Join The Telegram | Join The WhatsApp |
ದಾವಣಗೆರೆ : ಮದುವೆಯಾಗಿ ಇನ್ನೂ ಆರು ತಿಂಗಳು ಅಗಿತ್ತು. ಹೊಸ ಹೊಸ ಕನಸುಗಳ ಜೊತೆ ಪತಿಯ ಮನೆಗೆ ಬಂದಿದ್ದ 20 ವರ್ಷದ ಯುವತಿ ಗಂಡನ ಅನುಮಾನಕ್ಕೆ ಬಲಿಯಾಗಿದ್ದಾಳೆ.
ರಶ್ಮಿಅಲಿಯಾಸ್ ರೇಷ್ಮಾಕೊಲೆಯಾದ ನವ ವಿವಾಹಿತೆ. ಮದುವೆಯಾದ ಒಂದು ತಿಂಗಳ ನಂತರ ರಶ್ಮಿಗರ್ಭಿಣಿ ಆಗಿದ್ದಾರೆ.
ಆದ್ರೆ, ಪತಿ ಮೋಹನ್ ಪತ್ನಿಯ ಮೇಲೆ ಅನುಮಾನಗೊಂಡು ಕೊಲೆ ಮಾಡಿ, ದಟ್ಟ ಅರಣ್ಯ ಪ್ರದೇಶದಲ್ಲಿ ರಶ್ಮಿಶವ ಹೂತು ಹಾಕಿರುವ ಘಟನೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗ೦ಗಗೊಂಡನಹಳ್ಳಿಯಲ್ಲಿ ಈ ಕೊಲೆ ನಡೆದಿದೆ.
ಇದೇ ವರ್ಷ ಏಪ್ರಿಲ್ 13ರಂದು ದಾವಣಗೆರೆ ತಾಲೂಕಿನ ಐಗೂರು ಗ್ರಾಮದ ಲೋಕೇಶಪ್ಪ ರತ್ನಮ್ಮದಂಪತಿಯ ಕೊನೆಯ ಪುತ್ರಿ ರಶ್ಮಿಯನ್ನು ಗಂಗಗೊಂಡನಹಳ್ಳಿಯ ನಿವಾಸಿ ಮೋಹನ್ ಜೊತೆ ಮದುವೆ ಮಾಡಿಕೊಡಲಾಗಿತ್ತು.
ಎರಡು ಕುಟುಂಬಗಳ ಸಮ್ಮುಖದಲ್ಲಿ ಮೋಹನ್ ಮತ್ತು ರಶ್ಮಿಮದುವೆಯನ್ನು ಅದ್ಧೂರಿಯಾಗಿ ಮಾಡಿಕೊಡಲಾಗಿತ್ತು. ಆದ್ರೆ ಮದುವೆಯಾದ ಆರು ತಿಂಗಳಲ್ಲಿಯೇ ರಶ್ಮಿಷತಿಯಿಂದಲೇ ಕೊಲೆಯಾಗಿದ್ದಾಳ. ರಶ್ಮಿಗರ್ಭಿಣಿ ಎಂಬ ವಿಷಯ ತಿಳಿಯುತ್ತಿದ್ದಂತೆ ಸಂತೋಷಷಡದ ಮೋಹನ್ ಪತ್ನಿಯ ಮೇಲೆ ಅನುಮಾನಪಡಲು ಆರಂಭಿಸಿದ್ದು. ರಶ್ಮಿಯಾರ ಜೊತೆಯಲ್ಲಿ ಮಾತನಾಡಿಸಿದರೂ ಅನುಮಾನದಿಂದಲೇ ನೋಡುತ್ತಿದ್ದನು. ಹೀಗೆ ರಶ್ಮಿಗೆ
ಮಾನಸಿಕ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ. ‘ಮೋಹನ್ ಕುಮಾರ್ ಹೂತಿಟ್ಟಿದ್ದ ಶವವನ್ನು ಹೊರಗೆ ತಗೆದು ಮರಣೋತ್ತರ ಶವಪರೀಕ್ಷೆ ಸಹ ನಡೆಸಲಾಗಿದೆ.
Join The Telegram | Join The WhatsApp |