Join The Telegram | Join The WhatsApp |
ಇದೇ ಭಾನುವಾರ ಸಂಜೆ ೫ರಿಂದ
ಕಳೆದ ಎರಡೂವರೆ ದಶಕದಿಂದ ಕನ್ನಡಿಗರಿಗೆ ಮನರಂಜನೆ ನೀಡುತ್ತಿರುವ ಉದಯ ಟಿವಿ ತನ್ನ ವಿಭಿನ್ನ ಧಾರಾವಾಹಿಗಳಿಂದ ಮನೆಮನ ಗೆದ್ದಿದೆ. ಸಂಜೆ ೬ ರಿಂದ ರಾತ್ರಿ ೧೦ ಗಂಟೆಯವರೆಗೆ ಗೌರಿಪುರದ ಗಯ್ಯಾಳಿಗಳು, ಕನ್ಯಾದಾನ, ಅಣ್ಣತಂಗಿ, ನೇತ್ರಾವತಿ, ಸುಂದರಿ, ರಾಧಿಕಾ, ಜನನಿ, ನಯನತಾರಾ ಹಾಗೂ ಸೇವಂತಿ ಧಾರಾವಾಹಿಗಳು ತಮ್ಮ ವಿಭಿನ್ನ ಕಥಾಹಂದರ ಮತ್ತು ಮಹಿಳಾ ಸಬಲೀಕರಣವನ್ನು ಪ್ರತಿಪಾದಿಸುವ ಮೂಲಕ ನೋಡುಗರ ಮನಗೆದ್ದಿವೆ.
ಇದೀಗ ಉದಯ ಟಿವಿ ಜನರ ಬಳಿಗೆ ಧಾರಾವಾಹಿ ತಂಡಗಳನ್ನು ಕರೆದೊಯ್ಯುವ ಅಭಿಯಾನ ಆರಂಭಿಸಿದೆ. `ಉದಯ ಉತ್ಸವ’ ಶೀರ್ಷಿಕೆಯಡಿ ಧಾರವಾಡ, ದಾವಣಗೆರೆ, ಶಿವಮೊಗ್ಗ, ಕಲಬುರಗಿ, ಬಾಗಲಕೋಟೆ, ಹಾಸನ, ಮೈಸೂರು, ರಾಣೇಬೆನ್ನೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಒಂದೊAದು ಧಾರಾವಾಹಿಯ ಉತ್ಸವ ನಡೆಯುತ್ತಲಿದ್ದು ಇದರ ಅಂಗವಾಗಿ ಒಂಬ್ಬತ್ತನೇ ಕಾರ್ಯಕ್ರಮ `ಸೇವಂತಿ – ಉದಯ ಉತ್ಸವ’ ಬೆಳಗಾವಿಯಲ್ಲಿ ಆಯೋಜಿಸಲಾಗಿದೆ.
ಸೆಪ್ಟಂಬರ್ ೧೮ ರಂದು ಭಾನುವಾರ ಸಂಜೆ ೫ ಗಂಟೆಗೆ ಬೆಳಗಾವಿಯ ಜೀರಗಿ ಸಭಾಭವನದಲ್ಲಿ ನಡೆಯಲಿರುವ `ಸೇವಂತಿ – ಉದಯ ಉತ್ಸವ’ ಕಾರ್ಯಕ್ರಮದಲ್ಲಿ ನೃತ್ಯ, ಹಾಡು, ತಮಾಷೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿರುತ್ತವೆ. ಅಲ್ಲದೇ, ವೀಕ್ಷಕರು ತಮ್ಮ ನೆಚ್ಚಿನ ಧಾರಾವಾಹಿ ತಾರೆಯರ ಜೊತೆ ಮಾತುಕತೆ ನಡೆಸಲು, ಪ್ರಶ್ನೆಗಳನ್ನು ಕೇಳಲು ಅವಕಾಶವಿರುತ್ತದೆ. ಅದೃಷ್ಟಶಾಲಿ ವೀಕ್ಷಕರಿಗೆ ಬಹುಮಾನಗಳಿರುತ್ತವೆ. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ವೀಕ್ಷಕರಿಗಾಗಿ ಮೆಹಂದಿ, ಟ್ಯಾಟೂ, ಪಾಪ್ ಕಾರ್ನ್ ಮತ್ತು ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳು ಇತ್ಯಾದಿ ಚಟುವಟಿಕೆಗಳಿದ್ದು, ವಾರಾಂತ್ಯದ ಸಂಜೆಗೆ ಹೊಸ ರಂಗು ತುಂಬಲಿವೆ.
`ಸೇವಂತಿʼ ಧಾರಾವಾಹಿ ತಂಡದ ಕಲಾವಿದರಾದ ಸೇವಂತಿ (ದೀಪಿಕಾ), ರ್ಜುನ್ (ಶಿಶಿರ್), ಅಶ್ವಿನ್ (ವಿನಯ್), ಪೂಜಾ (ಪೂಜಾ) ಮತ್ತು ಗೌರಿಪುರದ ಗಯ್ಯಾಳಿಗಳು ಧಾರಾವಾಹಿಯ ಗುಲಾಬಿ (ನವ್ಯಾ), ಕೌಶಿಕ್ (ಸಮರ್ಥ್), ನಯನತಾರಾ ಧಾರಾವಾಹಿಯ ರಾಹುಲ್ (ಧನುಷ್), ಜನನಿ ಧಾರಾವಾಹಿಯ ಜನನಿ (ರ್ಷಿಕಾ), ಪೃಥ್ವಿ (ಕಿರಣ್) ಜೊತೆಗೆ ಹಾಸ್ಯಕಲಾವಿದರಾದ ದಾನಪ್ಪ, ಖ್ಯಾತ ಗಾಯಕರು, ಮುಂತಾದವರು ತಮ್ಮ ನೃತ್ಯ, ಹಾಸ್ಯ, ಹಾಡುಗಳ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಉತ್ತಮ ಧಾರಾವಾಹಿಗಳೊಂದಿಗೆ ಹೆಚ್ಚು ಹೆಚ್ಚು ವೀಕ್ಷಕರನ್ನು ತಲುಪಲು ಈ ಕಾರ್ಯಕ್ರಮ ನೆರವಾಗಲಿದೆ ಎಂಬ ಅಭಿಪ್ರಾಯ ವಾಹಿನಿಯ ಮುಖ್ಯಸ್ಥರದು.
Join The Telegram | Join The WhatsApp |