
Bharath Vaibhav
the authorBharath Vaibhav

Leave a Reply