ಹಳಿಯಾಳ :- ಉತ್ತರ ಕನ್ನಡ ಜಿಲ್ಲೆಯ ಅತ್ಯಂತ ದೊಡ್ಡ ಹಾಗೂ ಹಳೆಯ ಪುರಸಭೆ ಹಳಿಯಾಳ. ಈ ಪೌರ ಸಂಸ್ಥೆಯು 1865 ರಲ್ಲಿ ಸ್ಥಾಪನೆಯಾಗಿ, 1995 ರಲ್ಲಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿ, ನಂತರ 19-3-2015 ರಂದು ಪುರಸಭೆಯಾಗಿ ಮೇಲ್ದರ್ಜೆಗೆ ಏರಿದೆ. 2011 ರ ಜನಗಣತಿಯ ಪ್ರಕಾರ ಈ ಪುರಸಭೆ ವ್ಯಾಪ್ತಿಯ ಜನಸಂಖ್ಯೆ 24232 ಇದ್ದು, 23 ವಾರ್ಡ್ ಗಳು ಈ ಹಳಿಯಾಳ ಪುರಸಭೆ ವ್ಯಾಪ್ತಿಗೆ ಬರುತ್ತವೆ.
ಆದ್ರೇ ಅದ್ಯಾಕೋ ಏನೋ ಗೊತ್ತಿಲ್ಲಾ ಇಂತಹ ದೊಡ್ಡ ಪುರಸಭೆಗೆ ಇಲ್ಲಿಯರೆಗೂ ಸಹ ಸೂಕ್ತ ಇಂಜಿನಿಯರ್ ಗಳು ಇಲ್ಲದೇ, ಅಭಿವೃದ್ಧಿ ಕೆಲಸಗಳು ಹಾಗೂ ಕಾಮಗಾರಿಗಳ ಬಿಲ್ ಗಳು ಹಾಗೇ ಬಾಕಿ ಉಳಿಯುತ್ತಿದ್ದು, ಹಳಿಯಾಳ ಪುರಸಭೆಯ ಸಮಗ್ರ ಅಭಿವೃದ್ಧಿಗೆ ಇದು ತೊಡಕಾಗಿದೆ. ಇನ್ನೂ ಇಂಜಿನಿಯರ್ ಗಳು ಯಾರು ಸಹ ಇಲ್ಲಿಗೆ ಬರದೇ ಇರುವುದರಿಂದ ದೂರದ ಶಿರಸಿಯಿಂದ ಪ್ರಭಾರ ಇಂಜಿಯರ್ ಒಬ್ಬರನ್ನು ಅಲರ್ಟ್ ಮಾಡಿದ್ರೂ ಸಹ, ಅವರ ಸಹ ವಾರಕ್ಕೆ ಎರಡು ದಿವಸ ಬಂದು, ಯಾರಿಗೂ ಕೈಗೆ ಸಿಗದೇ ಹೋಗುತ್ತಿರುವುದು ನೋಡಿದ್ರೆ ಇಲ್ಲಿನ ಜನರಿಗೆ ಸಾಕಷ್ಟು ಸಮಸ್ಯೆಯಾಗುತ್ತಿರುವುದು ಮೇಲ್ನೋಟಕ್ಕೆ ಎದ್ದು ಕಾಡುತ್ತಿದೆ.
ಇನ್ನೂ ಸೂಕ್ತ ಇಂಜಿನಿಯರ್ಸ್ ಗಳನ್ನು ಇಲ್ಲಿಗೆ ನಿಯೋಜನೆ ಮಾಡಿ ಎಂದು ಪದೇ ಪದೇ ಮೇಲಧಿಕಾರಿಗಳ ಗಮನಕ್ಕೆ ತೆಗೆದುಕೊಂಡು ಬಂದ್ರೂ ಯಾವುದೇ ರೀತಿಯ ಪ್ರಯೋಜನ ವಾಗಿಲ್ಲ, ಆದ್ದರಿಂದ ನಮ್ಮ ನ್ಯೂಸ್ ಸಮೂಹದ ರಾಜ್ಯ ವಿಶೇಷ ಪ್ರತಿನಿಧಿ ಬಸವರಾಜು ಭೇಟಿ ಕೊಟ್ಟು ಸ್ಥಳೀಯ ವಾರ್ಡ್ ಸದಸ್ಯರು ಹಾಗೂ ಮಾಜಿ ಸಚಿವರು ಹಾಲಿ ಶಾಸಕರು ಆದ ಆರ್.ವಿ ದೇಶಪಾಂಡೆಯವರ ಗಮನಕ್ಕೆ ತೆಗೆದುಕೊಂಡು ಬಂದು ಸಮಗ್ರವಾಗಿ ವರದಿ ತಯಾರಿಸಿ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದರೂ ಹಳಿಯಾಳ ಪುರಸಭೆಗೆ ಸೂಕ್ತ ಇಂಜಿನಿಯರ್ಸ್ ಗಳು ಬರುವವರೇ ಎಂಬುದನ್ನು ಕಾದುನೋಡಬೇಕಿದೆ.
ವರದಿ:-ಬಸವರಾಜು.