Join The Telegram | Join The WhatsApp |
ಕಲಘಟಗಿ: ತಾಲೂಕಿನ ಕಂದಾಯ ಇಲಾಖೆಯಲ್ಲಿ ಇದಷ್ಟು ಭ್ರಷ್ಟಾಚಾರ ದೇಶದ ಎಲ್ಲಿಯೂ ಇಲ್ಲ ಎಂದು ಧಾರವಾಡದಲ್ಲಿ ನಡೆದ ದಿಶಾ ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಸ್ತಾಪ ಮಾಡಿರವ ವಿಷಯ ಈಗ ಕಲಘಟಗಿ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿದೆ,ಬಿಜೆಪಿ ಯುವ ಮುಖಂಡರಾದ ನಾಗರಾಜ ಗಂಜಿಗಟ್ಟಿ ಅಸಮಾಧಾನ ಹೊರ ಹಾಕಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು
ಕೇಂದ್ರ ಸಚಿವರು ಹೇಳಿರುವ ಹೇಳಿಕೆ ಸತ್ಯವಾದದ್ದು,ಹಾಗದರೇ ಅದನ್ನು ಹೇಳುವದಕ್ಕಿಂತ ಯಾವ ಇಲಾಖೆಯಲ್ಲಿ ಭ್ರಷ್ಟಾಚಾರವಾಗಿದೇಯೂ ಅಂತಹ ಇಲಾಖೆಯಲ್ಲಿನ ಅಧಿಕಾರಿಗಳನ್ನು ಅಮಾನತ್ತುಗೊಳಿಸ ಬೇಕು,ನಾವು ಕಾರ್ಯಕರ್ತರು ಸಹ ಕೇಂದ್ರ ಸಚಿವರಿಗೆ, ಶಾಸಕರಿಗೆ ಈ ಕುರಿತು ಮಾಹಿತಿ ನೀಡಿದಾಗ ಸ್ಥಳೀಯ ಶಾಸಕರು ಅಂತಹ ಅಧಿಕಾರಿಗಳ ಮೇಲೆ ಕ್ರಮಕೈಗೊಂಡಿದ್ದಾರೆ ಎಂದರು.
ಕೇಂದ್ರ ಸಚಿವರು ಸಹ ದಿಶಾ ಸಭೆಯಲ್ಲಿ ಪ್ರಸ್ತಾಪಮಾಡಿ ಹಾಗೆ ಬಿಡದೇ ಬ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ಈ ರೀತಿಯಲ್ಲಿ ಹೇಳಿಕೆ ನೀಡಿದ್ದರಿಂದ ಮುಂಬರುವ ಚುನಾವಣೆಯಲ್ಲಿ ಕಾರ್ಯಕರ್ತರು ಸಂಘಟನೆ ಮಾಡಲು ಹಾಗೂ ಮತಕೇಳಲು ಕಷ್ಟವಾಗುತ್ತದೆ ಎಂದು ತಿಳಿಸಿದರು.
ವರದಿ :ಶಶಿಕುಮಾರ ಕಲಘಟಗಿ
Join The Telegram | Join The WhatsApp |