Join The Telegram | Join The WhatsApp |
ನೋಯ್ಡಾ: ಉತ್ತರ ಪ್ರದೇಶದ ಕಾನ್‌ಸ್ಟೆಬಲ್‌ಯೊಬ್ಬರು ಬರೆದಿರುವ ಭಾವನಾತ್ಮಕ ರಜೆ ಅರ್ಜಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಯುಪಿಯ ಮಹಾರಾಜ್‌ಗಂಜ್ ಜಿಲ್ಲೆಯ ನೌತನ್ವಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾನ್‌ಸ್ಟೆಬಲ್ ಕಳೆದ ತಿಂಗಳು ವಿವಾಹವಾದ ನಂತ್ರ ಮಹಾರಾಜ್‌ಗಂಜ್ ಸಹಾಯಕ ಅಧೀಕ್ಷಕರಿಗೆ (ಎಎಸ್‌ಪಿ) ಅರ್ಜಿಯನ್ನು ಸಲ್ಲಿಸಿದ್ದಾರೆ.
ಕಾನ್‌ಸ್ಟೆಬಲ್ ಗೌರವ್ ಚೌಧರಿ ಎಂಬುವರು ಈ ರಜೆ ಅರ್ಜಿ ಬರೆದಿದ್ದಾರೆ. ಪತ್ರದಲ್ಲಿ, ʻತನ್ನ ನವವಿವಾಹಿತ ಹೆಂಡತಿ ನನ್ನ ಮೇಲೆ ಕೋಪಗೊಂಡಿದ್ದಾಳೆ ಮತ್ತು ರಜೆ ಮಂಜೂರಾತಿ ಪಡೆಯಲು ಸಾಧ್ಯವಾಗದ ಕಾರಣ ತನ್ನೊಂದಿಗೆ ಕರೆ ಮಾಡಿಯೂ ಮಾತನಾಡುತ್ತಿಲ್ಲ ಎಂದು ಬರೆದಿದ್ದಾರೆ.
ಎಷ್ಟೇ ಅಲ್ಲದೇ, ನನ್ನ ಕರೆ ಮಾಡಿ ನನ್ನ ಹೆಂಡತಿಗೆ ಫೋನ್ ಕೊಡಿ ಎಂದು ಹೇಳಿದರೂ ಆಕೆ ನನ್ನೊಂದಿಗೆ ಮಾತನಾಡದೇ, ಫೊನನ್ನು ವಾಪಸ್ ವನನ್ನ ತಾಯಿಗೇ ಕೊಟ್ಟು ಹೋಗುತ್ತಾಳೆ ಎಂದು ಪತ್ರದಲ್ಲಿ ಹೇಳಕೊಂಡಿದ್ದಾನೆ.
ತನ್ನ ಸೋದರಳಿಯನ ಹುಟ್ಟುಹಬ್ಬಕ್ಕೆ ಮನೆಗೆ ಬರುವುದಾಗಿ ಪತ್ನಿಗೆ ಭರವಸೆ ನೀಡಿರುವುದಾಗಿ ಪೇದೆ ತನ್ನ ರಜೆ ಪತ್ರದಲ್ಲಿ ಉಲ್ಲೇಖಿಸಿದ್ದಾನೆ.
ಆದರೆ, ಅಧಿಕಾರಿಗಳ ಅನುಮತಿ, ರಜೆಗಳಿಲ್ಲದೇ ಅವನು ಮನೆಗೆ ಹೋಗಲು ಸಾಧ್ಯವಿಲ್ಲ. ಆದ್ದರಿಂದ, ಅವರು ತಮ್ಮ ಸೋದರಳಿಯ ಹುಟ್ಟುಹಬ್ಬಕ್ಕೆ ಮತ್ತು ಮನೆಯಲ್ಲಿ ಸಮಯ ಕಳೆಯಲು ಏಳು ದಿನಗಳ ಕ್ಯಾಶುಯಲ್ ಲೀವ್‌ಗಳನ್ನು ಕೋರಿದ್ದಾರೆ. ಪೇದೆ ಮೌ ಜಿಲ್ಲೆಯ ನಿವಾಸಿಯಾಗಿದ್ದು, ಇಂಡೋ-ನೇಪಾಳ ಗಡಿಯ PRB ನಲ್ಲಿ ನಿಯೋಜಿಸಲಾಗಿದೆ.
ರಜೆಯ ಅರ್ಜಿಯನ್ನು ಸ್ವೀಕರಿಸಿದ ನಂತರ, ಎಎಸ್ಪಿ ಅವರು ಜನವರಿ 10 ರಿಂದ ಕಾನ್‌ಸ್ಟೆಬಲ್‌ಗೆ ಐದು ದಿನಗಳ ರಜೆಯನ್ನು ಅನುಮೋದಿಸಿದ್ದಾರೆ. ಏತನ್ಮಧ್ಯೆ, ಅವರ ಭಾವನಾತ್ಮಕ ರಜೆ ಅರ್ಜಿಯ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Join The Telegram | Join The WhatsApp |