ಬೆಂಗಳೂರು : ಕನ್ನಡ ಚಿತ್ರರಂಗ ಮಾಣಿಕ್ಯ.. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 50ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದ ಹಿನ್ನಲೆ ಅಪ್ಪು ಕುಟುಂಬ ಬೆಳಗ್ಗೆಯೇ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.
ಪ್ರತಿ ವರ್ಷವೂ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ ಅಂದ್ರೆ ಅವರ ನಿವಾಸದ ಮುಂದೆ ಜನ ಜಾತ್ರೆ ನಡೆಯುತ್ತಿತ್ತು.ಆದರೆ ಮೂರು ವರ್ಷಗಳಿಂದ ಅಭಿಮಾನಿಗಳು ಅಪ್ಪು ಅವರ ಮನೆಗೆ ಹೋಗುವ ಬದಲು ಅಪ್ಪು ಅವರ ಸ್ಮಾರಕದ ಬಳಿ ಹೋಗುವಂತಾಗಿದೆ.
ಈಗಾಗಲೇ ಬೆಳಗ್ಗೆಯಿಂದಲೇ ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸ್ಮಾರಕದ ಬಳಿ ಬಂದು ನಮನವನ್ನು ಸಲ್ಲಿಸಿದ್ದು, ಇದೀಗ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ಅವರ ಕುಟುಂಬಸ್ಥರು ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ದಾರೆ.
ಅಪ್ಪು ಸಮಾಧಿಗೆ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಶಿವಣ್ಣ ದಂಪತಿ ಹಾಗೂ ಮಕ್ಕಳು, ರಾಘಣ್ಣ ದಂಪತಿ ಮತ್ತು ಮಕ್ಕಳು ಸೇರಿದಂತೆ ರಾಜ್ ಕುಟುಂಬದ ಅನೇಕ ಮಂದಿ ಅಪ್ಪು ಸ್ಮಾರಕಕ್ಕೆ ನಮನ ಸಲ್ಲಿಸಿ ಪೂಜೆ ಮಾಡಿದ್ದಾರೆ.
ಇನ್ನು ವಿಶೇಷ ಅಂದರೆ ಅಪ್ಪು ಅಭಿಮಾನಿಗಳು ಅನ್ನದಾನ, ರಕ್ತದಾನ, ನೇತ್ರದಾನ ನೋಂದಣಿ ಸೇರಿದಂತೆ ಅನೇಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.