ಬೆಂಗಳೂರು : ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಮಧ್ಯಪ್ರವೇಶಿಸಿಬೇಕು ಎಂದು ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಕ್ತದಲ್ಲಿ ಒಂದು ಲಕ್ಷ ಪತ್ರ ಬರೆಯುವ ಆಂದೋಲನಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣಗೌಡ ಚಾಲನೆ ನೀಡಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣಗೌಡ, ‘ರಾಜ್ಯದಲ್ಲಿ ಮಳೆಯಿಲ್ಲದೇ ರೈತರು ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ ತಮಿಳುನಾಡಿಗೆ ನೀರು ಹರಿಸುವುದು ಅಸಾಧ್ಯವಾಗಿದೆ. ಆದ್ದರಿಂದ ಪ್ರಧಾನಿ ಮಧ್ಯಪ್ರವೇಶಿಸಬೇಕು ಎಂದು ರಾಜ್ಯದ ಎಲ್ಲ ಜಿಲ್ಲೆಯ ಕಾರ್ಯಕರ್ತರು ರಕ್ತದಲ್ಲಿ ಒಂದು ಲಕ್ಷಕ್ಕೂ ಅಧಿಕ ಪತ್ರ ಬರೆದು ಒತ್ತಾಯಿಸಲಿದ್ದಾರೆ ಎಂದು ತಿಳಿಸಿದರು.
ರಾಜಕೀಯಕ್ಕಾಗಿ ಒಂದು ರಾಜ್ಯವನ್ನು ಮತ್ತೊಂದು ರಾಜ್ಯದ ಮೇಲೆ ಎತ್ತಿಕಟ್ಟುವ ಕೆಲಸವನ್ನು ಬಿಟ್ಟು ಪ್ರಧಾನಿಗಳು ಮಧ್ಯಸ್ಥಿಕೆ ವಹಿಸಬೇಕು. ಭವ್ಯ ಭಾರತದಲ್ಲಿ ಮತ್ತೊಂದು ರಾಷ್ಟ್ರವನ್ನು ಕಟ್ಟುವಶಕ್ತಿ ಕರ್ನಾಟಕಕ್ಕಿದೆ. ಏಕೆಂದರೆ ನಮ್ಮ ನಾಡು ಏಕೆಂದರೆ ನಮ್ಮ ನಾಡು ಬೇರೆಲ್ಲಾ ರಾಜ್ಯಗಳಿಗಿಂತ ಸಂಪದ್ಭರಿತವಾಗಿದ್ದು ಅಧಿಕ ತೆರಿಗೆ ಪಾವತಿಸಲಾಗುತ್ತಿದೆ.
ಕರ್ನಾಟಕದಿಂದ ಭಾರತವೇ ಹೊರತು ಭಾರತದಿಂದ ಕರ್ನಾಟಕವಲ್ಲ. ಇದರ ಸತ್ಯ ತಿಳಿಸಲು ಪತ್ರ ಬರೆಯುತ್ತಿದ್ದೇವೆ. ಎರಡು ರಾಜ್ಯಗಳ ನಡುವೆ ಬೆಂಕಿ ಹೊತ್ತಿ ಉರಿಯುತ್ತಿದೆ. ಈಗಲಾದರೂ ನೀವು ಎರಡೂ ರಾಜ್ಯಗಳ ನಡುವೆ ಮಧ್ಯಸ್ಥಿಕೆ ವಹಿಸಿ ಕಾವೇರಿ ಉಳಿಸುವ ಕೆಲಸವನ್ನು ಮಾಡಬೇಕು. ಒಕ್ಕೂಟ ವ್ಯವಸ್ಥೆಯ ಹಿತ ಕಾಯಬೇಕು ಎಂದು ಹೇಳಿದರು.
ಮಲತಾಯಿ ಧೋರಣೆ ಮಾಡಿದರೆ ಒಕ್ಕೂಟದಿಂದ ಹೊರ ಹೋಗಬೇಕಾಗುತ್ತದೆ’ ಎಚ್ಚರಿಸಿದರು.’ಆ.9 ರಂದು ವೇದಿಕೆಯ 10 ಸಾವಿರ ಕಾರ್ಯಕರ್ತರು ದೆಹಲಿಗೆ ತೆರಳಿ ಆ.10 ರಂದು ಜ೦ತಮಂತರ್ನಲ್ಲಿ ಪ್ರತಿಭಟನೆ ನಡೆಸಲಿದ್ದೇವೆ. ಇನ್ನಾದರೂ ಕೇಂದ ಸರ್ಕಾರ ಎಚ್ಚೆತ್ತು ರಾಜ್ಯಕ್ಕಾಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿದರು.