ರಾಮದುರ್ಗ:- ವಿದ್ಯಾ ಪ್ರಸಾರಕ ಸಮಿತಿ ಶಿಕ್ಷಣ ಮಹಾವಿದ್ಯಾಲಯ ದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷರಾದ ಟಿ ದಾಮೋದರ್ ರವರು ಹಾಗೂ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಪಿ ಎಂ ಜಗತಾಪ ಹಾಗೂ ಪಿ ಎಲ್ ದೊಡ್ಡಮನಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಕಾರ್ಯಕ್ರಮವು ಹಳ್ಳಿಯ ವಾತಾವರಣ ಹಾಗೂ ದೇಶದ ಮತ್ತು ರಾಜ್ಯದ ಸಂಸ್ಕೃತಿಯನ್ನು ಎತ್ತಿ ಹಿಡಿದು ಹಾಗೂ ಅದರ ಒಂದು ಪ್ರಾಮುಖ್ಯತೆಯನ್ನು ತೋರಿಸುವಂತಿತ್ತು.
ಸಂಸ್ಥೆಯ ಅಧ್ಯಕ್ಷರಾದ ಟಿ ದಾಮೋದರ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನೀವು ನಡೆಸಿದ ಐದು ದಿನಗಳ ಸಂಸ್ಕೃತಿಕ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಂಡಿದ್ದೇನೆ ಹಾಗೂ ಇಂತಹ ಚಟುವಟಿಕೆಗಳ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಅದೇ ರೀತಿ ಸಂಸ್ಥೆಯ ಮಾಜಿ ಅಧ್ಯಕ್ಷ ಪಿ ಎಂ ಜಗತಾಪ್ ಮಾತನಾಡಿ ಕಳೆದ 19 ವರ್ಷಗಳಿಂದ ಸಾವಿರಾರು ಪ್ರಶಿಕ್ಷಣಾರ್ಥಿಗಳ ಬದುಕು ಕಟ್ಟಲು ಮಹಾವಿದ್ಯಾಲಯ ಹಲವಾರು ಹಾಗೂ ಹಲವು ಸೌಲಭ್ಯಗಳ ಜೊತೆಗೆ ದೇಶದ ಸಂಸ್ಕೃತಿ, ಸಂಸ್ಕಾರ ನೀಡುವ ಕಾರ್ಯಕ್ರಮ ಮಾಡುತ್ತಿದೆ ಎಂದು ಈ ವೇಳೆ ಪ್ರಶಿಕ್ಷಣಾರ್ಥಿಗಳ ಜೊತೆಗೆ ತಮ್ಮ ಹಿತನುಡಿಗಳನ್ನು ಹಂಚಿಕೊಂಡರು.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಿ,ಇಡಿ ವಿದ್ಯಾಲಯದ ಸಂಯೋಜಕರಾದ ಎಸ್ ಲೇಪಾಕ್ಷಿ ಸಂಸ್ಥೆಯ ಕಾರ್ಯಧ್ಯಕ್ಷರಾದ ಪಿ ಎಲ್ ದೊಡ್ಡಮನಿ, ಡಾ ಆರ್ ಎಲ್ ಕುಳ್ಳೂರ , ಹಾಗೂ ಸಂಸ್ಕೃತಿ ಕಾರ್ಯಕ್ರಮದ ಸಂಯೋಜಕ ಎಮ್ ಆರ್ ಕುಂಬಾರ, ಎನ ಎನ ವಾಳೇಕರ , ವಿದ್ಯಾರ್ಥಿ ಪ್ರತಿನಿಧಿ ಮಂಜುನಾಥ್ ರಜಪೂತ, ಹಾಗೂ ಸುಜಾತ ಕೊಳ್ಳಾರ್, ಹಾಗು ನಿರೂಪಣೆ ಸವಿತಾ ಚೀಲದಮನಿ, ವರದಿ ವಾಚನ ಪ್ರಸನ್ನ ರಾವಳ, ಹಾಗೂ ವಂದನಾರ್ಪಣೆ ಬಸವರಾಜ್ ಬಿ ಅವರ ಸಮ್ಮುಖದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬಂದಿತು.
ವರದಿ:- ಮಂಜುನಾಥ ಕಲಾದಗಿ