ಅಥಣಿ: ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ದಿನಾಂಕ 21-112024 ರಂದು ಪ್ರಾರಂಭಗೊಂಡ ಯೋಗ ಶಿಬಿರದಲ್ಲಿ ವಿಶೇಷವಾಗಿ ನಾಲ್ಕು ದಿನಗಳ ಕಾಲ ನಡೆದ ಯೋಗ ಶಿಬಿರದಲ್ಲಿ ಯೋಗದಿಂದ ಆಗುವಂತಾ ಬದಲಾವಣೆ ಹಾಗೂ ಲಾಭದ ಬಗ್ಗೆ ವಿಶೇಷವಾಗಿ ತಿಳಿಸಿದರು. ಮಕ್ಕಳಿಗೆ ವಿದ್ಯೆ ಜೊತೆ ಯೋಗವು ಅಷ್ಟೇ ಪರಿಣಾಮಕಾರಿಯಾಗಿದೆ ಬಾಲ್ಯದಿಂದಲೇ ಯೋಗ ಮಾಡುವುದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಸಹಾಯಕವಾಗುತ್ತದೆ ಆರೋಗ್ಯವಂತ ಜೀವನ ಕೂಡ ಅಷ್ಟೇ ಮುಖ್ಯವಾಗಿದೆ ಎಂದು ಯೋಗ ಗುರುಗಳಾದ ಎಸ್. ಕೆ. ಹೊಳೆಪ್ಪನವರ ಅವರು ಹೇಳಿದರು
ನಂತರ ಅಥಣಿಯ ಸಾಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ಎಸ್. ಯಾದವರ ಮಾತನಾಡಿ ನಮ್ಮ ಅಥಣಿಯಲ್ಲಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ವಿಶೇಷವಾಗಿ ಯೋಗ ಶಿಬಿರವನ್ನು ಹಮ್ಮಿಕೊಂಡಿದ್ದು ನಮಗೆ ತುಂಬಾ ಸಂತೋಷ ತಂದಿದೆ ಮಕ್ಕಳಿಗೆ ವಿಶೇಷವಾಗಿ ಯೋಗ ಶಿಬಿರ ನಡೆಸುವುದು ಹೆಮ್ಮೆಯ ವಿಷಯ ಯೋಗದ ಮೂಲಕ ಅನೇಕ ಮಕ್ಕಳು ಲಘು ವ್ಯಾಯಾಮ ಮಾಡಿ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಲು ಸಾಧ್ಯ ಯೋಗವು ಮಕ್ಕಳು ರೂಢಿ ಇಟ್ಟುಕೊಳ್ಳಬೇಕು ಯೋಗದಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮಕ್ಕಳ ಬೆಳವಣಿಗೆ ಹಾಗೂ ದೇಹದ ಸದೃಢತೆ ಮಾನಸಿಕ ನೆಮ್ಮದಿ ಜೊತೆಗೆ ಆರೋಗ್ಯ ಜೀವನ ಶೈಲಿ ಯೋಗದಿಂದ ದೊರಕುತ್ತದೆ ಮಕ್ಕಳು ಬಾಲ್ಯದಿಂದಲೇ ಯೋಗ ರೂಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಾರ್ಡನ ಗಳಾದ ಹಿರೇಮನಿ ಸರ್ ಹಾಗೂ ಮಕ್ಕಳು ಭಾಗವಹಿಸಿದ್ದರು.
ವರದಿ ರಾಜು ವಾಘಮಾರೆ