ಬೆಂಗಳೂರು : ಮಹಾಲಕ್ಷ್ಮೀ ಲೇಔಟ್ ವಿಧಾನ ಸಭಾ ಕ್ಷೇತ್ರದಲ್ಲಿ ಸುವರ್ಣ ಕರ್ನಾಟಕ ವೀರಶೈವ ಮಹಾಸಭಾ ವತಿಯಿಂದ ದಿನಾಂಕ :,೨೧ ಜನೆವರಿ ೨೦೨೫ರಂದು ಮಂಗಳವಾರ ಬೆಳಿಗ್ಗೆ ೮-೩೦ ಗಂಟೆಗೆ ಮಹಾಲಕ್ಷ್ಮಿ ಲೇಔಟ್ (ಬಸ್ ನಿಲ್ದಾಣ) ಹತ್ತಿರ ನಡೆದಾಡುವ ದೇವರೆಂದೇ ಕರೆಯಲ್ಪಡುವ ಮಹಾ ತಪಸ್ವಿ ತ್ರಿವಿಧ ದಾಸೋಹಿ, ಪದ್ಮ ಭೂಷಣ, ಕರ್ನಾಟಕ ರತ್ನ,ಡಾ.ಶ್ರೀಶ್ರೀಶ್ರೀ. ಶಿವಕುಮಾರ ಮಹಾಶಿವಯೋಗಿಗಳ ೬ನೇ ವರ್ಷದ “ಪುಣ್ಯ ಸ್ಮರಣೋತ್ಸವ”ಮತ್ತು ದಾಸೋಹ ದಿನಚರಣೆ” ಹಮ್ಮಿಕೊಳ್ಳಲಾಗಿದೆ ಸದ್ಭಕ್ತರು ಹಾಗೂ ಸಾರ್ವಜನಿಕರು ಈ ಪುಣ್ಯಸ್ಮರಣೆಗೆ ಆಗಮಿಸಿ ಸ್ವಾಮಿಗಳ ದರ್ಶನ ಪಡೆದು ಪ್ರಸಾದ ಸ್ವೀಕರಿಸಬೇಕೆಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ: 9008521342 ಸಂಪರ್ಕಿಸಿ ಸುವರ್ಣ ಕರ್ನಾಟಕ ವೀರಶೈವ ಮಹಾಸಭಾದ ಸಂಸ್ಥಾಪಕ ರಾಜ್ಯಾಧ್ಯಕ್ಷ ಮೋಹನ್ ಕುಮಾರ್ ಬಿ. ಭಾರತ ವೈಭವ ಹಾಗೂ ಬಿ ವಿ ನ್ಯೂಸ್-5 ಚಾನಲ್ ಪ್ರಕಟಣೆಗೆ ತಿಳಿಸಿದ್ದಾರೆ.
ವರದಿ: ಅಯ್ಯಣ್ಣ ಮಾಸ್ಟರ್