Join The Telegram | Join The WhatsApp |
ಬುಧವಾರದಿಂದ ಜಾರಿಗೆ ಬಂದಿರುವ ಸಾಮಾಜಿಕ ಮಾಧ್ಯಮಕ್ಕಾಗಿ ಸರ್ಕಾರದ ಹೊಸ ನಿಯಮಗಳು, ಅಧಿಕಾರಿಗಳು ಕಾನೂನಿನ ಪ್ರಕಾರ ಅಗತ್ಯವಿದ್ದಲ್ಲಿ ಸಂದೇಶದ ಮೂಲವನ್ನು ಪತ್ತೆಹಚ್ಚಲು WhatsApp ನಂತಹ ತ್ವರಿತ ಸಂದೇಶ ಅಪ್ಲಿಕೇಶನ್ಗಳನ್ನು ಕಡ್ಡಾಯಗೊಳಿಸುತ್ತದೆ. ಭಾರತದಲ್ಲಿ ಸುಮಾರು 550 ಮಿಲಿಯನ್ ಜನರು ವಾಟ್ಸಪ್ (WhatsApp) ಅನ್ನು ಬಳಸುತ್ತಾರೆ.
ಹಾಗೇ ವಾಟ್ಸಪ್ ಕೂಡ ಪ್ರತೀ ಬಾರಿ ವಿಭಿನ್ನವಾದ ಅತ್ಯುತ್ತಮ ಫೀಚರ್ಸ್ ನೊಂದಿಗೆ ಬಳಕೆದಾರರನ್ನು ಆಕರ್ಷಿಸುತ್ತಿದೆ. ಅದರಲ್ಲೂ ವಾಟ್ಸಪ್ 2022 ರಲ್ಲಿ ಅಧಿಕ ನೂತನ ಫೀಚರ್ಸ್ ಗಳನ್ನು ಪರಿಚಯಿಸಿದ್ದು ಇನ್ನೂ ಕೂಡ 10 ರಿಂದ 15 ಅಪ್ಡೇಟ್ಗಳು ಬಿಡುಗಡೆಗೆ ಸಜ್ಜಾಗುತ್ತಿದೆ.
ವಾಟ್ಸಪ್ ಸ್ಟೇಟಸ್ ಬಗ್ಗೆ ಹೊಸ ರೂಲ್ಸ್:
ಹಾಗೇ ಇದೀಗ ವಾಟ್ಸಪ್ ನಲ್ಲಿ ಹೊಸದೊಂದು ಅಪ್ಡೇಟ್ ಬಂದಿದ್ದು ಇದರಲ್ಲಿ ವಾಟ್ಸಪ್ ಸ್ಟೇಟಸ್ ಬಗ್ಗೆ ಹೊಸ ರೂಲ್ಸ್ ಬಂದಿದೆ. ವಾಟ್ಸಪ್ ತನ್ನ ಬಳಕೆದಾರರಿಗೆ ಸ್ಟೇಟಸ್ ಬಗ್ಗೆ ರಿಪೋರ್ಟ್ ಮಾಡುವ ಆಯ್ಕೆಯನ್ನು ನೀಡಿದೆ. Wabetainfo ಪ್ರಕಾರ ನಿಮ್ಮ ಕಾಂಟೆಕ್ಟ್ನಲ್ಲಿರುವ ವ್ಯಕ್ತಿಯು ಅಶ್ಲೀಲ ವಿಡಿಯೋ, ಹಿಂಸೆಯನ್ನು ಪ್ರಚೋದಿಸುವ ಯಾವುದೇ ವಿಷಯಗಳನ್ನು ಸ್ಟೇಟಸ್ನಲ್ಲಿ ಶೇರ್ ಮಾಡಿದ್ದರೆ ಈ ಬಗ್ಗೆ ನೀವು ರಿಪೋರ್ಟ್ ಮಾಡಬಹುದಾಗಿದೆ. ಇದೀಗ ವಾಟ್ಸಪ್ ತನ್ನ ಡೆಸ್ಕ್ಟಾಪ್ ಆವೃತ್ತಿಯಲ್ಲಿ ಈ ವೈಶಿಷ್ಟ್ಯದ ಪರೀಕ್ಷೆ ನಡೆಸುತ್ತಿದೆ.
