ಭಾಲ್ಕಿ : ಪಟ್ಟಣದ ತಹಸೀಲ ಕಚೇರಿ ಹತ್ತಿರವಿರುವ ಚನ್ನಬಸವ ಆಶ್ರಮದಲ್ಲಿ ಪತಂಜಲಿ ಯೋಗ ಶಿಕ್ಷಕರಿಂದ ಪ್ರತಿನಿತ್ಯ ಉಚಿತ ಯೋಗ ಅಭ್ಯಾಸ ಶಿಬಿರ ಜರುಗುತ್ತಲಿದೆ.
ಅರೋಗ್ಯವಂತ ಶರೀರ ಬೇಕಾಗಿದಲ್ಲಿ ಯೋಗ ಅತ್ಯಂತ ಉಪಕಾರಿ ಅಂತಾರೆ ಇಲ್ಲಿನ ಹಿರಿಯ ಜೀವಿ. ಶಿವಾನಂದ ಗುದಗೆ.
ತನು, ಮನ, ಮಸ್ತಕಿಗೆ, ಅಂತರಂಗ, ಬಹಿರಂಗದ ನೆಮ್ಮದಿ ನೆಲೆಸಿ ಜೀವನದ ಪ್ರತಿಯೊಂದು ಕ್ಷಣಗಳನ್ನು ಅನುಭವಿಸಲು ದೈನಂದಿನ ಚಟುವಟಿಕೆಗಳಲ್ಲಿ ಯೋಗ ತನ್ನದೇಯಾದ ಪ್ರಾಮುಖ್ಯತೆ ಹೊಂದಿದೆ, ಅರೋಗ್ಯವಂತರಾಗಿರಲು ಬಯಸುವವರು ಪ್ರತಿದಿನ ಯೋಗ ವ್ಯಾಯಾಮ ಮಾಡುವುದರಿಂದ ಯಾವುದೇ ಔಷಧಿಗಳ ಬಳಕೆ ಅವಶ್ಯಕತೆ ಇರೋದಿಲ್ಲ ಎಂದಿದ್ದಾರೆ ಇಲ್ಲಿನ ಯೋಗ ಪ್ರಶಿಕ್ಷಣಾರ್ಥಿಗಳು.
ಚನ್ನಬಸವ ಆಶ್ರಮದಲ್ಲಿ ಯೋಗ ಪ್ರಾರಂಭವಾಗಿದ್ದು 20 ಜನರಿಂದ ಮಾತ್ರ ಅದಕ್ಕೆ ಪ್ರೇರಣೆ ನಮ್ಮ ಯೋಗ ಗುರುಗಳಾದ ಹರಿದೇವ್ ರುದ್ರಮುನಿ, ಚಂದ್ರಕಾಂತ ಹೈಬತಪುರೇ, ಮಂಗಲಾ ಕಾಡಾದೆ, ಪಂಡಿತ ಪಾಟೀಲ ಇವರಿಗೆ ಸಲ್ಲುತ್ತದೆ ಇವತ್ತು ಸುಮಾರು 60 ರಿಂದ 70 ಜನ ಪ್ರತಿನಿತ್ಯ ಇದರ ಲಾಭ ಪಡೆಯುತ್ತಿದ್ದಾರೆ ಎಂದರು.
ನಮ್ಮಲ್ಲಿ ಯೋಗ ವ್ಯಾಯಾಮ ಮಾಡಲು ಬರುವವರಿಗೆ ಯಾವುದೇ ರೀತಿಯ ಶುಲ್ಕವಿಲ್ಲ ಇದು ಸಾರ್ವಜನಿಕರ ಅರೋಗ್ಯ ದೃಷ್ಟಿಯಿಂದ ಪ್ರತಿದಿನ ಬೆಳಿಗ್ಗೆ 5ಗಂಟೆ 15 ನಿಮಿಷಕ್ಕೆ ಪ್ರಾರಂಭ ಗೊಂಡು 7.00ಗಂಟೆಗೆ ಮುಕ್ತಾಯ ಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ಯೋಗ ತರಬೇತಿಯಲ್ಲಿ ಡಾ ಕುಮಾರ ಸ್ವಾಮಿ, ರಾಜಾರಾಮ ಬಿಯಾನಿ, ವಿಜಕುಮಾರ ಸುಲಗುಂಟೆ, ಶಂಕರ ಕೆರೆ, ನಿವೃತ್ತಿ, ನಾಬೇರಿಯ, ಶರಣು ಅಷ್ಟೂರೇ ಸೇರಿ ಪ್ರತಿಷ್ಠಿತರು ಇಲ್ಲಿ ಪ್ರತಿದಿನ ಯೋಗ ಮಾಡಿ ಅರೋಗ್ಯವಂತ ಸಮಾಜಕ್ಕೆ ಪ್ರೇರಣೆ ಆಗುತ್ತಿರುವುದು ವಿಶೇಷ.
ವರದಿ :ಸಂತೋಷ ಬಿಜಿ ಪಾಟೀಲ