Join The Telegram | Join The WhatsApp |
ಧಾರವಾಡ: ಕರ್ನಾಟಕದ ಸಾಂಸ್ಕೃತಿಕ ಕೇಂದ್ರವಾಗಿರುವ ಹುಬ್ಬಳ್ಳಿ ಧಾರವಾಡ ಶಹರಗಳಲ್ಲಿ ಈ ಉತ್ಸವ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಭಾರತ ಸರ್ಕಾರ, ಕರ್ನಾಟಕ ಸರ್ಕಾರ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳ, ಸಿಬ್ಬಂದಿಯ ಅವಿರತ ಶ್ರಮ ಇದರ ಹಿಂದೆ ಇದೆ. ದೇಶದ ರಾಷ್ಟ್ರೀಯ ಸಮಗ್ರತೆಗೆ ಇಂತಹ ಉತ್ಸವಗಳು ತುಂಬಾ ಮುಖ್ಯವಾಗುತ್ತವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ನಗರದ ಕೃಷಿ ವಿವಿಯಲ್ಲಿ ಆಯೋಜನೆ ಮಾಡಲಾಗಿದ್ದ 26 ನೇ ರಾಷ್ಟ್ರೀಯ ಯುವ ಜನೋತ್ಸದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು,26 ನೇ ರಾಷ್ಟ್ರೀಯ ಯುವಜನೋತ್ಸವ ಯಾವ ರಾಜ್ಯ ಹಾಗೂ ಜಿಲ್ಲೆಯಲ್ಲಿ ಆಯೋಜಿಸಬೇಕೆಂಬ ಚರ್ಚೆ ಕೇಂದ್ರ ಸರ್ಕಾರ ಮಟ್ಟದಲ್ಲಿ ನಡೆದಾಗ, ಯುವ ವ್ಯವಹಾರಗಳ ಸಚಿವರು ಕರ್ನಾಟಕದ ಹುಬ್ಬಳ್ಳಿ ಧಾರವಾಡ ಅವಳಿ ನಗರಗಳ ಮೇಲೆ ವಿಶ್ವಾಸವಿರಿಸಿ ಅವಕಾಶ ನೀಡಿದರು ಎಂದರು.
ಪೇಡಾ ನಗರಿಯಿಂದ ಯುವಜನತೆ ದೇಶಕ್ಕೆ ಸಿಹಿಯಾದ ಸಂದೇಶ ನೀಡಬೇಕು:
ಹುಬ್ಬಳ್ಳಿ ಧಾರವಾಡದಲ್ಲಿ ಹಲವಾರು ಹೆಸರಾಂತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದರ ಪರಂಪರೆ ಇದೆ. ಪೇಡಾ ನಗರಿಯಿಂದ ದೇಶಕ್ಕೆ ಸಿಹಿಯಾದ ಸಂದೇಶವನ್ನು ಯುವಜನತೆ ನೀಡಬೇಕು ಎಂದು ಕರೆ ನೀಡಿದರು.
ವರದಿ: ವಿನಾಯಕ ಏನ್ ಗುಡ್ಡದಕೇರಿ
Join The Telegram | Join The WhatsApp |