Ad imageAd image

ಅರಸೀಕೆರೆ ತೋಟಗಾರಿಕೆ ಇಲಾಖೆಯಿಂದ ತೆಂಗು ಕಾಯ ಕಲ್ಪ ರಥಯಾತ್ರೆ 

Bharath Vaibhav
ಅರಸೀಕೆರೆ ತೋಟಗಾರಿಕೆ ಇಲಾಖೆಯಿಂದ ತೆಂಗು ಕಾಯ ಕಲ್ಪ ರಥಯಾತ್ರೆ 
WhatsApp Group Join Now
Telegram Group Join Now

ಎಂಬ ಅಂಗಣದಲ್ಲಿ ತಾಲೂಕಿನ ಎಲ್ಲಾ ಹಳ್ಳಿಗಳಲ್ಲೂ ತೋಟಗಾರಿಕೆ ಇಲಾಖೆ ವತಿಯಿಂದ ವಿಶೇಷವಾಗಿ ಚಂಗು ಬೆಳೆಯಲ್ಲಿ ಕಂಡುಬರುವ ರೋಗ ಕೀಟಗಳು ಹಾಗೂ ಉತ್ತಮ ಬೇಸಾಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ತಾಲೂಕಿನ ಎಲ್ಲಾ ರೈತರಿಗೆ ಮಾಹಿತಿ ನೀಡುವ ಉದ್ದೇಶದಿಂದ 15 ದಿವಸಗಳ ಕಾಲ ಎರಡು ವಾಹನಗಳಲ್ಲಿ ಪ್ರಚಾರ ಕಾರ್ಯಕ್ರಮಕ್ಕೆ ಶಾಸಕರು ಹಾಗೂ ಅಧ್ಯಕ್ಷರು ಕರ್ನಾಟಕ ಗೃಹ ಮಂಡಳಿಯವರು ಹಸಿರು ನಿಶಾನೆಯೊಂದಿಗೆ ಚಾಲನೆ ನೀಡಿ ರೈತರನ್ನು ಉದ್ದೇಶಿಸಿ ತೆಂಗು ಬೆಳೆಯಲ್ಲಿ ಕಾಣಿಸಿಕೊಂಡಿರುವಂತ ಬಿಳಿ ನೊಣ ಕಪ್ಪು ತಲೆ ಹುಳ ಹಣಬೆ ರೋಗ ಹಾಗೂ ಕಾಂಡ ಸೋರುವ ರೋಗಗಳು ರೈತರಿಗೆ ತುಂಬಾ ಆರ್ಥಿಕ ನಷ್ಟ ಉಂಟು ಮಾಡಿದ್ದು ಉಲ್ಲ್ಪಣ್ಣ ಗೊಂಡಿರುವ ರೋಗ ಹಾಗೂ ಕೀಟಗಳನ್ನು ಅಧಿಕಾರಿಗಳು ಹಾಗೂ ರೈತರು ಸಮನ್ವತೆಯಿಂದ ಒಗ್ಗೂಡಿ ಸಮಾರೋಪಾದಿಯಲ್ಲಿ ನಿರ್ಮೂಲನೆ ಮಾಡಬೇಕೆಂದು ತಿಳಿಸಿದರು.

ತಾಲೂಕಿಗೆ ಎಲ್ಲಾ ರೈತರಿಗೆ ಈ ರೋಗಗಳ ಹತೋಟಿಗೆ ಔಷಧಿಗಳನ್ನು ವಿತರಿಸಲು ಬೇಕಾಗುವ ಅನುದಾನದ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಸಮಾರೋಪಾದಿಯಲ್ಲಿ ಕಾರ್ಯನಿರ್ವಹಿಸುವಂತೆ ತಿಳಿಸಿದರು.

ತೆಂಗು ಕಾಯಕಲ್ಪ ರಸಾಯಚೆಯೊಂದಿಗೆ ಹಳ್ಳಿಗಳಲ್ಲಿ ವಿತರಿಸಲು ಕರಪತ್ರಗಳು ಎಲ್ಲಾ ಗ್ರಾಮ ಪಂಚಾಯಿತಿಗಳು ಹಾಗೂ ಹಾಲಿನ ಡೈರಿಗಳ ಮುಂಭಾಗದಲ್ಲಿ ಅಂಟಿಸಲು ಬಿತ್ತಿ ಪತ್ರಗಳನ್ನು ಮಾನ್ಯ ಶಾಸಕರ ಅಭಯ ಹಸ್ತದಲ್ಲಿ ಬಿಡುಗಡೆಗೊಳಿಸಲಾಯಿತು. ಕರಪತ್ರಗಳು ಹಾಗೂ ಬಿತ್ತಿ ಪತ್ರಗಳು ಚೆಂಗಿನಲ್ಲಿ ಬಾಧಿಸುವ ಬೆಳೆಯುಣ ಕಪ್ಪು ತಲೇ ಹುಳ ಅಣಬೆ ರೋಗ ಮತ್ತು ಕಾಂಡ ಸೋರುವ ರೋಗಗಳ ಲಕ್ಷಣ ಮತ್ತು ಅದರ ಹತೋಟಿ ಕ್ರಮಗಳು ಹಾಗೂ ಉತ್ತಮ ಬೇಸಾಯ ಕ್ರಮಗಳ ಬಗ್ಗೆ ಇರುತ್ತದೆ.

