Join The Telegram | Join The WhatsApp |
ಸಿಂದಗಿ:-ತಾಲೂಕಿನ ಯಂಕಂಚಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮಹಾತ್ಮಾಗಾಂಧಿ ನರೇಗಾ ಯೋಜನೆಯ ಮಾಹಿತಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮದಡಿ ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನ ನಡೆಯಿತು. ಅಭಿಯಾನದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಚಕ್ರವರ್ತಿ ಮಾತನಾಡಿ ನರೇಗಾ ಯೋಜನೆಯಲ್ಲಿ ಕೆಲಸ ಮತ್ತು ವೈಯಕ್ತಿಕ ಕಾಮಗಾರಿ ಮಾಡಿಕೊಳ್ಳುವದರ ಮೂಲಕ ಲಾಭ ಪಡೆಯಿರಿ ಹಾಗೂ ಸ್ವ ಸಹಾಯ ಸಂಘಗಳನ್ನು ರಚಿಸಿಕೊಂಡು ಕೆಲಸಕ್ಕೆ ಬೇಡಿಕೆ ಸಲ್ಲಿಸಿ ಕೆಲಸ ಪಡೆಯಿರಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಐಇಸಿ ಸಂಯೋಜಕರು ಭೀಮರಾಯ ಚೌಧರಿ ಮಾತನಾಡಿ ದುಡಿಯುವ ಕೈಗಳಿಗೆ ಒಂದು ಕುಟುಂಬಕ್ಕೆ ಕನಿಷ್ಠ 100 ದಿನ ಉದ್ಯೋಗ ಸಿಗುತ್ತದೆ ಇದರ ಸದುಪಯೋಗ ಪಡೆಯಬೇಕು ಮತ್ತು ಹೆಚ್ಚು ಜನ ಮಹಿಳೆಯರು ನರೇಗಾ ಕೆಲಸದಲ್ಲಿ ಆಸಕ್ತಿಯಿಂದ ಕೆಲಸಕ್ಕೆ ಬರಬೇಕು ನಿಮ್ಮ ಊರಲ್ಲೇ ದುಡಿಯುವ ಅವಕಾಶ ಇದೆ ಹಾಗೂ ಪುರುಷ ಮತ್ತು ಮಹಿಳೆಯರಿಗೆ ಸಮಾನ ಕೂಲಿ 309ರೂ. ಗಳು ಇರುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಭಾಷಸಾಬ್ ನದಾಫ್ ಕಾರ್ಯಕ್ರಮ ಸ್ವಾಗತಿಸಿದರು,ಪೂಜಾರಿ ಕಾರ್ಯಕ್ರಮವನ್ನು ವಂದಿಸಿದರು. ಈ ಸಂದರ್ಭದಲ್ಲಿ GKM ಶಾಹಿನಬೇಗಮ್ ಬೈಚಬಾಳ, MBK ಅನುಸುಬಾಯಿ ಪಾಟೀಲ್, ಮತ್ತು ಸ್ವ ಸಹಾಯ ಸಂಘದ ಸದಸ್ಯರು ಭಾವಹಿಸಿದ್ದರು.
ನಂತರ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ನರೇಗಾ ಕೂಲಿ ಕಾರ್ಮಿಕರು ತಮ್ಮ ಅರೋಗ್ಯ ತಪಾಸಣೆ ಮಾಡಿಕೊಂಡರು ಬಿಪಿ, ಸಕ್ಕರೆ ಖಾಯಿಲೆ, ಕೆಮ್ಮು, ನೆಗಡಿ, ಜ್ವರ ಹೀಗೆ ಹಲವು ಪರೀಕ್ಷೆಗಳನ್ನು ತಪಾಸಣೆ ಮಾಡಿಕೊಂಡರು. ಹಿರಿಯ ನಾಗರಿಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಕೆಲಸಗಳನ್ನು ಬದಿಗೊತ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Join The Telegram | Join The WhatsApp |