ಗೋಕಾಕ : -ಚೆನ್ನಮ್ಮಾ ಕಿತ್ತೂರಿನಲ್ಲಿ ಅ. 23, ರಿಂದ 25ರ ವರೆಗೆ ನಡೆಯಲಿರುವ ಕಿತ್ತೂರ ಉತ್ಸವದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಕಿತ್ತೂರ ಚೆನ್ನಮ್ಮಾ ವೀರ ಜ್ಯೋತಿಯನ್ನು ಗೋಕಾಕ ಪಟ್ಟಣದ ನಾಕಾ ನಂಬರ್1ರಲ್ಲಿ ಅದ್ದೂರಿಯಾಗಿ ತಾಲಾಕಾಡಳಿತದಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಮೂಡಲಗಿಯಿಂದ ಕಲ್ಲೋಳಿ ಮಾರ್ಗವಾಗಿ ಗೋಕಾಕ ನಗರಕ್ಕೆ ಆಗಮಿಸಿದ ವೀರ ಜ್ಯೋತಿಯನ್ನು ನಾಕಾ ನಂಬರ್ 1 ರಲ್ಲಿನ ಚೆನ್ನಮ್ಮಾ ವೃತ್ತಕ್ಕೆ ಮಾಲಾರ್ಪಣೆ ಮಾಡಿ ತಹಶೀಲ್ದಾರ ಮೊಹನ ಬಸ್ಮೇ ಯವರು ಜ್ಯೋತಿ ಹೊತ್ತ ವಾಹನಕ್ಕೆ ಪೂಜೆ ನೆರವೇರಿಸಿ, ತಾಲೂಕಿಗೆ ಸ್ವಾಗತಿಸಿಕೊಂಡರು.
ನಂತರ ವಾದ್ಯ ವೈಭವದೊಂದಿಗೆ ಮೆರವಣಿಗೆ ಮುಂದೆ ಜಲಕುಂಭ ಹೊತ್ತ ಸುಮಂಗಲೆಯರು ವೀರ ರಾಣಿ ಚೆನ್ನಮ್ಮಾಜಿ ಗೆ ಜೈ ಘೋಷಣೆಯನ್ನು ಹಾಕುತ್ತಾ ವೀರ ಜ್ಯೋತಿಯೊಂದಿಗೆ ಕಲ್ಲೋಳಿ ಹನುಮಂತ ದೇವಸ್ಥಾನದಿಂದ ಪ್ರಾರಂಭವಾದ ಭವ್ಯ ಮೆರವಣಿಗೆ ಗೊಂಬಿ ಗುಡಿ, ಬಾಪನಾ ಚೌಕ್, ಸಂಗೊಳ್ಳಿ ರಾಯನ್ನ ವೃತ್ತ ಬಸ್ ನಿಲ್ದಾಣ,ಅಂಬೇಡ್ಕರ್ ವೃತ್ತದ ವರೆಗೆ ಸಾಗಿಬಿಳ್ಕೊಡಲಾಯಿತು.
ಈ ಸಮಯದಲ್ಲಿ ತಾಲೂಕಾ ದಂಡಾಧಿಕಾರಿ ಮೊಹನ ಬಸ್ನೆ ಗೋಕಾಕ ನಗರ ಠಾಣೆಯ
ಪಿಎಸ್ಐ ಕೆಂಪಣ್ಣ ಗುಡಜ,ಪುರಸಭೆಯ ಮುಖ್ಯಾದಿಕಾರಿ ಶಿವಾನಂದ ಹೀರೆಮಠ,ಕ್ಷೇತ್ರ ಶಿಕ್ಷಣಾಧಿಕಾರಿ ಜಿ,ಬಿ, ಬಳಿಗಾರ, ಸಿಡಿಪಿಓ ಶ್ರೀಮತಿ ಸಿಲವಂತ ಉಪತಹಸಿಲ್ದಾರ ಸಾಗರ ಕಟ್ಟಿಮನಿ ಸೇರಿದಂತೆ ಕನ್ನಡ ಪರ ಸಂಘಟನೆಗಳ ಕಾರ್ಯಕರ್ಯರು ಎಲ್ಲ ಸರ್ಕಾರಿ ಅಧಿಕಾರಿಗಳು, ಶಾಲಾ ಶಿಕ್ಷಕರು ಗ್ರಾಮಸ್ಥರು ಉಪಸ್ಥಿತರಿದ್ದರು.