ಹುಬ್ಬಳ್ಳಿ: ಸಾರಿಗೆ ಬಸ್ ಪ್ರಯಾಣಿಕರ ಅನುಕೂಲಕ್ಕಾಗಿ, ಈಗ UPI ಪೇಮೆಂಟ್ ಮೂಲಕವೂ ಟಿಕೆಟ್ ಬಸ್ ಪಡೆಯುವ ವ್ಯವಸ್ಥೆ ಜಾರಿಗೊಳಿಸುತ್ತಿದೆ. ಹೀಗಾಗಿ ಈಗ ಉತ್ತರ ಕರ್ನಾಟಕ ಜನರು ಸಾರಿಗೆ ಬಸ್ ಟಿಕೆಟ್ ಗಳನ್ನು ಯುಪಿಐ ಪಾವತಿ ಮೂಲಕವೂ ಪಾವತಿಸಬಹುದಾಗಿದೆ.
ಹೌದು ಈವರೆಗೆ ಹೋಟೆಲ್ ಊಟ, ರೇಷನ್ ಸೇರಿದಂತೆ ವಿವಿಧ ಕಡೆಗಳಲ್ಲಿ ಯುಪಿಐ ಪಾವತಿ ವ್ಯವಸ್ಥೆ ಜಾರಿಯಲ್ಲಿತ್ತು. ಈಗ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಟಿಕೆಟ್ ಗಳ ಹಣವನ್ನು ಯುಪಿಐ ಮೂಲಕ ಪಾವತಿಸಬಹುದಾಗಿದೆ.
ನಿನ್ನೆಯಿಂದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿಯ ಗ್ರಾಮಾಂತರ ಡಿಪೋ-3ರಲ್ಲಿ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ಆರಂಭದಲ್ಲಿ ಒಂದು ಬಸ್ ಗಳಲ್ಲಿ ಈ ವ್ಯವಸ್ಥೆಯನ್ನು ಪರಿಚಯಿಸಲಾಗಿತ್ತು. ಇಂದು ಐದು ಬಸ್ಸುಗಳಲ್ಲಿ, ನಾಳೆಯಿಂದ ಹತ್ತು ಬಸ್ಸುಗಳಲ್ಲಿ ಯುಪಿಐ ಪಾವತಿ ಮೂಲಕ, NWKSRTC ಬಸ್ ಟಿಕೆಟ್ ಗಳ ಹಣವನ್ನು ಪಾವತಿಸಬಹುದಾದಂತ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿರುವಂತ ಹುಬ್ಬಳ್ಳಿಯ ಗ್ರಾಮಾಂತರ 3ನೇ ಘಟಕದ ಡಿಪೋ ಮ್ಯಾನೇಜರ್ ನಿತಿನ್ ಎಂಬುವರು, ನಿನ್ನೆಯಿಂದ NWKSRTC ಬಸ್ಸುಗಳಲ್ಲಿ ಯುಪಿಐ ಪಾವತಿ ವ್ಯವಸ್ಥೆ ಮೂಲಕ ಟಿಕೆಟ್ ಖರೀದಿ ಮಾಡೋದನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ ಎಂದಿದ್ದಾರೆ.