ತೆಂಗು ಕಾಯಕಲ್ಪ ರಸಾಯಚಯ ಭಾಗವಾಗಿ ಪ್ರತ್ಯಕ್ಷಗತೆಯನ್ನು ಪ್ರತಿ ಗ್ರಾಮ ಪಂಚಾಯಿತಿಯ ಕೇಂದ್ರಗಳಲ್ಲಿ ಆ ಯೋಜನೆ ಮಾಡಲು ಉದ್ದೇಶಿಸಿದ್ದು ಅದರಂತೆ ಈ ದಿನ ನಾಗತಿಹಳ್ಳಿ. ಗ್ರಾಮದ ನಾಗರಾಜು ಎಂಬ ರೈತರ ತೋಟದಲ್ಲಿ ತೆಂಗಿನಲ್ಲಿ ಕಪ್ಪು ತಲೆ ಹುಳವಿನ ಹತೋಟಿಗಾಗಿ ಪರೋಪ ಜೀವಿಗಳ ಬಿಡುಗಡೆ ಕಾಂಡ ಸೋರುವ ರೋಗ ಬಾದೆಗೆ ಹೆಕ್ಸಾಕೊನಜೋಲ್ ಔಷಧಿಯನ್ನು ಬೇರಿನ ಮುಖಾಂತರ ಉಪಚಾರ ಮಾಡುವುದು ಕಾಂಡ ಸೋಲುವ ಭಾಗವನ್ನು ಕಾಪರ್ ಹಾಕ್ಸಿಕೋ ರೈಡ್ ಔಷಧಿಯಿಂದ ಉಪಚರಿಸುವುದು

ರೋಗ ಬೇರೆ ಮರಗಳಿಗೆ ಹರಡದಂತೆ ಟ್ರಾoಚ್ ಗಳ ನಿರ್ಮಾಣ ಮಾಡುವುದು ಮತ್ತು ಗೊಬ್ಬರಗಳನ್ನು ಯಾವ ರೀತಿ ಮರಗಳಿಗೆ ಹಾಕುವುದು ಎಂಬ ಬಗ್ಗೆ ಪ್ರತ್ಯಕ್ಷತೆಯನ್ನು ಮಾನ್ಯ ಶಾಸಕರ ಸಮ್ಮುಖದಲ್ಲಿ ಮಾಡಲಾಯಿತು.
ಮಾನ್ಯ ಶಾಸಕರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ತೆಂಗಿನಳ್ಳಿ ಬರುವ ಕೀಟ ಮತ್ತು ರೋಗಗಳನ್ನು ಸಮರೋಪಾದಿಯಲ್ಲಿ ಪ್ರತಿ ರೈತರು ಹತೋಟಿಗೆ ತಂದಾಗ ಮಾತ್ರ ತೆಂಗಿನಲ್ಲಿ ಪ್ರಗತಿ ಕಾಣಲು ಸಾಧ್ಯ ಮತ್ತು ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು. ತೋಟಗಾರಿಕೆ ಉಪ ನಿರ್ದೇಶಕರಾದ ಶ್ರೀ ಯೋಗೇಶ್ ರವರು ಮಾತನಾಡಿ ಮಾನ್ಯ ಶಾಸಕರು ಹಾಗೂ ಅಧ್ಯಕ್ಷರು ಕರ್ನಾಟಕ ಗೃಹ ಮಂಡಳಿ ರವರು ಅರಸೀಕೆರೆ ತಾಲೂಕಿನಲ್ಲಿ ಚಾಲನೆ ನೀಡಿದಂತಹ ಕಾಯಕಲ್ಪ ರಸಾಯಾತ್ರೆಯಂತೆ ಜಿಲ್ಲೆಯ ಅದ್ಯಂತ ಆರು ಪ್ರಚಾರ ವಾಹನಗಳನ್ನು ಆಯಾ ತಾಲೂಕಿನ ಮಾನ್ಯ ಶಾಸಕರು ಹಾಗೂ ಮಾನ್ಯ ಸಂಸದರ ಉಪಸ್ಥಿತಿಯಲ್ಲಿ ಆಯೋಜಿಸಿ ಉದ್ಘಾಟಿಸಿ ತೆಂಗು ರೋಗ ಕೀಟ ಹಾಗೂ ಉತ್ತಮ ತೆಂಗು ಬೇಸಾಯ ಪರಿಸ್ಥಿತಿಗಳ ಬಗ್ಗೆ. ಪ್ರಚಾರ ಮಾಡಲು ಹಾಗೂ ಕಪ್ಪು ತಲೆ ಹುಳ ಬಾಚಿತ ತೋಟಗಳಿಗೆ ಗೊನಿಯೋಜಸ್ ಪರೋಪ ಜೀವಿಯನ್ನು ಹಾಗೂ ಕಾಂಡಸೂರುವ ರೋಗಕ್ಕೆ ಉಪಚರಿಸಲು ಹಾಕ್ಸಿಕೋನೋ ಚೋಲ್ ರೋಗ ನಾಶಗಳನ್ನು ಸಹ ವಿತರಿಸಲು ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.

ಏ ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಶ್ರೀಮತಿ ಸೀಮಾ ಬಿ.ಎ. ಚಂಗೂ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಕಾಂತರಾಜು ವಿಷಯ ತಜ್ಞರಾದ ಡಾ. ಜಗದೀಶ್ ಸಹಾಯಕ ನಿರ್ದೇಶಕರಾದ ಶ್ರೀಯುತ ಶಿವಕುಮಾರ್ ರವರು ತೋಟಗಾರಿಕೆ ಇಲಾಖೆಗಳು ಹಾಗೂ ಸಿಬ್ಬಂದಿಗಳು ಗ್ರಾಮ ಪಂಚಾಯಿತಿಯ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ವಿವಿಧ ಹಳ್ಳಿಗಳಿಂದ ಆಕಮಿಸಿದಂತಹ ಸುಮಾರು 150ಕ್ಕೂ ಹೆಚ್ಚು ರೈತರು ಹಾಜರಿದ್ದರು.

ವರದಿ: ರಾಜು ಅರಸಿಕೆರೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!