Join The Telegram | Join The WhatsApp |
ಜಮಖಂಡಿ : ನಗರದ ಸಜ್ಜಿ ಹನುಮಾನ ದೇವಸ್ತಾನ ಹತ್ತಿರ ಬೈಕ್ ಮೇಲೆ ಹೊರಡುವ ಸಮಯದಲ್ಲಿ ಬೃಹತ್ ಗಾತ್ರದ ಆಲದ ಮರವಂದು ಬಿದ್ದ ಪರಿಣಾಮವಾಗಿ ಮಹಿಳೆಯೊರ್ವಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಮಖಂಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮುಧೋಳ ತಾಲೂಕಿನ ಕುಳಲಿ ಗ್ರಾಮದ ಮೃತ ಮಹಿಳೆ ರುಕ್ಮಿಣಿ ಶ್ರೀಶೈಲ ಮರನೂರ 35 ವರ್ಷ ಅಂತ ಗುರುತಿಸಲಾಗಿದೆ. ಹಾಗೂ ಗಂಡ ಶ್ರೀಶೈಲ ಮನೂರ ಇಬ್ಬರು ಬೈಕ್ ಮೇಲೆ ಗಧ್ಯಾಳ ಗ್ರಾಮದಲ್ಲಿ ಇರುವ ಮಗಳನ್ನು ಭೇಟಿ ಮಾಡಿಕೊಂಡು ಜಮಖಂಡಿ ಮಾರ್ಗವಾಗಿ ಮರಳಿ ತಮ್ಮ ಕುಳಲಿ ಸ್ವಗ್ರಾಮಕ್ಕೆ ತೆರಳುವ ಸಮಯದಲ್ಲಿ ಘಟನೆ ಸಂಬವಿಸಿದೆ.
ಜಮಖಂಡಿ ನಗರದ ಸಜ್ಜಿ ಹನುಮಾನ ದೇವಸ್ಥಾನ ಬಳಿ ಹೋಗುವ ಸಮಯದಲ್ಲಿ ಆಲದ ಮರ ಬಿದ್ದ ಪರಿಣಾಮ ಮರದಡಿ ಸಿಲುಕಿ ಸ್ಥಳದಲ್ಲಿಯೇ ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿದೆ.
ಆದರೆ ಗಂಡ ಶ್ರೀಶೈಲ ಮರನೂರ ಮಾತ್ರ ಪ್ರಾಣಾಪಾಯದಿಂದ ಪಾರಾಗಿದ್ದಾರೆ..
ಆತ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮೃತಳ ಮಹಿಳೆಗೆ ಇಬ್ಬರು ಗಂಡು ಮಕ್ಕಳು ಒಬ್ಬಳು ಹೆಣ್ಣು ಮಗಳು ಎಂದು ತಿಳಿದು ಬರುತ್ತದೆ.
ಗಂಡ ಶ್ರೀಶೈಲ ಮರನೂರ ಹಾಗೂ ಮಕ್ಕಳ ಅಕ್ರಂದ ಮುಗಿಲು ಮುಟ್ಟುವಂತಾಗಿತು.
ಸರಕಾರಿ ಆಸ್ಪತ್ರೆಯಲ್ಲಿ ಶವ ಪರಿಕ್ಷೆಯನ್ನು ನಡೆಸಲಾಗುತದೆ . ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ತನಿಖೆಯನ್ನು ಮುಂದುವರಿಸಿದ್ದಾರೆ.
ಜನದಟ್ಟನೆ ಪ್ರದೇಶದಲ್ಲಿ ನೂರಾರು ವರ್ಷಗಳ ಹಿಂದಿನ ಮರಗಳನ್ನು ತೆರವು ಮಾಡದೆ ಇರುವ ಕಾರಣ ಇಂತಹ ಘಟನೆ ಸಂಭವಿಸಿದೆ ಎಂದು ನೇರದಿದ ಸಾರ್ವಜನಿಕರು ಆಡಿಕೊಳ್ಳುತ್ತಿರುವ ಸಂಗತಿಯಾಗಿದೆ.
ವರದಿ -ರವಿ ಬಿ ಕಾಂಬಳೆ
Join The Telegram | Join The WhatsApp |