Ad imageAd image
- Advertisement -  - Advertisement -  - Advertisement - 

ಕೇಂದ್ರದ ಸಂಪುಟ ಕಾರ್ಯದರ್ಶಿಯಾಗಿ ಟಿ. ವಿ ಸುಮನಾಥನ್ 

Bharath Vaibhav
ಕೇಂದ್ರದ ಸಂಪುಟ ಕಾರ್ಯದರ್ಶಿಯಾಗಿ ಟಿ. ವಿ ಸುಮನಾಥನ್ 
WhatsApp Group Join Now
Telegram Group Join Now

ನವದೆಹಲಿ: ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಆಡಳಿತಾತ್ಮಕವಾಗಿ ಹಲವು ಮಹತ್ವದ ಬದಲಾವಣೆ ಮಾಡುತ್ತಿದ್ದಾರೆ. ದಕ್ಷ ಹಾಗೂ ಹೊಸ ಅಧಿಕಾರಿಗಳನ್ನು ಹೊಸ ಹೊಸ ಹುದ್ದೆಗಳಿಗೆ ನೇಮಿಸುತ್ತಿದ್ದಾರೆ.

ಇದಕ್ಕೆ ನಿದರ್ಶನ ಎಂಬಂತೆ, ಕೇಂದ್ರ ಸರ್ಕಾರವು ಟಿ.ವಿ.ಸೋಮನಾಥನ್‌ ಅವರನ್ನು ಸಂಪುಟ ಕಾರ್ಯದರ್ಶಿಯನ್ನಾಗಿ ನೇಮಿಸಿದೆ.ಟಿ.ವಿ.ಸೋಮನಾಥನ್‌ ಅವರು ಸದ್ಯ ಸಂಪುಟ ಕಚೇರಿಯಲ್ಲಿ ವಿಶೇಷ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ನೇಮಕಾತಿ ಕುರಿತ ಸಂಪುಟ ಸಮಿತಿಯು ಟಿ.ವಿ.ಸೋಮನಾಥನ್‌ ಅವರನ್ನು ಸಂಪುಟ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಇದುವರೆಗೆ ಅವರು ಸಂಪುಟ ಕಚೇರಿಯಲ್ಲಿ ವಿಶೇಷ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಈಗ ಅವರಿಗೆ ಪದೋನ್ನತಿ ನೀಡಲಾಗಿದೆ’ ಎಂಬುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಕಳೆದ 5 ವರ್ಷಗಳಿಂದಲೂ ರಾಜೀವ್‌ ಗೌಬಾ ಅವರು ಸಂಪುಟ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಹುದ್ದೆಗೆ ಸೋಮನಾಥನ್‌ ಅವರನ್ನು ನೇಮಿಸಲಾಗಿದೆ. ಇವರನ್ನು ಎರಡು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ.

 

 

 

WhatsApp Group Join Now
Telegram Group Join Now
Share This Article
error: Content is protected !!