ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಅವರ ಜಯಂತಿ ಆಚರಿಸಲಾಯಿತು.
ಮುಖ್ಯಶಿಕ್ಷಕರಾದ ಎನ್. ಆರ್. ಠಕ್ಕಾಯಿ ಮಾತನಾಡಿ ಸತ್ಯ ಮತ್ತು ಅಹಿಂಸೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಮಹಾತ್ಮರಾದ ಗಾಂಧೀಜಿ ಹಾಗೂ ದಕ್ಷತೆ, ಪ್ರಾಮಾಣಿಕತೆ ಮತ್ತು ಸರಳತೆಗೆ ಬದ್ದರಾಗಿ ಅಜರಾಮರರಾದ ಶಾಸ್ತ್ರೀಜಿ ಅವರ ಆದರ್ಶ ಬದುಕು ನಮಗೆಲ್ಲ ಮಾದರಿಯಾಗಲಿ ಎಂದು ಹೇಳಿದರು. ದೇಶ ಕಂಡ ಇಬ್ಬರು ಅಪ್ರತಿಮ ಮಹಾನಾಯಕರ ಜೀವನ, ಸಂದೇಶಗಳು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಎಂದು ಅವರು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳಾದ ಸಾನಿಕಾ ಕುಲಕರ್ಣಿ, ಭಾಗ್ಯಶ್ರೀ ಬಡಿಗೇರ, ಕಲ್ಮೇಶ ಗುಡ್ಡದ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ವಿನಾಯಕ ಬಡಿಗೇರ, ಸದಸ್ಯರಾದ ರಾಮು ಮೆಕ್ಕೇದ, ಶಿಕ್ಷಕರಾದ ಜಗದೀಶ ನರಿ, ಶಿವಾನಂದ ಬಳಿಗಾರ, ಹೇಮಲತಾ ಪುರಾಣಿಕ, ವೀರೇಂದ್ರ ಪಾಟೀಲ, ಮಂಜುಳಾ ಕಾಳಿ, ಸಂತೋಷ ಸಾಳುಂಕೆ, ಶಾಲಾ ಸಿಬ್ಬಂದಿಗಳಾದ ಜ್ಯೋತಿ ಅಳಗೋಡಿ, ಮಹಾದೇವಿ ಸೊಗಲದ, ಗಂಗವ್ವ ಅಳಗೋಡಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ದುಂಡಪ್ಪ ಹೂಲಿ




