Ad imageAd image

ಹೃದಯಾಘಾತದಿಂದ ಯುವ ಕಬಡ್ಡಿ ಆಟಗಾರ ಸಾವು 

Bharath Vaibhav
ಹೃದಯಾಘಾತದಿಂದ ಯುವ ಕಬಡ್ಡಿ ಆಟಗಾರ ಸಾವು 
WhatsApp Group Join Now
Telegram Group Join Now

ಮಂಡ್ಯ: ರಾಜ್ಯಮಟ್ಟದ ಕಬಡ್ಡಿ ಆಟಗಾರನೊಬ್ಬ ಪಂದ್ಯದ ವೇಳೆಯೇ ಹೃದಯಾಘಾತದಿಂದ ಹಠಾತ್‌ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ.

ಉಡುಪಿಯ ಮುಟ್ಲುಪಾಡಿ,‌ ನಡುಮನೆ ನಿವಾಸಿ ಪ್ರೀತಂ ಶೆಟ್ಟಿ (26) ಕಬಡ್ಡಿ ಆಡುವಾಗ ಮೃತಪಟ್ಟಿರುವ ದುರ್ದೈವಿ. ಮಂಡ್ಯ ಜಿಲ್ಲೆಯ ನಾಗಮಂಗಲದ ಸುಖಧರೆ ಗ್ರಾಮದಲ್ಲಿ ಹನುಮ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಕಬಡ್ಡಿ ಸ್ಪರ್ಧೆಯ ವೇಳೆ ಯುವಕನಿಗೆ ಹೃದಯಾಘಾತವಾಗಿದೆ.

ಶುಕ್ರವಾರ (ಡಿ.13) ರಾತ್ರಿ ಕಬಡ್ಡಿ ಆಟ ಆಡುತ್ತಿದ್ದಾಗ ಯುವಕ ಕಬಡ್ಡಿ ಕೋರ್ಟ್‌ನಲ್ಲೇ ಹೃದಯಾಘಾತದಿಂದ ಕುಸಿದು ಮೃತಪಟ್ಟಿದ್ದಾನೆ. ಪ್ರತಿಭಾನ್ವಿತ ಯುವಕ ಪ್ರೀತಂ ಶಿಕ್ಷಣದ ಜತೆಗೆ ಕ್ರೀಡೆಯಲ್ಲಿಯೂ ಆಸಕ್ತಿ ಹೊಂದಿದ್ದ. ಹಂತಹಂತವಾಗಿ‌ ಶ್ರಮವಹಿಸಿ ಕಬಡ್ಡಿ ಆಟಗಾರನಾಗಿ ಖ್ಯಾತಿ ಪಡೆದಿದ್ದ.

ಪ್ರೀತಂ ತಾಯಿ ಮತ್ತು ಓರ್ವ ಸಹೋದರನನ್ನು ಅಗಲಿದ್ದಾನೆ. ಆತನ ಮೃತದೇಹವನ್ನು ಬಿಜಿ ನಗರದ ಆದಿಚುಂಚನಗಿರಿ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!