ಅಲ್ಲದೆ ಬಳಕೆದಾರರು ಹೊಸ ಡಿವೈಸ್ಗಳಿಗೆ ಲಾಗಿನ್ ಮಾಡುವಾಗ ಭದ್ರತೆಯನ್ನು ನೀಡಲು ವಾಟ್ಸಪ್ ಯೋಜನೆ ರೂಪಿಸಿದೆ. ಹೊಸ ಪರಿಶೀಲನಾ ಕೋಡ್, ಇದು 6 ಅಂಕಿಯ ಕೋಡ್ ಆಗಿದ್ದು ಇದನ್ನು ನಮೂದಿಸುವ ಮೂಲಕ ಹೊಸ ಡಿವೈಸ್ನಲ್ಲಿ ಲಾಗಿನ್ ಆಗಬಹುದು ಎಂದು ತಿಳಿಸಿದೆ. ಹಾಗೂ ಈ ಕೋಡ್ ಪ್ರಾರ್ಥಮಿಕ ಡಿವೈಸ್ ಅಥವಾ ಮೊಬೈಲ್ಗೆ ಮಾತ್ರವೇ ರವಾನೆಯಾಗುತ್ತದೆ. ಈ ಮೊದಲು ವಾಟ್ಸಪ್ ಬಹು ಡಿವೈಸ್ಗಳಲ್ಲಿ ಒಂದೇ ಖಾತೆಯನ್ನು ಬಳಕೆ ಮಾಡುವ ಫೀಚರ್ಸ್ ಅನ್ನು ಪರಿಚಯಿಸಿತ್ತು. ಇದಾದ ಬಳಿಕವೇ ಭದ್ರತೆಯನ್ನು ಹೆಚ್ಚಿಸಲು ಈ ಸೌಲಭ್ಯವನ್ನು ಒದಗಿಸಿದೆ.
ವಾಟ್ಸಪ್ ಆಕ್ಸಿಡೆಂಟಲ್ ಡಿಲೀಟ್ ಫೀಚರ್: ವಾಟ್ಸಪ್ ತನ್ನ ಬಳಕೆದಾರರಿಗೆ ಆಕ್ಸಿಡೆಂಟಲ್ ಡಿಲೀಟ್ ಫೀಚರ್ಸ್ ಅನ್ನು ಪರಿಚಯಿಸಿದೆ. ಚಾಟ್ ನಲ್ಲಿ ಕೆಲವೊಮ್ಮೆ ಆಕಸ್ಮಿಕವಾಗಿ ಡಿಲೀಟ್ ಫಾರ್ ಎವರಿಒನ್ ಮಾಡುವ ಬದಲು ಡಿಲೀಟ್ ಫಾರ್ ಮಿ ಎಂಬ ಆಯ್ಕೆಯನ್ನು ಬಳಸಿರುತ್ತೇವೆ. ಆದರೆ ಇನ್ನು ಮುಂದೆ ಹೀಗೆ ಆಗೋದಿಲ್ಲ ಯಾಕಂದ್ರೆ ನೀವು ಆಕಸ್ಮಿಕವಾಗಿ ಡಿಲೀಟ್ ಫಾರ್ ಮಿ ಆಯ್ಕೆ ಮಾಡಿ ಸಂದೇಶ ಡಿಲೀಟ್ ಮಾಡಿದರೆ ಈ ಹೊಸ ಫೀಚರ್ಸ್ ನಿಂದ ಅಲ್ಲಿಯೇ ಅಂಡೂ ಎಂಬ ಆಯ್ಕೆ ಕಾಣುವ ಮೂಲಕ ಈ ಆಕ್ಸಿಡೆಂಟಲ್ ಡಿಲೀಟ್ ಫೀಚರ್ಸ್ ನಿಮಗೆ ಸಹಕಾರಿಯಾಗಲಿದೆ.
Join The Telegram | Join The WhatsApp |