ಬೆಳಗಾವಿ:-ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀ ಪ್ರವೀಣ್.ಆರ್.ಮಾದರ ಅವರ ನಾಯಕತ್ವದಲ್ಲಿ, ಮೂದಲಿಗೆ ಸಂಘಟನೆ ಪದಾಧಿಕಾರಿಗಳಿಂದ ಡಾಕ್ಟರ್ ಬಾಬಾ ಸಾಹೇಬ ಅಂಬೇಡ್ಕರ್ ನೀಡಿದ ಸಂವಿಧಾನ ಪೀಠಕ್ಕೆ ಓದುವ ಮುಖೇನ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಭೆ ಉದ್ಧೇಶಿಸಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಶೀ ಪ್ರವೀಣ್ ಆರ್ ಮಾದರ ,ಸಮಜದ ಕಟ್ಟಕಡೆಯ ವ್ಯಕ್ತಿಗೂ ಕೂಡಾ ನ್ಯಾಯ ಸಿಗಬೇಕು, ಶೋಷಿತ SC-ST ಸಮುದಾಯ ಧ್ವನಿಯಾಗಿ, ನಮ್ಮ ಸಮುದಾಯದ ಜನರಿಗೆ ಇನ್ನೂ ಅನ್ಯಾಯ ಅಕ್ರಮ, ದೌರ್ಜನ್ಯ ನಡೆಯುತ್ತಲೇ ಇದೆ, ಇಷ್ಟೇಲ್ಲಾ ಕಾಯ್ದೆ ಕಾನೂನು ಇದರೂ ಕೂಡಾ ನನ್ನ ಸಮಾಜವನ್ನಾ ಕೆಲವು ಹಳ್ಳಿಗಳಲ್ಲಿ ಕಡೆಗಣಿಸುತ್ತಿದ್ದಾರೆ, ಹಾಗಾಗಿ ಅಂತಹ ಸಮ ಸಮಾಜ ನಿರ್ಮಾಣ ಮಾಡದ ಅಧಿಕಾರಿಗಳ ವಿರುದ್ಧ ನಿರಂತರ ಹೋರಾಟ ನಮ್ಮ ಸಂಘಟನೆ ಮೂಲ ಉದ್ದೇಶವಾಗಿದೆಂದು ಮಾತ್ತನಾಡಿದರು, ತದನಂತರ ರಾಜ್ಯ ಉಪಾಧ್ಯಕ್ಷರಾದ ಶ್ರೀ ಅಕ್ಷಯ್ ಕೆ ಆರ್ ಅವರು ಮಾತನಾಡಿ ಸಂಘಟನೆ ಹೆಸರು ಬಗ್ಗೆ ಸುದೀರ್ಘವಾಗಿ ವಿವರಣೆ ನೀಡಿದರು
ನಂತರದಲ್ಲಿ ಮಾತನಾಡಿದ, ಶ್ರೀ ಮಲ್ಲಪ್ಪ ಅಕ್ಕಮಡ್ಡಿ ಎಲ್ಲ,ತಾಲೂಕ ಅಧ್ಯಕ್ಷರ ಹಾಗೂ ಜಿಲ್ಲಾ ಅಧ್ಯಕ್ಷರು ಮಾಡುವ ಕೆಲಸದ ಬಗ್ಗೆ ರಾಜ್ಯಾಧ್ಯಕ್ಷರ ಗಮನಕ್ಕೆ ತಂದು ಕೆಲಸ ಮಾಡಬೇಕು ತಿಳಿಸಿದರು.
ಮತ್ತು ರಾಜ್ಯ ಘಟಕದಲ್ಲಿ, ಮಲಪ್ಪ ಅಕ್ಕಮಡಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ಅಜೇಯ ಶಿಂಗೆ ರಾಜ್ಯ ಜಂಟಿ ಕಾರ್ಯದರ್ಶಿಯಾಗಿ, ನಿಖಿಲ ಕೋಲಕಾರ ರಾಜ್ಯ ಖಜಾಂಚಿಯಾಗಿ, ಬೆಳಗಾವಿ ತಾಲೂಕು ಅಧ್ಯಕ್ಷರಾಗಿ ರಾಕೇಶ್ ಶಿಂಗೆ, ಬೆಳಗಾವಿ ತಾಲೂಕು ಉಪಾಧ್ಯಕ್ಷರಾಗಿ, ಪ್ರಮುಂದ ಶಿಂಗೆ,ಬೆ.ತಾ ಪ್ರಧಾನ ಕಾರ್ಯದರ್ಶಿ, ದಿಲೀಪ ಕೋಲಕಾರ ಬೈಲಹೊಂಗಲ ತಾಲೂಕು ಅಧ್ಯಕ್ಷರಾಗಿ ಉದಯ ಬಸೋಜಿ, ಬೈಲಹೊಂಗಲ ತಾಲೂಕು ಉಪಾಧ್ಯಕ್ಷರಾಗಿ ಹರೀಶ್ ಈರಣಿ. ಇವರಿಗೆ ಸಂಘಟನೆ ಆದೇಶ ಪ್ರತಿ ನೀಡಿ ಸಂಘಟನೆ ಬರಮಾಡಿಕೋಂಡೆವು ಈ ವೇಳೆಯಲ್ಲಿ ಕುಕುಡೋಳಿ ದಲಿತ ಸಂಘಟನೆಗಳ ನಾಯಕರು ಮತ್ತು ಬೆಳಗಾವಿ ತಾಲೂಕು,ಗ್ರಾಮ ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ವರದಿ:- ಪ್ರವೀಣ್ ಆರ್ ಮಾದರ.