Join The Telegram | Join The WhatsApp |
ಮೊಳಕಾಲ್ಮುರು: ತಾಲೂಕಿನ ನಾಗಸಮುದ್ರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 33 ಮಂದಿ ಅಸ್ವಸ್ಥರಾಗಿರುವ ಘಟನೆ ನಡೆದಿದೆ.
ಬುಧವಾರದಂದು ಪ್ರಥಮವಾಗಿ ಪ್ರಕರಣಗಳು ಕಾಣಿಸಿಕೊಂಡಿದ್ದು ಗುರುವಾರದಂದು ಕೂಡ ಪ್ರಕರಣಗಳ ಸಂಖ್ಯೆ ಇನ್ನು ಕೂಡ ಹೆಚ್ಚಾಗಿದ್ದು ಇವರನ್ನು ಚಿಕಿತ್ಸೆಗಾಗಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ರಾಂಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.
ತೀವ್ರ ಅಸ್ವಸ್ಥರಾಗಿದ್ದ ಓಬಕ್ಕ ಹಾಗೂ ಚಾಮುಂಡಮ್ಮ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಗಸಮುದ್ರ ಗ್ರಾಮದಲ್ಲಿ ಕುಡಿಯುವ ನೀರಿನ ಮುಖ್ಯ ಪೈಪ್ ಹೊಡೆದು ನೀರು ಕಲುಷಿತಗೊಂಡಿರುವ ಕಾರಣ ಈ ಅವಘಡ ಸಂಭವಿಸಿದೆ ಎಂದೂ ಶಂಕಿಸಲಾಗಿದೆ.
ನೀರಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ಆರೋಗ್ಯ ಇಲಾಖೆ ತಂಡವು ಗ್ರಾಮದಲ್ಲಿ ಬೀಡು ಬಿಟ್ಟಿದ್ದು ಶಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಸ್ಥಳದಲ್ಲಿ ತುರ್ತು ಸಂದರ್ಭಕ್ಕಾಗಿ ಆಂಬುಲೆನ್ಸ್ ರವಾನಿಸಿಲಾಗಿದೆ.
ಗ್ರಾಮದಲ್ಲಿ ಜೆಜೆಎಂ ಯೋಜನೆ ಪೈಪ್ ಹಾಕುವಾಗ ಕೆಲ ಪೈಪುಗಳಿಗೆ ಹಾನಿಯಾಗಿದೆ ಇದರಿಂದಾಗಿ ಪೈಪ್ ಸೋರಿಕೆಯಾಗಿ ಚರಂಡಿ ನೀರು ಸೇರಿಕೊಂಡಿದೆ ಎಂದೂ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಪೈಪ್ ಗಳ ದುರಸ್ತಿ ಕಾರ್ಯ ಮಾಡಲಾಗುತ್ತಿದ್ದು ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದ ಎರಡು ನೀರಿನ ಸ್ಯಾಂಪಲ್ ಪೈಕಿ ಒಂದು ನೀರಿನ ಸ್ಯಾಂಪಲ್ ಕುಡಿಯಲು ಯೋಗ್ಯವಲ್ಲ ಎಂದು ವರದಿ ಬಂದಿದೆ.
ಘಟನೆ ಕುರಿತಾಗಿ ಚರ್ಚೆ ನಡೆಸಲು ಮತ್ತು ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ ಮೂಡಿಸುವ ಸಲುವಾಗಿ ಗುರುವಾರದಂದು ಗ್ರಾಮದಲ್ಲಿ ಗ್ರಾಮ ಸಭೆ ಹಮ್ಮಿಕೊಳ್ಳಲಾಗಿದೆ.
ಈಗಾಗಲೇ ಗ್ರಾಮದಲ್ಲಿ ತುರ್ತಾಗಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆದಿದ್ದು ಅಗತ್ಯವಿರುವ ಔಷಧಿ ದಾಸ್ತಾನು ಮಾಡಲಾಗಿದೆ ಮನೆಗಳ ಕುಡಿಯುವ ನೀರಿನ ಸ್ಯಾಂಪಲ್ ಗಳನ್ನು ಸಂಗ್ರಹಿಸಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳೀಯ ಗ್ರಾಮ ಪಂಚಾಯತಿಯು ಜನರಿಗೆ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಪರ್ಯಾಯವಾಗಿ ಒದಗಿಸುತ್ತಿದೆ.
ವರದಿ : ಪಿಎಂ ಗಂಗಾಧರ
Join The Telegram | Join The WhatsApp |