Join The Telegram | Join The WhatsApp |
ಹರಪನಹಳ್ಳಿ: ಸೆಪ್ಟೆಂಬರ್ 19 ರ ಬೆಳಿಗ್ಗೆ ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿ ಸ್ಥಳದಿಂದ 60 ಕೆರೆಗಳಿಗೆ ನದಿ ನೀರು ತುಂಬಿಸುವ ನಿಟ್ಟೂರಿನ ಜಾಕ್ ವೆಲ್ ಮತ್ತು ಪಂಪ್ ಹೌಸ್ ವರೆಗೆ ಪಾದಯಾತ್ರೆ ಮೂಲ ಕ ತೆರಳಿ ಮುತ್ತಿಗೆ ಹಾಕಿ ಪ್ರತಿಭಟಿಸುತ್ತೇವೆ ಹೋರಾಟ ಸಮಿತಿಯ ಅಧ್ಯಕ್ಷೆ ಎಂ.ಪಿ.ವೀಣಾ ಮಹಾಂತೇಶ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲ್ಲೂಕಿನ ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜು ಹಾಗೂ ತಾಲೂಕಿನ ಕೆರೆಗಳಿಗೆ ನದಿ ನೀರು ತುಂಬಿಸುವ ಈ ಭಾಗದ ಜನತೆಯ ಬಹುದಿನಗಳ ಕನಸ್ಸಾಗಿದ್ದು, ಕಾಮಗಾರಿ ಆರಂಭವಾಗಿ ಅಮೆ ಗತಿಯಲ್ಲಿ ಕೆಲಸ ಸಾಗುತ್ತಿದೆ ಈ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಅವರ ಸಚಿವ ಸಂಪುಟದಲ್ಲಿ ಎಂ.ಬಿ.ಪಾಟೀಲ್ ಅವರುಜಲಸಂಪನ್ಮೂಲ ಸಚಿವರಾಗಿದ್ದರು ಹಾಗೂ ದಿ.ಎಂ.ಪಿ.ರವೀಂದ್ರ ಶಾಸಕರಾಗಿದ್ದ ಸಂದರ್ಭದಲ್ಲಿ ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜ್ ಹಾಗೂ 60 ಕೆರೆಗಳಿಗೆ ನದಿ ನೀರು ತುಂಬಿಸುವ ಯೋಜನೆಗಳು ಮಂಜೂರಾತಿ ಪಡೆದಿದ್ದವು.
ಈ ಯೋಜನೆಗಳು 2020 ಕ್ಕೆ ಪೂರ್ಣಗೊಳ್ಳಬೇಕಿತ್ತು, ಆದರೆ ಈವರೆಗೂ ಪೂರ್ಣಗೊಂಡ್ಡಿಲ್ಲ ಇದಕ್ಕೆ ಇಲ್ಲಿಯ ಶಾಸಕರ ನಿರ್ಲಕ್ಷ್ಯ ವೇ ಕಾರಣ ಎಂದು ಅವರು ದೂರಿದರು.
ಕೆರೆಗಳಿಗೆ ನದಿ ನೀರು ತುಂಬಿಸುವ ಯೋಜನೆ 208 ಕೋಟಿ ರೂ.ಗಳದ್ದು ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿಗೆ 58 ಕೋಟಿ ರೂ ಮಂಜೂರಾಗಿತ್ತು. ಇದು ಜನರ ತೆರಿಗೆ ಹಣವಾಗಿದ್ದು, ರೈತರಿಗೆ ಅನುಕೂಲ ಮಾಡಿ ಕೊಡುವ ಇಚ್ಚಾಶಕ್ತಿ ಈ ಸರ್ಕಾರಕ್ಕೆ ಇಲ್ಲವಾಗಿದೆ ಎಂದರು.ಹರಪನಹಳ್ಳಿ ತಾಲೂಕಿನ ಯೋಜನೆಗಳಿಗೆ ಮಾತ್ರ ಏಕೆ ಇನ್ನೂ ಮುಕ್ತಿ ಸಿಕ್ಕಿಲ್ಲ ಎಂದು ಪ್ರಶ್ನಿಸಿದರು.
ಕೇಂದ್ರ ಮತ್ತು ರಾಜ್ಯ ಹಾಗೂ ಸ್ಥಳೀಯ ಶಾಸಕರು ಬಿಜೆಪಿಯವರು ಅಂದರೆ ದೇಶದಲ್ಲಿ ತ್ರಿಬಲ್ ಎಂಜಿನ್ ಸರ್ಕಾರಗಳು ಇದ್ದರೂ ಸಹ ಇಂತಹ ಜನಪ್ರಿಯ ಯೋಜನೆಗಳನ್ನು ಅನುಷ್ಠಾನಕ್ಕೆ ತರದೆ ಶಾಸಕರ ನಿರ್ಲಕ್ಷ್ಯತನದಿಂದ ನೆನೆಗುದಿಗೆ ಬಿದ್ದಿವೆ ಎಂದು ಅವರು ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ಧ ಹರಿಹಾಯ್ದರು.
ಆದ್ದರಿಂದ ಈ ಯೋಜನೆಗಳ ಅನುಷ್ಠಾನಕ್ಕಾಗಿ ಹೋರಾ ಟ ಹಮ್ಮಿಕೊಂಡಿದ್ದು, ಹೋರಾಟಗಾರರು ಸೇರಿದಂತೆ
ಎಲ್ಲರೂ ಇದನ್ನು ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.
ಈಗ ನಡೆದಿರುವ ಅಧಿವೇಶನದಲ್ಲಿ ಈ ವಿಚಾರ ಪ್ರಸ್ಥಾಪ ಮಾಡಲು ವಿಪಕ್ಷ ನಾಯಕರಿಗೆ ಮನವಿ ಸಲ್ಲಿಸುತ್ತೇವೆ ಡಿಸೆಂಬರ್ ಒಳಗೆ ಕೆರೆಗಳಿಗೆ ನದಿ ನೀರು ತುಂಬಿಸಬೇಕು ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಉಪಾಧ್ಯಕ್ಷ ಸಿದ್ದಲಿಂಗನ ಗೌಡ, ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದಾದಾಪಿರಮಕರಬ್ಬಿ,ಹರಪನಹಳ್ಳಿ ಬ್ಲಾಕ್ ಅಸಂಘಟಿತ ಕಾರ್ಮಿಕ ಅಧ್ಯಕ್ಷರಾದ ಗುರು ಬಸವರಾಜ್ , ಬಳ್ಳಾರಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ತಳವಾರ್ ಕಾರ್ತಿಕ್ , ಬಳ್ಳಾರಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಹೆಚ್ ನೇತ್ರ ,ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷರಾದ ಎನ್. ಎಸ್.ಯು.ಐ ಶಿವರಾಜ್ ತಳವಾರ್ ಡಾಕ್ಟರ್ ಕೊಟ್ರೇಶ್ ಶೇಖರ್ ನಾಯಕ್, ತಿಮ್ಲಾಪುರ ಮೂಡಲಪ್ಪ, ತಿಮ್ಲಾಪುರ ನಾಗರಾಜ್, ಶ್ರುತಿ, ಭಾಗ್ಯ ರೇಣುಕಾ, ಗಾಯತ್ರಿ ದೇವಿ ಬೆಣ್ಣೆಹಳ್ಳಿ,ರಾಮನಗೌಡ ಮತ್ತಿರರು ಉಪಸ್ಥಿತರಿದ್ದರು.
Join The Telegram | Join The WhatsApp |